ಸೋಮವಾರಪೇಟೆ: ತಾಲ್ಲೂಕಿನ ಮೂವತ್ತೊಕ್ಲು ಗ್ರಾಮದ ನಿವಾಸಿ ಜಾನಕಿ ಸಿಡಿಲು ಬಡಿದು ಭಾನುವಾರ ಮೃತಪಟ್ಟ ಪರಿಣಾಮ ಶಾಸಕ ಮಂತರ್ ಗೌಡ ಮಂಗಳವಾರ ಮನೆಗೆ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಇದರೊಂದಿಗೆ ಕಿರಗಂದೂರು ಪಂಚಾಯಿತಿ ವ್ಯಾಪ್ತಿಯ ಹಳ್ಳಿಬೆಟ್ಟದಲ್ಲಿ ಸಿಡಿಲು ಬಡಿತಕ್ಕೆ ಹಾನಿಗೊಳಗಾದ ಪುರಂದರ ಎಂಬುವವರ ಮನೆಗೆ ಶಾಸಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕುಟುಂಬದ ಸದಸ್ಯರಿಗೆ ಸಾಂತ್ವನ ತಿಳಿಸಿದ ಅವರು, ಕೂಡಲೇ ಎರಡೂ ಕುಟುಂಬಗಳಿಗೆ ಸರ್ಕಾರದಿಂದ ಆಗಬೇಕಾದ ಕ್ರಮಗಳನ್ನು ಕೈಗೊಳ್ಳಲು ತಹಶೀಲ್ದಾರ್ ಎಸ್.ನರಗುಂದ ಅವರಿಗೆ ಸೂಚನೆ ನೀಡಿದರು.

ಮೃತರ ಮರಣೋತ್ತರ ಪರೀಕ್ಷೆ ವರದಿ ಅಧಾರಿಸಿ ಸರ್ಕಾರ ಸೂಕ್ತ ಪರಿಹಾರ ಕಲ್ಪಿಸಲಿದೆ. ಮನೆ ಹಾನಿಯಾಗಿರುವ ಬಗ್ಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ವರದಿ ನೀಡಿದ ನಂತರ ಪರಿಹಾರ ಸಿಗಲಿದೆ ಎಂದು ತಹಶೀಲ್ದಾರ್ ನರಗುಂದ ಕುಟುಂಬಸ್ಥರಿಗೆ ತಿಳಿಸಿದರು.

ಕಂದಾಯ ಅಧಿಕಾರಿ ಪ್ರಹ್ಲಾದ್, ಗ್ರಾಮ ಲೆಕ್ಕಿಗರಾದ ಶ್ವೇತಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.