ಸುಂಟಿಕೊಪ್ಪ: ಕೊಡಗು ಜಿಲ್ಲೆಯ ಕೆಲವೆಡೆ ಗುರುವಾರ ಬಿರುಸಿನ ಮಳೆ ಸುರಿಯಿತು.

ಸುಂಟಿಕೊಪ್ಪದಲ್ಲಿ ಸುರಿದ ಮಳೆಗೆ ಹಲವು ಕಡೆಗಳಲ್ಲಿ ಮನೆಗಳಿಗೆ ನುಗ್ಗಿತು. ಇಲ್ಲಿನ ಉಲುಗುಲಿಯಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಲೇಔಟ್ನಿಂದ ಮಳೆ ರಭಸಕ್ಕೆ ಉಲುಗುಲಿ ರಸ್ತೆಯಲ್ಲಿ (ಮಾರುಕಟ್ಟೆ) ಕೆಸರು ತುಂಬಿದ ನೀರು ಹರಿದು ಸಂಚಾರ ಅಸ್ತವ್ಯಸ್ತಗೊಂಡಿತು.

ಯೋಧ ನಾಸೀರ್ ಹುಸೈನ್ ಅವರ ಮನೆಗೆ ಮತ್ತೊಮ್ಮೆ ನೀರು ನುಗ್ಗಿ, ಕುಟುಂಬದ ಸದಸ್ಯರು ಪರದಾಡಿದರು. ಈ ಬಾರಿಯೂ ಪಿಡಿಒ ಲೋಕೇಶ್ ಸಹಾಯ ಮಾಡಲಿಲ್ಲ ಎಂದು ಅವರು ದೂರಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಯೋಧ ನಾಸೀರ್ ಹುಸೇನ್ ಅವರ ಪತ್ನಿ ಅಸ್ಮಾ,‘ಗ್ರಾಮ ಪಂಚಾಯಿತಿ ಪಿಡಿಒ ಲೋಕೇಶ್ ಮಳೆಯಿಂದಾದ ಸಮಸ್ಯೆಗೆ ಸ್ಪಂದಿಸಲಿಲ್ಲ. 4 ವರ್ಷಗಳಿಂದಲೂ ಗಮನ ಹರಿಸುತ್ತಿಲ್ಲ. ಮುಂದೆ ಲೋಕಾಯುಕ್ತಕ್ಕೆ ದೂರು ನೀಡುವೆ’ ಎಂದು ತಿಳಿಸಿದರು.

ಮಳೆಗೆ ಸುಂಟಿಕೊಪ್ಪ ಪಟ್ಟಣವೇ ಕೆಸರು ನೀರಿನಿಂದ ಆವೃತ್ತವಾಗುತ್ತಿದ್ದರೂ ಸಣ್ಣ ಪ್ರಮಾಣದ ಪರಿಹಾರಕ್ಕೂ ಗ್ರಾಮ ಪಂಚಾಯತಿ ಮುಂದಾಗುತ್ತಿಲ್ಲ. ಹೀಗೆ ಮುಂದುವರಿದರೆ ವಿವಿಧ ಸಂಘ ಸಂಸ್ಥೆಯ ಸಹಕಾರದೊಂದಿಗೆ ಗ್ರಾಮ ಪಂಚಾಯಿತಿಯ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಮಾರುಕಟ್ಟೆ ರಸ್ತೆಯ ನಿವಾಸಿಗಳು ಎಚ್ಚರಿಕೆ ನೀಡಿದರು.

ಗೋಣಿಕೊಪ್ಪಲಿನಲ್ಲಿ ಧಾರಾಕಾರ ಮಳೆ

ಗೋಣಿಕೊಪ್ಪಲು: ಪಟ್ಟಣದಲ್ಲಿ ಗುರುವಾರ ಸುರಿದ ಧಾರಾಕಾರ ಮಳೆಗೆ ಶಾಲಾ ಕಾಲೇಜುಗಳ ಮೈದಾನಗಳು ಕೆರೆಯಂತಾದರೆ, ಚರಂಡಿಗಳು ಉಕ್ಕಿ ಹರಿದವು. ರಸ್ತೆ ಬದಿಯ ಚರಂಡಿಗಳು ತುಂಬಿ ರಸ್ತೆ ಮೇಲೆಲ್ಲ ನೀರು ಹರಿದಾಡಿತು.

ಪೊನ್ನಂಪೇಟೆ ಪಟ್ಟಣಕ್ಕೆ ಬಿದ್ದ ಭಾರಿ ಮಳೆಗೆ ಕರ್ನಾಟಕ ಪಬ್ಲಿಕ್ ಶಾಲೆಯ ಟರ್ಫ್ ಮೈದಾನ ಅಕ್ಷರಶಃ ಕೆರೆಯಂತಾಯಿತು. ಹಸಿರು ಬಣ್ಣದ ಟರ್ಫ್ ತುಂಬ ನೀರು ತುಂಬಿ ಈಜು ಕೊಳದಂತೆ ಕಂಡು ಬರುತ್ತಿತ್ತು. ಈ ನಡುವೆ ಆರಂಭಗೊಂಡಿದ್ದ ಮೈಸೂರು ವಿಭಾಗ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಹಾಕಿ ಪಂದ್ಯಕ್ಕೆ ಕಾರ್ಮೋಡ ಕವಿದಿತ್ತು. ಧಾರಾಕಾರ ಮಳೆಗೆ ಕೊಡಗು ಮತ್ತು ಹಾಸನದ ತಂಡದ ನಡುವಿನ ಆಟವನ್ನು ಅರ್ಧ ಗಂಟೆಗೂ ಹೆಚ್ಚು ಸಮಯ ಸ್ಥಗಿತ ಗೊಳಿಸಲಾಗಿತ್ತು. ಬಳಿಕ ಮಳೆ ನಿಂತ ಮೇಲೆ ಮೈದಾನದ ನೀರನ್ನು ಹೊರ ಹಾಕಿ ಆಟ ಆಡಿಸಲಾಯಿತು.

ಮಳೆಯಿಂದಾಗಿ ತಡವಾಗಿ ಆರಂಭಗೊಂಡ ಮೈಸೂರು ಮತ್ತು ಮಂಗಳೂರು ತಂಡದ ನಡುವಿನ 2ನೇ ಪಂದ್ಯಕ್ಕೆ ಬೆಳಕಿನ ಕೊರತೆ ಎದುರಾಯಿತು. ಆದರೂ, ಮಂದ ಬೆಳಕಿನಲ್ಲಿಯೇ ಆಟ ಮುಂದವರಿಯಿತು. ಎರಡು ತಂಡಗಳಿಗೆ ನೀಡಿದ ಫೆನಾಲ್ಟಿ ಸ್ಟ್ರೋಕ್ ಅನ್ನು ಒಂದು ಕಡೆಯ ಗೋಲ್ ಪೋಸ್ಟ್ ಗೆ ಮಾತ್ರ ಹೊನಲು ಬೆಳಕಿನ ವ್ಯವಸ್ಥೆ ಮಾಡಿ ಆಟ ಮುಗಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.