ನಾಪೋಕ್ಲು: ಮೈಸೂರಿನಲ್ಲಿ ಈಚೆಗೆ ನಡೆದ ಮಿಸ್ ಮೈಸೂರು ಫ್ಯಾಷನ್ ಸ್ಪರ್ಧೆಯಲ್ಲಿ ಕೊಡಗಿನ ಸುರಕ್ಷಿತ ಮಿಸ್ ಮೈಸೂರು ಕಿರೀಟ ಧರಿಸಿದ್ದಾರೆ.

ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಈಚೆಗೆ ಎಸ್.ಎಸ್ ಕಲಾಸಂಗಮದ ವತಿಯಿಂದ ನಡೆದ ಮಿಸ್ ಮೈಸೂರು ಫ್ಯಾಷನ್ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 60ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು.

ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಸಿಎ ವ್ಯಾಸಂಗ ಮಾಡುತ್ತಿರುವ ಸುರಕ್ಷಿತ, ನಾಪೋಕ್ಲು ಬಳಿಯ ಚೆಯ್ಯಂಡಾಣೆಯ ಕೋಕೇರಿಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಬಿದ್ದಂಡ ರಾಜ ಉತ್ತಪ್ಪ ಹಾಗೂ ಸಿಂತಿಯ ಉತ್ತಪ್ಪ ಪುತ್ರಿ. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ 20 ಸ್ಪರ್ಧಿಗಳಲ್ಲಿ ಸಾಂಪ್ರದಾಯಿಕ ಸುತ್ತಿನಲ್ಲಿ ಕೊಡವ ಸೀರೆ ಧರಿಸಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.