ಶನಿವಾರಸಂತೆ: ದಾಖಲೆ ಇಲ್ಲದ, ಸಂಚಾರ ನಿಯಮ ಉಲ್ಲಂಘಿಸಿದ ಅಶೋಕ ಲೇಲ್ಯಾಂಡ್ ಪಿಕಪ್ ವಾಹನದ ಮಾಲೀಕ, ತಾವರೆಕೆರೆ ಕೊಪ್ಪಲಿನ ಟಿ.ಎನ್.ಭರತ್ ಎಂಬುವರಿಗೆ ಸೋಮವಾರಪೇಟೆ ನ್ಯಾಯಾಲಯವು ಬುಧ ವಾರ ₹16 ಸಾವಿರ ದಂಡ ವಿಧಿಸಿದೆ.

ಮೇ 3ರಂದು ಸರಕು ಸಾಗಣೆ ವಾಹನದಲ್ಲಿ ಜನರನ್ನು ಕರೆದೊಯ್ಯುತ್ತಿದ್ದಾಗ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ತಡೆದು ನಿಲ್ಲಿಸಿದ ಪೊಲೀಸ್ ಇನ್‌ಸ್ಪೆಕ್ಟರ್ ಎಸ್.ಪರಶಿವಮೂರ್ತಿ, ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಆದರೆ, ಅಗತ್ಯ ದಾಖಲೆ ಇರಲಿಲ್ಲ. ಜತೆಗೆ ಭರತ್ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಹೀಗಾಗಿ, ಪೊಲೀಸರು ವಾಹನವನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿದ್ದರು.

ಭರತ್ ₹16 ಸಾವಿರ ದಂಡ ಪಾವತಿಸಿ ವಾಹನವನ್ನು ಬಿಡಿಸಿಕೊಂಡು ಹೋಗಿದ್ದಾರೆ. ಕಾರ್ಯಾಚರಣೆಯಲ್ಲಿ ಪಿಎಸ್ಐ ಗೋವಿಂದ್ ರಾಜ್,
ಸಿಬ್ಬಂದಿ ಲೋಕೇಶ್, ಮುರಳಿ, ಸತೀಶ್, ನಿಶಾ ಹಾಗೂ ಕುಮಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.