ವಿರಾಜಪೇಟೆ: ಪಟ್ಟಣದ ಕೊಡವ ಸಮಾಜದ ಬಳಿಯಿರುವ ಪೂಮಾಲೆ ಕೋಲ್ ಮಂದ್‌ನಲ್ಲಿ ಆರಾಯಿರ ನಾಡಿನ ಹುತ್ತರಿ ಕೋಲಾಟ ಶುಕ್ರವಾರ ನಡೆಯಿತು.

ಈ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಎಡೆನಾಡ್, ಬೇಟೋಳಿನಾಡ್, ಬೈರವನಾಡ್, ಪೊರವನಾಡ್ ಸೇರಿದಂತೆ ಅರಾಯಿರನಾಡ್ ಒಟ್ಟು 17 ಗ್ರಾಮಗಳಿಂದ ಸಾಂಪ್ರದಾಯಿಕ ಉಡುಪುಗಳಲ್ಲಿ ತಕ್ಕ ಮುಖ್ಯಸ್ಥರು ಬಂದಿದ್ದರು. ವಿವಿಧ ನಾಡಿನ ಗ್ರಾಮಸ್ಥರು ಪುತ್ತರಿ ಕೋಲಾಟ, ಪರೆಕಳಿ, ವಾಲಗತಾಟ್‌ಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು.

ವಾದ್ಯಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಕೋಲಾಟವನ್ನು ಪ್ರದರ್ಶಿಸುತ್ತಿದ್ದರು. ವಿಶೇಷವಾಗಿ ಕೋಲಾಟ, ಪರೆಯ ಕಳಿ ಜನಮನ ಸೆಳೆಯಿತು.

ಪರೆಯ ಕಳಿ, ಕೋಲಾಟ್ ಮತ್ತು ವಾಲಗತಾಟ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಕೊಡಗಿನ ಸಾಂಪ್ರದಾಯಕ ಉಡುಗೆ ತೊಟ್ಟು ಆಗಮಿಸಿದ ಮಹಿಳೆಯರಿಗೆ ವಿಶೇಷ ಬಹುಮಾನ ನೀಡಿ ಗೌರವಿಸಲಾಯಿತು.

ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಪೂಮಾಲೆ ಕೋಲ್ ಮಂದ್‌ನಲ್ಲಿ ಮಂದ್ ಅಧ್ಯಕ್ಷ ಅಜ್ಜಿನಿಕಂಡ ಸುಧೀರ್ ಅವರು ಧ್ವಜಾರೋಹಣ ನೆರವೇರಿಸಿ, ಮಂದ್ ಪೂಜೆ ಸಲ್ಲಿಸಿದರು.

ಈ ಸಂದರ್ಭ ಪೂಮಾಲೆ ಮಂದ್‌ನ ಉಪಾಧ್ಯಕ್ಷ ವಾಟೇರಿರ ಶಂಕರಿ ಪೂವಯ್ಯ, ಮರಣನಿಧಿ ಫಂಡ್ ಅಧ್ಯಕ್ಷ ಚೆಂದಂಡ ಜಿ.ಪೊನ್ನಪ್ಪ, ನಾಡ್ ತಕ್ಕ ಕೊಳುಮಂಡ ಕಾರ್ಯಪ್ಪ, ಮುಕ್ಕಾಟ್ಟಿರ ಮುತ್ತು ಕುನ್ಞಿ, ಅಮ್ಮಣಕುಟ್ಟಂಡ ವಸಂತ ಕಟ್ಟಿ, ಪೊನ್ನಕಚ್ಚಿರ ಸೋಮಯ್ಯ, ಕ್ರೀಡಾ ಸಮಿತಿಯ ಪುಗ್ಗೇರ ಎಸ್.ನಂದ ಮುಂತಾದವರು ಇದ್ದರು.

ಹಾಲುಗುಂದ, ಒಂಟಿಯಂಗಡಿ, ದೇವಣಗೇರಿ, ತಲಗಟ್ಟಕೇರಿ, ಹಚ್ಚಿನಾಡು, ಕುಕ್ಲೂರು, ಚೆಂಬೆಬೆಳ್ಳೂರು, ಐಮಂಗಲ, ಮಗ್ಗುಲ, ವೈಪಡ, ಆರ್ಜಿ, ಬೇಟೋಳಿ, ಬಿಟ್ಟಂಗಾಲ, ನಾಂಗಾಲ, ಬಾಳುಗೋಡು ಸೇರಿದಂತೆ ವಿವಿಧ ಗ್ರಾಮಗಳ ಗ್ರಾಮಸ್ಥರು ಸೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.