ಸೋಮವಾರಪೇಟೆ: ನಿಧಾನವಾಗಿ ಒಣಗುತ್ತಿದ್ದ ಶುಂಠಿ ಬೆಳೆ ಇತ್ತೀಚಿನ ದಿನಗಳಲ್ಲಿ ವೇಗವಾಗಿ ಒಣಗುತ್ತಿದ್ದು, ಬೆಳೆಗಾರರು ಆತಂಕಗೊಂಡಿದ್ದಾರೆ.

ಹಿಂದಿನ ಸಾಲಿನಲ್ಲಿ ಶುಂಠಿ ಬೆಳೆಗೆ ಉತ್ತಮ ಬೆಲೆ ಸಿಕ್ಕಿದ್ದರಿಂದ ಬೆಳೆಗಾರರು ಈ ಬಾರಿ ಹೆಚ್ಚಿನ ಕೃಷಿ ಭೂಮಿಯನ್ನು ಗುತ್ತಿಗೆಗೆ ಪಡೆದು ಶುಂಠಿ ಹಾಕಿದ್ದರು. ಆದರೆ, ಈಗ ಬೆಲೆ ಕಡಿಮೆಯಾಗಿರುವ ಜೊತೆಗೆ ಬೆಳೆಗೆ ಹೊಸ ರೋಗ ತಗುಲಿರುವುದು ಬೆಳೆಗಾರರ ಆತಂಕವನ್ನು ಹೆಚ್ಚಿಸಿದೆ.

ರೋಗ ಅಂಟಿದ ಶುಂಠಿ ಗಿಡಗಳು ಒಂದು ವಾರದೊಳಗೆ ಪೂರ್ತಿ ಹಣ್ಣಾಗಿ ಒಣಗುತ್ತಿದೆ. ಈ ರೋಗ ಕಾಣಿಸಿಕೊಂಡ ಸ್ಥಳದಲ್ಲಿ ಅತ್ಯಂತ ವೇಗವಾಗಿ ಬೇರೆ ಬೇರೆ ಗಿಡಗಳಿಗೆ ಹಬ್ಬುತ್ತಿದ್ದು, ಏನು ಮಾಡಬೇಕೆಂಬುದು ತೋಚದೆ ಬೆಳೆಗಾರರು ಪರದಾಡುತ್ತಿದ್ದಾರೆ. ಇದಕ್ಕೆ ಪರಿಹಾರ ಏನು ಎಂಬುದು ಯಾರಿಗೂ ಗೊತ್ತಾಗದೆ ಗೊಂದಲಕ್ಕೆ ಒಳಗಾಗಿದ್ದಾರೆ.

‘ನಿರಂತರವಾಗಿ ಔಷಧೋಪಚಾರ ಮಾಡಿಕೊಂಡು ಬರುತ್ತಿರುವ ಬೆಳೆಗೆ ಯಾವುದೇ ರೋಗ ಬಂದಿಲ್ಲ’ ಎಂದು ಅಧಿಕಾರಿಗಳು ಹೇಳುತ್ತಾರೆ. ಆಲೂರುಸಿದ್ಧಾಪುರ, ಗಣಗೂರು, ಗೋಣಿಮರೂರು, ಅಬ್ಬೂರುಕಟ್ಟೆ, ಬಾಣಾವಾರ ಸೇರಿದಂತೆ ಹಲವು ಗ್ರಾಮಗಳಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ.

‘ಹಿಂದಿನ ವರ್ಷ ಸರಿಯಾಗಿ ಮಳೆ ಬಾರದೆ, ಬರಗಾಲ ಆವರಿಸಿತ್ತು. ಹೆಚ್ಚಿನವರು ಅಧಿಕ ಬೆಲೆ ನೀಡಿ ಬೀಜದ ಶುಂಠಿಯನ್ನು ಖರೀದಿಸಿ ನಾಟಿ ಮಾಡಿದ್ದರು. ಆದರೆ, ಇದ್ದಕ್ಕಿದ್ದಂತೆ ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿದು ಮತ್ತು ಕೆರೆ, ನದಿಗಳಲ್ಲಿ ನೀರು ಬತ್ತಿದ ಪರಿಣಾಮ ಹಾಕಿರುವ ಬೆಳೆಯನ್ನು ಉಳಿಸಿಕೊಳ್ಳಲು ಸಾಕಷ್ಟು ಪರಿಶ್ರಮ ಹಾಕಿ ಬೆಳೆ ಉಳಿಸಿಕೊಂಡಿದ್ದರು. ಈಗ ಬಂದಿರುವ ರೋಗದಿಂದ ಹಾಕಿದ ಬಂಡವಾಳ ಕೈಸೇರುವುದೇ ಎಂಬ ಯೋಚನೆಯಲ್ಲಿ ಬೆಳೆಗಾರರು ಇದ್ದಾರೆ.

