ಭಾರಿ ಗಾತ್ರದ ರಸ್ತೆ ಗುಂಡಿ ಮಡಿಕೇರಿಯಲ್ಲಿರುವುದು ಸೋಮವಾರ ಕಂಡು ಬಂತು
ಮಳೆ ಕಾರಣಕ್ಕೆ ಗುಂಡಿ ಮುಚ್ಚಿಲ್ಲ ಎನ್ನುವ ಅಧಿಕಾರಿಗಳು ಶಾಶ್ವತ ರಸ್ತೆ ಕಾಮಗಾರಿ ನಡೆಸಲು ಇಲ್ಲ ಒಲವು ಪ್ರತಿ ವರ್ಷವೂ ನಡೆದಿದೆ ಗುಂಡಿ ಮುಚ್ಚುವ ಕೆಲಸ
ಕರಗಗಳು ಸಂಚರಿಸುವ ಪ್ರತಿ ಮಾರ್ಗದಲ್ಲೂ ಗುಂಡಿಗಳನ್ನು ಮುಚ್ಚಬೇಕು. ಕಲ್ಲುಗಳನ್ನು ತೆರವು ಮಾಡಿ ಕರಗಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು
ಜಿ.ವಿ.ರವಿಕುಮಾರ್ ಕಂಚಿ ಕಾಮಾಕ್ಷಿ ದೇವಾಲಯದ ಸಮಿತಿಯ ಗೌರವ ಅಧ್ಯಕ್ಷ
ಗುಂಡಿ ಮುಚ್ಚಲು ₹ 18 ಲಕ್ಷ ಅಂದಾಜು; ಪೌರಾಯುಕ್ತ
ಈ ಕುರಿತು ‘ಪ್ರಜಾವಾಣಿ’ ಪೌರಾಯುಕ್ತ ಎಚ್.ಆರ್.ರಮೇಶ್ ಅವರನ್ನು ಸಂಪರ್ಕಿಸಿದಾಗ ಅವರು ‘ಗುಂಡಿ ಮುಚ್ಚುವುದಕ್ಕೆಂದೇ ₹ 18 ಲಕ್ಷವನ್ನು ಅಂದಾಜು ಮಾಡಲಾಗಿದೆ. ಎಲ್ಲ ಸಿದ್ಧತೆಗಳೂ ನಡೆದಿವೆ. ಆದರೆ ಮತ್ತೆ ಮಳೆ ಶುರುವಾಗಿದ್ದರಿಂದ ಕಾಮಗಾರಿ ಆರಂಭಿಸಲು ಹಿಂದೇಟು ಹಾಕುತ್ತಿದ್ದೇವೆ’ ಎಂದು ಹೇಳಿದರು. ಈ ಬಾರಿ ಕೇವಲ ವೆಟ್‌ಮಿಕ್ಸ್ ಹಾಕದೇ ಎಲ್ಲ ಗುಂಡಿಗಳನ್ನೂ ಡಾಂಬರಿನಿಂದಲೇ ಮುಚ್ಚಲು ಸಿದ್ಧತೆ ನಡೆಸಲಾಗಿದೆ. ಇದರಿಂದ ಗುಂಡಿ ಮುಚ್ಚಿ ದಸರಾ ಮುಗಿದ ಕೂಡಲೇ ಮತ್ತೆ ಗುಂಡಿ ಬೀಳುವುದಿಲ್ಲ ಎಂಬ ವಿಶ್ವಾಸ ಅಧಿಕಾರಿಗಳದ್ದಾಗಿದೆ.