ಸಿದ್ದಾಪುರ: ಕಾಫಿ ತೋಟದ ಅಂಕುಡೊಂಕಾದ ರಸ್ತೆಗಳಲ್ಲಿ ನಡೆಯುವ ರೊಬಸ್ಟಾ ಕಾರ್ ರ್ಯಾಲಿಗೆ ಭರದ ಸಿದ್ಧತೆ ನಡೆಯುತ್ತಿದ್ದು, ನ.23ರಿಂದ ರ್ಯಾಲಿ ಪ್ರಿಯರಲ್ಲಿ ರೋಮಾಂಚನ ಮೂಡಿಸಲಿದೆ.

ಬ್ಲೂಬ್ರ್ಯಾಂಡ್ ಮೋಟರ್ ಸ್ಪೋರ್ಟ್ಸ್, ರೊಬಸ್ಟಾ ಅಡ್ವೆಂಚರ್ ಅಂಡ್ ಸ್ಪೋರ್ಟ್ಸ್ ಅಕಾಡೆಮಿಯಿಂದ ಪ್ರತಿ ವರ್ಷವೂ ಜಿಲ್ಲೆಯಲ್ಲಿ ರಾಷ್ಟ್ರೀಯ ಮಟ್ಟದ ಕಾರ್ ರ್ಯಾಲಿ ಚಾಂಪಿಯನ್ಶಿಪ್ ನಡೆಯುತ್ತಿದೆ. ಪ್ರಸಕ್ತ ವರ್ಷದ ರ್ಯಾಲಿಗೆ ಬಹುತೇಕ ಸಿದ್ಧತೆಗಳು ಪೂರ್ಣಗೊಂಡಿವೆ.

ಟಾಟಾ ಸಂಸ್ಥೆಯ ಕಾಫಿ ತೋಟದ ನಡುವೆ ಇರುವ ಮಣ್ಣಿನ ರಸ್ತೆಯಲ್ಲಿ ರ್ಯಾಲಿಗೆ ಟ್ರ್ಯಾಕ್ ನಿರ್ಮಿಸಲಾಗುತ್ತಿದ್ದು, ಕೊಡಗಿನ ಕಾಫಿ ತೋಟದ ರಸ್ತೆಯಲ್ಲಿ ದೇಶದ ವಿವಿಧ ಭಾಗದ 60ಕ್ಕೂ ಹೆಚ್ಚು ರ್ಯಾಲಿ ಪಟುಗಳು ಭಾಗವಹಿಸಿ, ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ.

ನ.22ರಂದು ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಅಂದು ರ್ಯಾಲಿಪಟುಗಳು ಎರಡು ಬಾರಿ ಗುರುತಿಸಿರುವ ರಸ್ತೆಯಲ್ಲಿ ಸಂಚರಿಸಿ ರಸ್ತೆಯನ್ನು ಪರಿಶೀಲಿಸುತ್ತಾರೆ. ನ.23ರಂದು ಅಮ್ಮತ್ತಿಯ ಆನಂದಪುರದಿಂದ ಎಮ್ಮೆಗುಂಡಿಯವರೆಗೆ ಮೊದಲ ಹಂತ ಹಾಗೂ ಪಾಲಿಬೆಟ್ಟದಿಂದ ಮಟ್ಟಪರಂಬು ಎಸ್ಟೇಟ್ವರೆಗೆ 2ನೇ ಹಂತ ನಡೆಯಲಿದೆ.

ಎರಡೂ ಹಂತದಲ್ಲಿ 3 ಸುತ್ತು ಇರಲಿದೆ. ನ.24ರಂದು ಹೊಸಳ್ಳಿಯಿಂದ ಮೊದಲನೇ ಹಂತ ಆರಂಭವಾಗಲಿದ್ದು, ಮಾರ್ಗೊಲ್ಲಿಯಲ್ಲಿ 2ನೇ ಹಂತ ಒಟ್ಟು ಸುತ್ತು ರೌಂಡ್ ನಡೆಯಲಿದೆ. ಒಟ್ಟಾರೆ, ವೇಗವಾಗಿ ಸಂಚರಿಸಿದವರು ಚಾಂಪಿಯನ್ ಆಗಲಿದ್ದಾರೆ. ಸ್ಪರ್ಧೆಯಲ್ಲಿ ಐ.ಎನ್.ಆರ್.ಸಿ, ಐ.ಎನ್.ಆರ್.ಸಿ2, ಐ.ಎನ್.ಆರ್.ಸಿ3, ಜಿಪ್ಸಿ, ಕ್ಲಾಸಿಕ್ ವಿಭಾಗಗಳಿದ್ದು, ಪ್ರತಿ ವಿಭಾಗದಲ್ಲೂ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.

ಅಮ್ಮತ್ತಿ ಹಾಗೂ ಪಾಲಿಬೆಟ್ಟ ಭಾಗದ ಟಾಟಾ ಕಾಫಿ ಸಂಸ್ಥೆಯ ಕಾಫಿ ತೋಟದ ರಸ್ತೆ ಮಾರ್ಗದಲ್ಲಿ ರ್ಯಾಲಿ ನಡೆಯಲಿದ್ದು, ರ್ಯಾಲಿಪಟುಗಳಿಗೆ ವಿಭಿನ್ನ ಅನುಭವ ಸಿಗಲಿದೆ. ಈಗಾಗಲೇ ಕಲ್ಲುಗಳನ್ನು ತೆಗೆದು ರಸ್ತೆಯನ್ನು ಸಮತಟ್ಟು, ವಿಸ್ತರಣೆ ಮಾಡಲಾಗಿದೆ. ರ್ಯಾಲಿ ಪಟುಗಳ ಸುರಕ್ಷತೆಯ ನಿಟ್ಟಿನಲ್ಲಿ ಕಳೆದ 10 ದಿನಗಳಿಂದ ರಸ್ತೆ ಕಾಮಗಾರಿ ನಡೆಯುತ್ತಿದೆ. ಕಾಫಿ ತೋಟಗಳ ನಡುವಿನ ಹಸಿರ ಪರಿಸರದಲ್ಲಿ ರ್ಯಾಲಿ ನಡೆಯಲಿದ್ದು, ರಸ್ತೆ ಸಮತಟ್ಟು, ದುರಸ್ತಿ ಮಾಡುವ ಕೆಲಸ ಬಹುತೇಕ ಪೂರ್ಣಗೊಂಡಿದೆ ಎಂದು ರೊಬಸ್ಟಾ ಅಡ್ವೆಂಚರ್ ಅಂಡ್ ಸ್ಪೋರ್ಟ್ಸ್ ಅಕಾಡೆಮಿ ನಿರ್ದೇಶಕ ಕುಞಿಯಂಡ ಮಹೇಶ್ ಅಪ್ಪಯ್ಯ ತಿಳಿಸಿದರು.

ಸ್ಥಳೀಯರಿಗೂ ವೀಕ್ಷಣೆಗೆ ರಸ್ತೆಯ ಕೆಲವು ಭಾಗದಲ್ಲಿ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ 57 ರ್ಯಾಲಿ ಪಟುಗಳು ನೋಂದಣಿಯಾಗಿದ್ದು ಮಹಿಳೆಯರೂ ಪಾಲ್ಗೊಳ್ಳಲಿದ್ದಾರೆ.
–ಉದ್ದಪಂಡ ತಿಮ್ಮಣ್ಣ ರ್ಯಾಲಿ ಪಟು ಸ್ಥಾಪಕ ಅಧ್ಯಕ್ಷ

ರಾಷ್ಟ್ರದಲ್ಲಿ ನಡೆಯುವ 6 ಸುತ್ತುಗಳ ಚಾಂಪಿಯನ್ಶಿಪ್ನಲ್ಲಿ ಕೊಡಗಿನಲ್ಲಿ ನಡೆಯುವ ರೊಬಸ್ಟಾ ರ್ಯಾಲಿ ವಿಭಿನ್ನವಾಗಿದೆ. 60ಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ.
–ಜಮ್ಮಡ ಸೋಮಣ್ಣ ರೊಬಸ್ಟಾ ಅಡ್ವೆಂಚರ್ ಅಂಡ್ ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.