‘ಶೌಚಾಲಯ ವ್ಯವಸ್ಥೆ ಇಲ್ಲ’
ಇಲ್ಲಿ ನಡೆಯುವ ವಾರದ ಸಂತೆಗೆ ಸುತ್ತಮುತ್ತಲಿನ 8–10 ಗ್ರಾಮಗಳ ಜನರು ಬಂದು ವ್ಯಾಪಾರ–ವಹಿವಾಟು ನಡೆಸುತ್ತಾರೆ. ಇದರಿಂದಾಗಿ ಸ್ಥಳೀಯ ಆಡಳಿತವು ಸಂತೆಯ ಹರಾಜಿನಿಂದ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತದೆ. ಆದರೆ, ಸುಸಜ್ಜಿತವಾದ ವ್ಯವಸ್ಥೆ ಅಥವಾ ಸೌಲಭ್ಯಗಳನ್ನು ಮಾತ್ರ ಕಲ್ಪಿಸಲಾಗಿಲ್ಲ. ಸಂತೆಯಲ್ಲಿನ ವ್ಯಾಪಾರಿಗಳಿಗೆ ಶೌಚಾಲಯ, ಸ್ವಚ್ಛವಾದ ಕುಡಿಯುವ ನೀರು ಸಹ ಒದಗಿಸಲಾಗಿಲ್ಲ. ಸಂತೆಯಲ್ಲಿ ಎರಡು ಬೃಹತ್ ಶೆಡ್ಡುಗಳನ್ನು ಹೊರತುಪಡಿಸಿದರೆ, ಗ್ರಾಹಕರು ಅಥವಾ ವರ್ತಕರಿಗಾಗಲೀ ಯಾವುದೇ ವ್ಯವಸ್ಥೆ ಇಲ್ಲ ಎಂದು ವರ್ತಕರ ಆಕ್ರೋಶ.