ಕೋಲಾರ ನಗರದ ಬಸ್ ನಿಲ್ದಾಣದ ಬಳಿ ಹೋಟೆಲ್ ಮುಂದೆ ಭಾನುವಾರ ಬೆಳಿಗ್ಗೆ ಉಪಾಹಾರ ಸೇವಿಸಿದ ಪರೀಕ್ಷಾರ್ಥಿಗಳು
ಕೋಲಾರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶನಿವಾರ ರಾತ್ರಿ ಕಳೆದ ಪರೀಕ್ಷಾರ್ಥಿಗಳು
ಕೋಲಾರದ ಹಾಲಿಸ್ಟರ್ ಸಮುದಾಯ ಭವನದಲ್ಲಿ ತಂಗಲು ಕೆಲ ಪರೀಕ್ಷಾರ್ಥಿಗಳಿಗೆ ಪೊಲೀಸರಿಂದ ವ್ಯವಸ್ಥೆ
ಕೋಲಾರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪರೀಕ್ಷೆಗೆ ಅಭ್ಯರ್ಥಿಗಳು ಸಿದ್ಧತೆ
ಶೌಚಕ್ಕಾಗಿ ಪರೀಕ್ಷಾರ್ಥಿಗಳು ಪರದಾಟ
ಶನಿವಾರ ಸಂಜೆಯೇ ಕೋಲಾರಕ್ಕೆ ಬಂದಿದ್ದೆ. ಎಲ್ಲೂ ಕೊಠಡಿ ಸಿಗಲಿಲ್ಲ. ರೈಲು ನಿಲ್ದಾಣದ ಆವರಣದಲ್ಲೇ ಮಲಗಿದೆ. ಭಾನುವಾರ ಬೆಳಿಗ್ಗೆ ಇಲ್ಲಿಂದಲೇ ಪರೀಕ್ಷಾ ಕೊಠಡಿಗೆ ತೆರಳಿದೆ. ತುಂಬಾ ಕಷ್ಟವಾಯಿತು ಪರೀಕ್ಷಾರ್ಥಿ ವಿಜಯಪುರ ಜಿಲ್ಲೆ ‘ಶೌಚ ಬಟ್ಟೆ ಬದಲಾಯಿಸಲು ತೊಂದರೆ’ ನಾನೂ ಶನಿವಾರ ಮಧ್ಯಾಹ್ನವೇ ಬಂದಿದ್ದೆ. ಹೊರಗಡೆ ಹೋಗಿ ಮತ್ತೆ ರಾತ್ರಿ ರೈಲು ನಿಲ್ದಾಣಕ್ಕೆ ಬಂದು ಮಲಗಿಕೊಂಡೆ. ನಿಲ್ದಾಣದಲ್ಲೇ ಸಿದ್ಧಗೊಂಡು ಹೋಗಿ ಪರೀಕ್ಷೆ ಬರೆದೆ. ಶೌಚಕ್ಕೆ ಬಟ್ಟೆ ಬದಲಾಯಿಸಲು ತೊಂದರೆ ಆಯಿತು
– ಪರೀಕ್ಷಾರ್ಥಿ, ಯಾದಗಿರಿ ಜಿಲ್ಲೆ ‘ಸೊಳ್ಳೆ ಕಾಟ; ನಿದ್ದೆ ಬರಲಿಲ್ಲ’ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲೇ ರಾತ್ರಿ ಸ್ವಲ್ಪ ಹೊತ್ತು ಓದಿದೆ. ನಂತರ ಇಲ್ಲೇ ಮಲಗಿಕೊಂಡೆ. ಸೊಳ್ಳೆ ಕಾಟದಿಂದ ನಿದ್ದೆ ಬರಲಿಲ್ಲ. ಅಕ್ಕಪಕ್ಕದ ಜಿಲ್ಲೆಗಳಲ್ಲೇ ಪರೀಕ್ಷೆ ಕೇಂದ್ರವಿದ್ದಿದ್ದರೆ ಒಳ್ಳೆಯದಾಗುತ್ತಿತ್ತು.
– ಪರೀಕ್ಷಾರ್ಥಿ, ಕೊಪ್ಪಳನಮ್ಮ ಗಮನಕ್ಕೆ ಬಂದ ಪರೀಕ್ಷಾರ್ಥಿಗಳ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದೆವು. ಪರೀಕ್ಷೆ ಸುಸೂತ್ರವಾಗಿ ನಡೆದಿದೆ. ಮೂರು ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ
-ಎಂ.ನಾರಾಯಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋಲಾರ