ಬಂಗಾರಪೇಟೆ: ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ 6 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ತಾಲ್ಲೂಕಿನ ಕಾಮಸಮುದ್ರ ವೃತ್ತ ಠಾಣೆ ಪೊಲೀಸರು, ₹3.5 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ತಮ್ಮ ಮನೆಯಲ್ಲಿ ಆಭರಣ ಕಳ್ಳತನವಾಗಿದೆ ಎಂದು ಆರೋಪಿಸಿ ಇತ್ತೀಚೆಗೆ ಕಾಮಸಮುದ್ರ ವ್ಯಾಪ್ತಿಯ ರಾಮಸಂದ್ರ (ತಾಲಂಪಲ್ಲಿ) ವಿಜಯಲಕ್ಷ್ಮಿ ಹಾಗೂ ಕನುಮನಹಳ್ಳಿಯ ಬಸಪ್ಪ ಎಂಬುವರು ದೂರು ನೀಡಿದ್ದರು. ಈ ಪ್ರಕರಣದ ಆರೋಪಿಗಳ ಪತ್ತೆಗಾಗಿ ವಿಶೇಷ ಅಪರಾಧ ಪತ್ತೆ ತಂಡ ರಚಿಸಲಾಗಿತ್ತು.

ಈ ಸಂಬಂಧ ಕಾರ್ಯಾಚರಣೆ ಕೈಗೊಂಡ ವಿಶೇಷ ಅಪರಾಧ ಪತ್ತೆ ತಂಡವು, ಆಂಧ್ರಪ್ರದೇಶದ ವಿ.ಕೋಟ ನಿವಾಸಿ ದೇವೇಂದ್ರ ಅಲಿಯಾಸ್ ಸುರೇಶ್ (27), ಭುವನೇಶ್ (33) ಹಾಗೂ ರಾಜಮಂಡ್ರಿಯ ನಿವಾಸಿ ಕಂದಿ ಶ್ರೀಗಣೇಶ್ ಕುಮಾರ್ (35) ಎಂಬುವರನ್ನು ಬಂಧಿಸಿದೆ. ಅಲ್ಲದೆ, ಅವರ ಬಳಿಯಿದ್ದ ಚಿನ್ನಾಭರಣ, 200 ಗ್ರಾಂನಷ್ಟು ನಾಲ್ಕು ಬೆಳ್ಳಿ ನಾಣ್ಯಗಳು, ವಿವಿಧ ಕಂಪನಿಯ ಸಿಗರೇಟ್ ಬಂಡಲ್‌ಗಳು ಹಾಗೂ ಕಳ್ಳತನಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಸೇರಿದಂತೆ 3.55 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಜೊತೆಗೆ ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾಮಸಮುದ್ರ ವ್ಯಾಪ್ತಿಯ ರಾಮಸಂದ್ರ (ತೂಲಂಪಲ್ಲಿ) ಗ್ರಾಮದ ವಿಜಯಲಕ್ಷಿ ಎಂಬುವರ ಮನೆ ಮತ್ತು ಕನುಮನಹಳ್ಳಿ ಬಸಪ್ಪ ಎಂಬುವರ ಮನೆಯಲ್ಲಿ ಚಿನ್ನದ ಆಭರಣಗಳು ಕಳುವಾಗಿದ್ದು, ಈ ಎರಡೂ ಪ್ರಕರಣಗಳಲ್ಲಿ ಆರೋಪಿಗಳನ್ನು ಮತ್ತು ಮಾಲನ್ನು ಪತ್ತೆ ಮಾಡುವ ಸಲುವಾಗಿ ಡಿವೈಎಸ್‌ಪಿ ಪಾಂಡುರಂಗ ರವರ ಮಾರ್ಗದರ್ಶನದಲ್ಲಿ ಕಾಮಸಮುದ್ರ ಸಿಪಿಐ ಜಿ.ಸಿ ನಾರಾಯಣಸ್ವಾಮಿ ಹಾಗೂ ಪಿಎಸ್‌ಐ ಕಿರಣ್‌ಕುಮಾರ್ ರವರ ನೇತೃತ್ವದಲ್ಲಿ ವಿಶೇಷ ಅಪರಾಧ ಪತ್ತೆ ತಂಡವನ್ನು ರಚಿಸಲಾಗಿತ್ತು.

ಈ ಕಾರ್ಯಾಚರಣೆಯಲ್ಲಿ ಕಾಮಸಮುದ್ರ ಸಿಪಿಐ ಜಿ.ಸಿ. ನಾರಾಯಣಸ್ವಾಮಿ, ಪಿಎಸ್‌ಐ ಕಿರಣ್‌ಕುಮಾರ್, ಸಿಬ್ಬಂದಿ ಕೃಷ್ಣ, ಮಂಜುನಾಥ್, ಗಜೇಂದ್ರ, ಶ್ರೀನಿವಾಸ್, ಮಾರ್ಕೊಂಡ, ಲಕ್ಷ್ಮಣ್ ತೇಲಿ, ಅಭಿಷೇಕ್, ಶಿವಾನಂದ, ಸುಜಾತ, ಸುಗುಣಮ್ಮ, ಗುರುಮೂರ್ತಿ, ಧನಂಜಯ ಅವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.