ಕೋಲಾರ: ಇಂಧನ ಸಚಿವ ಕೆ.ಜೆ.ಜಾರ್ಜ್ ವಿದ್ಯುತ್ ಸಮಸ್ಯೆ ವಿಚಾರವಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸುವಾಗಲೇ ವಿದ್ಯುತ್ ಪದೇಪದೇ ಕೈಕೊಟ್ಟಿತು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಬೆಳಿಗ್ಗೆ ಸಭೆ ನಡೆಸುವಾಗ ಸಚಿವರ ಮುಜುಗರಕ್ಕೆ ಒಳಗಾದರು.

ವಿದ್ಯುತ್ ಕೈಕೊಟ್ಟಿದ್ದರಿಂದ ಕೆಲ ನಿಮಿಷ ಕತ್ತಲಲ್ಲಿಯೇ ಕೂರಬೇಕಾಯಿತು.

'ಏಕೆ ಪವರ್ ಕಟ್ ಮಾಡುತ್ತೀರಿ' ಎಂದು ಪ್ರಶ್ನಿಸಿದರು.

ಆಗ ಅಧಿಕಾರಿಗಳು 'ಜನರೇಟರ್ ಓವರ್ ಲೋಡ್ ಆಗಿದೆ ಸರ್' ಎಂದು ಸಮಜಾಯಿಷಿ ನೀಡಿದರು.

ಸಚಿವರು ಮಾತನಾಡಿ, 'ನಾಳೆ ಮಾಧ್ಯಮಗಳಲ್ಲಿ ಇಂಧನ ಸಚಿವರು ಸಭೆ ನಡೆಸುತ್ತಿದ್ದಾಗಲೇ ವಿದ್ಯುತ್ ಅಡಚಣೆ ಎಂದು ವರದಿ ಮಾಡುತ್ತಾರೆ. ವಿದ್ಯುತ್ ಕೊರತೆಯಿಂದ ಅಡಚಣೆ ಆಗಿಲ್ಲ. ಬೇರೆಬೇರೆ ಕಾರಣ ಅಂತೆ. ಸಭಾಂಗಣದಲ್ಲಿಯೇ ಸಮಸ್ಯೆ ಅಂತೆ. ಈ ಬಗ್ಗೆ ವರದಿ ಕೇಳುತ್ತೇನೆ ಬಿಡಿ' ಎಂದರು.

'ನಾವು ಅಡ್ಜಸ್ಟ್ ಮಾಡಿಕೊಳ್ಳುತ್ತೇವೆ, ನೀವೂ ಅಡ್ಜಸ್ಟ್ ಮಾಡಿಕೊಳ್ಳಿ' ಎಂದು ಮಾಧ್ಯಮದವರಿಗೆ ತಿಳಿಸಿದರು.

ತಕ್ಷಣ ಜಿಲ್ಲಾಧಿಕಾರಿ ಅಕ್ರಂ ಪಾಷಾ ಎದ್ದು ಹೋಗಿ ಜಿ.ಪಂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕ ಕೊತ್ತೂರು ಮಂಜುನಾಥ್, ಕೆ.ವೈ.ನಂಜೇಗೌಡ, ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ, ಬೆಸ್ಕಾಂ ಎಂಡಿ ಮಹಾಂತೇಶ್ ಬೀಳಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.