ಬೀಜದ ಶುಂಠಿಗೆ ಕಳೆದ ವರ್ಷ ₹3,500ರಿಂದ ₹4 ಸಾವಿರದವರೆಗೆ ಹಣ ನೀಡಿ ಖರೀದಿಸಲಾಗಿದೆ. ಸದ್ಯ ಮಾರುಕಟ್ಟೆಯಲಿ ಶುಂಠಿಗೆ ₹1,600 ಬೆಲೆ ಇದೆ. ಹೆಚ್ಚು ಮಳೆ ಪ್ರದೇಶ ಹಾಗೂ ನದಿ, ತೊರೆಗಳ ಅಕ್ಕಪಕ್ಕದ ಕೆಲವು ಪ್ರದೇಶಗಳಲ್ಲಿ ಕೊಳೆರೋಗಕ್ಕೀಡಾದ ಬೆಳೆಯನ್ನು ರೈತರು ಸಿಕ್ಕಿದ ಬೆಲೆಗೆ ಕಿತ್ತು ಮಾರಾಟ ಮಾಡಿದ್ದರು.

ಗಣಗೂರಿನ ಶುಂಠಿ ಬೆಳೆಗಾರ ಕಿರಣ್ ಮಾತನಾಡಿ, ‘ಶುಂಠಿಗೆ ಕಾಣಿಸಿಕೊಂಡ ರೋಗಬಾಧೆಯಿಂದ ಬೆಳೆ ನಷ್ಟವಾಗಿದೆ. ಗಿಡಗಳು ಹಳದಿ ಬಣ್ಣಕ್ಕೆ ತಿರುಗುತ್ತಿದ್ದು, ಕೆಲವೇ ದಿನಗಳಲ್ಲಿ ಇಡೀ ಕೃಷಿ ಭೂಮಿಯನ್ನು ಆಕ್ರಮಿಸಿಕೊಳ್ಳುತ್ತಿದೆ. ಕಾಯಿಲೆ ಯಾವುದೆಂದು ತಿಳಿದುಬರುತ್ತಿಲ್ಲ. ಈಗಾಗಲೇ ಬೆಳೆಗಾರರು ನಷ್ಟಕ್ಕೊಳಗಾಗಿದ್ದು, ಮತ್ತೊಮ್ಮೆ ಬೆಳೆಯನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸರ್ಕಾರ ಶುಂಠಿ ಬೆಳೆಗಾರರ ಹಿತ ಕಾಯುವ ಕೆಲಸ ಮಾಡಬೇಕು’ ಎಂದು ಒತ್ತಾಯಿಸಿದರು.

‘ಹವಾಮಾನ ವೈಪರೀತ್ಯ, ಫಂಗಸ್ನಿಂದ ಹೊಸ ರೋಗ ಬಂದಿರುವುದಾಗಿ ವಿಜ್ಞಾನಿಗಳು ತಿಳಿಸಿದ್ದಾರೆ. ಶುಂಠಿಗೆ ಯಾವ ರೋಗ ಬಂದಿದೆ ಎಂದು ತಿಳಿಯಲು ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಇನ್ನೂ ಮಾಹಿತಿ ಬಂದಿಲ್ಲ. ಹೀಗಾಗಿ, ಮುನ್ನೆಚ್ಚರಿಕೆಯಾಗಿ ಯಾವ ಔಷಧಿ ಬಳಸಬೇಕೆಂದು ತಿಳಿದುಬಂದಿಲ್ಲ. ಮುಂದಿನ ಕೆಲವೇ ದಿನಗಳಲ್ಲಿ ರೈತರಿಗೆ ಸೂಕ್ತ ಮಾಹಿತಿ ನೀಡಲಾಗುವುದು’ ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರಾದ ಲಿಖಿತಾ ಪ್ರತಿಕ್ರಿಯಿಸಿದರು.

ಈ ರೋಗದ ಬಗ್ಗೆ ಅಧಿಕಾರಿಗಳಿಗೂ ಸೂಕ್ತ ಮಾಹಿತಿ ಇಲ್ಲ ಔಷಧೋಪಚಾರ ಮಾಡಲು ತೋಚದೆ ರೈತರು ಕಂಗಾಲು ಸಮರ್ಪಕ ಮಾಹಿತಿ ನೀಡುವಂತೆ ಬೆಳೆಗಾರರ ಒತ್ತಾಯ

‘8 ತಿಂಗಳು ದಾಟಿದ್ದರೆ ನಷ್ಟ ಇಲ್ಲ’

ಹೊಸದಾಗಿ ಬಂದಿರುವ ರೋಗದ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಯೋಗೇಶ್ ‘ಇದು ಎಲೆಚುಕ್ಕಿರೋಗದ ಒಂದು ವಿಧ ಎಂದು ತೋರುತ್ತದೆ. ಈಗಾಗಲೇ ರೋಗ ಬಂದಿರುವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 8 ತಿಂಗಳು ದಾಟಿರುವ ಶುಂಠಿ ಗಿಡಗಳಲ್ಲಿ ಇಳುವರಿಗೆ ಸಮಸ್ಯೆ ಆಗುವುದಿಲ್ಲ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.