ಕುಶಾಲನಗರ: ಇಲ್ಲಿಗೆ ಸಮೀಪದ ಕೂಡಿಗೆ ಗ್ರಾಮದಲ್ಲಿ 3 ತಿಂಗಳುಗಳಿಂ ದಲೂ ಮಂಗಗಳ ಹಾವಳಿ ತೀವ್ರವಾ ಗಿದ್ದು, ಗ್ರಾಮಸ್ಥರು ಆತಂಕದಲ್ಲಿ ದಿನ ದೂಡುತ್ತಿದ್ದಾರೆ.

ಈ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರತಿ ನಿತ್ಯವೂ ಮುಖ್ಯ ರಸ್ತೆಯಲ್ಲಿ ಅಡ್ಡಾ ಡುವ ಮಂಗಗಳ ಗುಂಪು, ಮನೆಯಿಂದ ಮನೆಗೆ ಜಿಗಿಯುತ್ತ ಜನರ ನೆಮ್ಮದಿ ಕಸಿದಿದೆ. ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ಎನ್ನದೇ ಸಿಕ್ಕಸಿಕ್ಕವರ ಮೇಲೆ ದಾಳಿ ನಡೆಸುತ್ತಿರುವ ಮಂಗಗಳು ಭಯದ ವಾತಾವರಣ ಸೃಷ್ಟಿಸಿವೆ.

ಸರ್ಕಲ್‌ನಲ್ಲಿರುವ ಹೋಟೆಲ್, ಅಂಗಡಿ ಹಾಗೂ ಸಿಹಿ ತಿನಿಸುಗಳ ಬೇಕರಿಗಳಿಗೆ ದಾಳಿ ಮಾಡುತ್ತ ಕೈಗೆ ಸಿಕ್ಕಿದ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿವೆ. ಅಂಗಡಿಗಳ ಮುಂಭಾಗ ತಿಂಡಿ ತಿನಿಸುಗಳನ್ನು ಚೆಲ್ಲಾಡಿ ಗ್ರಾಹಕ ರಿಗೂ ತೊಂದರೆ ಕೊಡುತ್ತಿವೆ. ಇದರಿಂದ ವ್ಯಾಪಾರಸ್ಥರು ನರಕ ಯಾತನೆ ಅನುಭವಿಸುತ್ತಿದ್ದಾರೆ.

ಪವಿತ್ರ ಗೌಡ ಎಂಬುವರಿಗೆ ಸೇರಿದ ಬೆಕ್ಕನ್ನು ಮಂಗಗಳು ಸಾಯಿಸಿವೆ. ಬೆಳಿಗ್ಗೆ ಹಾಗೂ ಸಂಜೆ ಮಂಗಗಳ ಉಪ ಟಳದಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದ್ದು, ಮಕ್ಕಳು ಕೂಡ ಶಾಲೆಗಳಿಗೆ ತೆರಳಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ.

ಬೇರೆ ಊರುಗಳಲ್ಲಿ ಸೆರೆ ಹಿಡಿದ ಮಂಗಗಳನ್ನು ತಂದು ಕೊಡಗಿನ ಅರಣ್ಯ ಪ್ರದೇಶಗಳಲ್ಲಿ ಬಿಡುತ್ತಿದ್ದು, ಮಂಗಗಳು ಆಹಾರ, ನೀರು ಅರಸಿ ಊರುಗಳತ್ತ ಬರುತ್ತಿವೆ ಎಂದು ಸ್ಥಳೀಯರು ದೂರಿ ದ್ದಾರೆ.

ಕಳೆದ ಕೆಲ ತಿಂಗಳುಗಳಿಂದ ಮಂಗ ಗಳ ಹಾವಳಿ ಜಾಸ್ತಿ ಆಗಿದ್ದು, ರೈತರು ಜಮೀನಿಗೆ ಹೋಗುವಾಗಿಲ್ಲ. ಮಕ್ಕಳು ಮನೆಯಿಂದ ಹೊರ ಬರುವಂತಿಲ್ಲ, ಸುಮ್ಮನೆ ದಾರಿಯಲ್ಲಿ ಹೋಗುವವರ ಮೇಲೆ ಎರಗಿ ಕಚ್ಚಿ ಗಾಯಗೊಳಿಸುತ್ತಿವೆ. ಇದರಿಂದ ಕೂಡಿಗೆ ಗ್ರಾಮದ ಜನರಿಗೆ ನೆಮ್ಮದಿ ಇಲ್ಲದಂತಾಗಿದೆ. ಜನರು ಮನೆಯಿಂದ ಹೊರ ಹೋಗಲು ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ. ಇನ್ನೂ ಈ ಮಂಗಗಳನ್ನು ಸೆರೆ ಹಿಡಿಯಲು ಸಾಕಷ್ಟು ಬಾರಿ ಅರಣ್ಯ ಇಲಾಖೆಗೆ ಮನವಿ ಮಾಡಿದರೂ; ಇದುವರೆಗೂ ಯಾವುದೇ ಪ್ರಯೋಜನ ಆಗಿಲ್ಲ. ಗ್ರಾಮ ಪಂಚಾಯಿತಿ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂರು ತಿಂಗಳಿಂದಲೂ ಗ್ರಾಮದ ಜನರು ಭಯದಲ್ಲೇ ದಿನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಅರಣ್ಯ ಇಲಾಖೆಯ ಸಿಬ್ಬಂದಿ ಊರಿನಲ್ಲಿ ದಿನ ನಿತ್ಯ ಕಾಟ ಕೊಡುತ್ತಿರುವ ಮಂಗಳನ್ನು ಸೆರೆ ಹಿಡಿದು ಗ್ರಾಮದ ಜನರಿಗೆ ನೆಮ್ಮದಿ ವಾತಾವರಣ ಕಲ್ಪಿಸಬೇಕು ಎಂದು ಕೂಡಿಗೆಯ ವ್ಯಾಪಾರಿ ಬಿ.ಬಸಪ್ಪ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.