ಕೋಲಾರ: ನಗರದಲ್ಲಿ ಆಯೋಜಿಸಿರುವ ‘ಟಿಪ್ಪು ನಿಜಕನಸುಗಳು’ ನಾಟಕ ಪ್ರದರ್ಶನ ಬಗ್ಗೆ ಮಾಹಿತಿ ನೀಡಲು ರಂಗಾಯಣದ ಮೈಸೂರು ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಶನಿವಾರ ಪೊಲೀಸ್ ಭದ್ರತೆಯಲ್ಲಿ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.

‘ನಾಟಕ ಪ್ರದರ್ಶಿಸದಂತೆ ಕೆಲವರು ಎರಡು ದಿನಗಳಿಂದ ದೂರವಾಣಿ ಕರೆ ಮಾಡಿ ಧಮ್ಕಿ ಹಾಕುತ್ತಿದ್ದಾರೆ. ಕೆಲ ಕ್ರಿಮಿಗಳು ನಗರದಲ್ಲಿ ಅಳವಡಿಸಿದ್ದ ನಾಟಕದ ಫ್ಲೆಕ್ಸ್ ಕಿತ್ತು ಹಾಕಿದ್ದಾರೆ. ಅವರು ಕೈಗೆ ಸಿಕ್ಕರೆ ಕಪಾಳಕ್ಕೆ ಬಾರಿಸುತ್ತೇನೆ’ ಎಂದರು.

‘ನಗರದ ರಂಗಮಂದಿರದಲ್ಲಿ ಮಾರ್ಚ್ 7ರಂದು ಸಂಜೆ 6 ಗಂಟೆಗೆ ನಾಟಕದ ಪ್ರದರ್ಶನವಿದೆ. ಈ ನಾಟಕ ಮುಸ್ಲಿಂ ಸಮುದಾಯದ ವಿರುದ್ಧ ಅಲ್ಲ. ಮತಾಂಧ ಟಿಪ್ಪುವಿನ ಕ್ರೌರ್ಯದ ಕುರಿತಾಗಿದೆ’ ಎಂದು ಸಮರ್ಥಿಸಿಕೊಂಡರು.

‘ಕಳ್ಳ ನನ್ಮಗ’ ಎಂದು ನಾನು ಹೇಳಿದ್ದನ್ನು ಸಾಮಾಜಿಕ ಜಾಲದಲ್ಲಿ ಹರಿಬಿಟ್ಟಿದ್ದಾರೆ. ರಾಜ್ಯದ ಹಲವು ಕಡೆ ನಾಟಕ ಪ್ರದರ್ಶಿಸಿದ್ದು, ಎಲ್ಲಿಯೂ ಗಲಭೆಯಾಗಿಲ್ಲ. ನಾಟಕ ಮಾಡುವ ಜಾಗದಲ್ಲಿ ಬೆಂಕಿ ಹೊತ್ತಿಕೊಳ್ಳಲಿದೆ ಎಂದು ನಿರೀಕ್ಷಿಸಿದವರಿಗೆ ಇದರಿಂದ ನಿರಾಸೆಯಾಗಿದೆ ಎಂದರು.

ನಾಟಕಕ್ಕೆ ತಡೆ ಯತ್ನ:

ಈ ಮಧ್ಯೆ, ಟಿಪ್ಪುವನ್ನು ನಿಂದಿಸಿದ್ದಾರೆ ಎಂದು ಅಡ್ಡಂಡ ಕಾರ್ಯಪ್ಪ ವಿರುದ್ಧ ಕೆಲ ಮುಸ್ಲಿಮರು ದೂರು ನೀಡಿದ್ದಾರೆ. ನಾಟಕ ಪ್ರದರ್ಶನಕ್ಕೆ ಅವಕಾಶ ನೀಡಬಾರದು ಎಂದುಕೋರಿದ್ದಾರೆ. ಟಿಪ್ಪು ಸೆಕ್ಯುಲರ್ ಸೇನೆಯ ಕಾರ್ಯಕರ್ತರು ಅಡ್ಡಂಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.