ಕೋಲಾರ: ನಗರದ ಮೆಟ್ರಿಕ್ ನಂತರದ ಹಾಸ್ಟೆಲ್ನಲ್ಲಿ ಮೂಲಸೌಕರ್ಯ ಕಲ್ಪಿಸುತ್ತಿಲ್ಲ ಎಂದು ಆರೋಪಿಸಿ, ಅಲ್ಲಿನ ಅವ್ಯವಸ್ಥೆ ಖಂಡಿಸಿ ವಿದ್ಯಾರ್ಥಿನಿಯರು ಸಮೀಪದ ಕೋರ್ಟ್ ಸರ್ಕಲ್ನಲ್ಲಿ ಶನಿವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಒಳಪಡುವ ಈ ಹಾಸ್ಟೆಲ್ನಲ್ಲಿ ಸೌಲಭ್ಯಗಳಿಲ್ಲದೆ ರೋಸಿ ಹೋಗಿದ್ದ ಕಾಲೇಜು ವಿದ್ಯಾರ್ಥಿನಿಯರು ಬಕೆಟ್ಗಳ ಸಮೇತ ಜಮಾಯಿಸಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ತಡೆದರು. ಒಂದು ತಾಸಿಗೂ ಅಧಿಕ ಕಾಲ ಪ್ರತಿಭಟನೆ ನಡೆಸಿ, ವಾರ್ಡನ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಥಿನಿಯರಿಗೆ ವಿವಿಧ ಸಂಟನೆಗಳ ಮುಖಂಡರು ಸಾಥ್ ನೀಡಿದರು.

‘ಮೂರು ದಿನಗಳಿಂದ ಬಳಕೆಗೂ ನೀರು ಬರುತ್ತಿಲ್ಲ. ಈ ಬಗ್ಗೆ ಕೇಳಿದರೆ ಮೇಲಧಿಕಾರಿಗಳು ನಮಗೇ ಕೊಟ್ಟಿಲ್ಲ ಎಂದು ವಾರ್ಡನ್ ಹೇಳುತ್ತಾರೆ. ಸಮಸ್ಯೆಗಳ ಬಗ್ಗೆ ಹಲವು ಬಾರಿ ವಾರ್ಡನ್ ಗಮನಕ್ಕೆ ತಂದಿದ್ದರೂ ಸ್ಪಂದಿಸದೆ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ’ ಎಂದು ವಿದ್ಯಾರ್ಥಿನಿಯರು ಕಿಡಿಕಾರಿದರು.

‘ಊಟದ ಸಂಬಂಧ ದೂರು ನೀಡಿದರೂ ಏನೂ ಪ್ರಯೋಜವಾಗಿಲ್ಲ. ಸರಿಯಾಗಿ ಅನ್ನ ಬೆಂದಿರುವುದಿಲ್ಲ. ಇಡ್ಲಿ ಗಟ್ಟಿಯಾಗಿರುತ್ತವೆ. ಇದರ ವಿರುದ್ಧ ಪ್ರಶ್ನೆ ಮಾಡಿದರೆ ಆಹಾರ ಪದಾರ್ಥಗಳು ಸರಬರಾಜು ಆಗಿರುವುದನ್ನು ಬೇಯಿಸಿ ಹಾಕಿದ್ದೇವೆ ಎನ್ನುತ್ತಾರೆ. ಅಲ್ಲದೆ ಸಮಯಕ್ಕೆ ಸರಿಯಾಗಿ ಊಟ, ತಿಂಡಿ ನೀಡುವುದಿಲ್ಲ, ನಾವು ತರಗತಿಗಳಿಗೆ ಹೋಗಲು ತಡವಾಗುತ್ತದೆ’ ಎಂದು ದೂರಿದರು.

‘ಸಮಾಜ ಕಲ್ಯಾಣ ಇಲಾಖೆ ಸಹಾಯ ನಿರ್ದೇಶಕ ಚನ್ನಬಸಪ್ಪ ಅವರಿಗೆ ದೂರವಾಣಿ ಕರೆ ಮಾಡಿ ಸಮಸ್ಯೆಗಳ ಬಗ್ಗೆ ತಿಳಿಸಲಾಗಿದೆ. ಆದರೆ, ಯಾವುದೇ ರೀತಿ ಸ್ಪಂದಿಸಿಲ್ಲ. ನೀನು ಯಾವ ಕಾಲೇಜು ಏನು ಮಾಡುತ್ತಿಯ ಮಾಡಿಕೊ ಹೋಗು ಎಂದು ಉಡಾಫೆ ಉತ್ತರ ಕೊಡುತ್ತಾರೆ’ ಎಂದು ಕಿಡಿಕಾರಿದರು.

ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದ ವಿಚಾರ ತಿಳಿದು ಸ್ಥಳಕ್ಕೆ ಬಂದ ಗಲ್ಪೇಟೆ ಪೊಲೀಸ್ ಠಾಣೆ ಪಿಎಸ್ಐ ಅರುಣ್ ಪಾಟೀಲ್, ಸ್ಥಳಕ್ಕೆ ಇಲಾಖೆ ಅಧಿಕಾರಿಗಳನ್ನು ಕರೆಯಿಸಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಒಂದು ಕಾಲಮಿತಿಯೊಳಗೆ ಸರಿಪಡಿಸುವಂತೆ ಸೂಚಿಸಿದರು. ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿ ಪ್ರತಿಭಟನೆ ಹಿಂಪಡೆಯುವಂತೆ ತಿಳಿಸಿದರು.

ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಾದ ಆರ್.ಆರತಿ, ವಿ.ಶೋಭಾ, ಎಸ್.ನಂದಿನಿ, ಎಂ.ಮಹಾಲಕ್ಷ್ಮಿ, ಸಿ.ಸುಖನ್ಯಾ, ಮೌನಿಕಾ, ಡಿ.ಎಸ್.ದೀಪಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಅಧಿಕಾರಿಗಳ ಜೇಬಿಗೆ ಅನುದಾನ

‘ಹಾಸ್ಟೆಲ್ನಲ್ಲಿ ಶೌಚಗೃಹಗಳಿಗೆ ಬಾಗಿಲುಗಳೇ ಇಲ್ಲ ಹಾನಿಯಾಗಿ ಸುಮಾರು ತಿಂಗಳು ಕಳೆದರೂ ರಿಪೇರಿ ಮಾಡಲು ಕ್ರಮವಹಿಸಿಲ್ಲ. ರಿಪೇರಿ ಕೆಲಸಕ್ಕಾಗಿ ಲಕ್ಷಾಂತರ ರೂಪಾಯಿ ಬಂದರೂ ವಾರ್ಡನ್ ಅಧಿಕಾರಿಗಳ ಜೇಬು ಸೇರುತ್ತಿದೆ’ ಎಂದು ವಿದ್ಯಾರ್ಥಿನಿಯರು ಆರೋಪಿಸಿದರು.

ಅನ್ನದಲ್ಲಿ ಹುಳ–ವಾಂತಿ

‘ಪ್ರತಿದಿನ ಒಂದೇ ರೀತಿ ಊಟವನ್ನು ತಯಾರಿಸಿ ನೀಡುತ್ತಿದ್ದಾರೆ ವೇಳಾಪಟ್ಟಿಯಂತೆ ಊಟ ನೀಡುತ್ತಿಲ್ಲ. ಅನ್ನ ಸಾಂಬರ್ನಲ್ಲಿ ಹುಳ ಹಲ್ಲಿ ಕಾಣಿಸಿಕೊಂಡಿತ್ತು. ಅದನ್ನು ಹೇಳಿದಕ್ಕೆ ವಾರ್ಡನ್ ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಈಗಲೂ ಹಾಸ್ಟೆಲ್ನಲ್ಲಿ ದಾಸ್ತಾನು ಆಗಿರುವ ತರಕಾರಿ ಆಹಾರ ಪದಾರ್ಥಗಳನ್ನು ನೋಡಿದರೆ ವಾಂತಿ ಬರುತ್ತದೆ’ ಎಂದು ವಿದ್ಯಾರ್ಥಿನಿರುರು ಅಸಮಾಧಾನ ಹೊರಹಾಕಿದರು.

ವಿದ್ಯಾರ್ಥಿನಿಯರು ಸುಳ್ಳು ಹೇಳುತ್ತಿದ್ದಾರೆ

ವಿದ್ಯಾರ್ಥಿನಿಯರಲ್ಲಿಯೇ ಪರಸ್ಪರ ಹೊಂದಾಣಿಕೆ ಇಲ್ಲ. ಒಬ್ಬರನ್ನು ಕಂಡರೆ ಒಬ್ಬರಿಗೆ ಆಗಲ್ಲ. ಸಣ್ಣಪುಟ್ಟ ಸಮಸ್ಯೆಗಳನ್ನು ದೊಡ್ಡದು ಮಾಡಿ ಸುಳ್ಳು ಹೇಳುತ್ತಿದ್ದಾರೆ. ಟ್ಯಾಂಕ್ನೊಳಗೆ ಯಾರೂ ಬಟ್ಟೆ ಹಾಕಿದ್ದಾರೆ. ಪೈಪ್ಗೆ ಬಟ್ಟೆ ಸಿಕ್ಕಿಕೊಂಡಿದೆ. ಅದನ್ನು ನೆಪ ಇಟ್ಟುಕೊಂಡು ಪ್ರತಿಭಟನೆ ಮಾಡಿದ್ದಾರೆ. ಕೆಲವೊಂದು ಸಮಸ್ಯೆ ಇದ್ದು ಸರಿಪಡಿಸಲಾಗುತ್ತಿದೆ. ನೀರಿನ ಮೋಟಾರ್ ಕೆಟ್ಟು ಹೋಗಿದ್ದು ರಿಪೇರಿ ಮಾಡಲಾಗುವುದು. ಈಗಾಗಲೇ ಟ್ರ್ಯಾಕ್ಟರ್ನಲ್ಲಿ ನೀರು ಸರಬರಾಜು ಮಾಡಲಾಗಿದೆ. ಊಟದ ಸಮಸ್ಯೆ ಏನೂ ಇಲ್ಲ. ಶೌಚಾಲಯ ಸ್ವಚ್ಛಗೊಳಿಸಲಾಗಿದೆ ಬಾಗಿಲು ದುರಸ್ತಿ ಮಾಡಲಾಗಿದೆ. ಡಿ.ಚನ್ನಬಸಪ್ಪ ಸಹಾಯಕ ನಿರ್ದೇಶಕ ಸಮಾಜ ಕಲ್ಯಾಣ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.