ಸಿದ್ದಾಪುರ: ಚೆನ್ನಂಗಿ ಗುಡ್ಲೂರು ಗ್ರಾಮದ ದಿಡ್ಡಳ್ಳಿಯಲ್ಲಿ ಕಾಡಾನೆಗಳ ಹಿಂಡು ಗದ್ದೆಗಳಿಗೆ ನುಗ್ಗಿ ಭತ್ತ ಹಾಗೂ ಶುಂಠಿ ಕೃಷಿಗಳನ್ನು ಧ್ವಂಸಗೊಳಿಸಿದೆ.

ಗುಡ್ಲೂರು ದಿಡ್ಡಳ್ಳಿ ನಿವಾಸಿ ಎಂ. ಎಂ. ಪಾರ್ವತಿ ಎಂಬವರ ನಾಲ್ಕು ಎಕರೆ ಗದ್ದೆಗೆ ಶುಕ್ರವಾರ ಮರಿ ಆನೆಗಳು ಸೇರಿದಂತೆ 5 ಕಾಡಾನೆಗಳು ನುಗ್ಗಿವೆ. ಗದ್ದೆಯಲ್ಲಿ ಕೃಷಿ ಮಾಡಿರುವ ಭತ್ತದ ಪೈರುಗಳನ್ನು ತಿಂದು, ತುಳಿದು ಧ್ವಂಸಗೊಳಿಸಿದ್ದು, ಶುಂಠಿ ಕೃಷಿಯನ್ನು ಕೂಡ ನಾಶ ಮಾಡಿವೆ.

ತೋಟ ಹಾಗೂ ಗದ್ದೆಗಳಿಗೆ ಕಾಡನೆಗಳು ಲಗ್ಗೆಯಿಟ್ಟು ಕೃಷಿ ಫಸಲನ್ನು ನಾಶಮಾಡುತ್ತಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.