ವಿರಾಜಪೇಟೆ: ಐದು ಮಂದಿ ಶುಕ್ರವಾರ ಸಂಜೆ ವ್ಯಕ್ತಿಯನ್ನು ಅಪಹರಿಸಿ ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾದ ವ್ಯಕ್ತಿ ತನ್ನ ಪತ್ನಿ ಹಾಗೂ ಅಪಹರಿಸಿದವರ ವಿರುದ್ಧ ಇಲ್ಲಿನ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಮೀಪದ ಹೆಗ್ಗಳ ಗ್ರಾಮದ ನಿರ್ಮಲಗಿರಿಯ ನಿವಾಸಿ ಪಿ.ಟಿ.ಶಾಜಿ (50) ಹಲ್ಲೆಗೊಳಗಾದ ವ್ಯಕ್ತಿ.

‘ಪತ್ನಿ ಶೈನಿ ನೀಡಿದ ಕುಮ್ಮಕ್ಕಿನಿಂದ ಮೂಲತಃ ಕೇರಳ ನಿವಾಸಿ, ಹೆಗ್ಗಳದ ಬೂದಿಮಾಳದಲ್ಲಿ ನೆಲೆಸಿರುವ ಎಬಿ ಹಾಗೂ ಇತರೆ ನಾಲ್ಕು ಮಂದಿ ಸೇರಿ ಕಾರಿನಲ್ಲಿ ಅಪಹರಿಸಿ, ಹಲ್ಲೆ ನಡೆಸಿ ಬಳಿಕ ಮಾಕುಟ್ಟದಲ್ಲಿ ಹೊರ ತಳ್ಳಿ ಹೋದರು’ ಎಂದು ಪಿ.ಟಿ.ಶಾಜಿ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಹಲ್ಲೆಗೊಳಗಾದ ಶಾಜಿ ಅವರು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.