ಗಂಗಾವತಿ (ಕೊಪ್ಪಳ ಜಿಲ್ಲೆ): ‘ಉತ್ತರ ಭಾರತದ ಅಯೋಧ್ಯೆಯ ರಾಮಮಂದಿರ ಮತ್ತು ದಕ್ಷಿಣ ಭಾರತದ ಗಂಗಾವತಿಯ ಅಂಜನಾದ್ರಿಯ ಆಂಜನೇಯ ಈ ಎರಡೂ ಪವಿತ್ರ ಸ್ಥಳಗಳು ದೇಶವನ್ನು ಒಗ್ಗೂಡಿಸುತ್ತವೆ. ಪ್ರಧಾನಿ ನರೇಂದ್ರ ಮೋದಿ ಅವರ ಏಕ್ ಭಾರತ್ ಶ್ರೇಷ್ಠ ಭಾರತ್ ಪರಿಕಲ್ಪನೆ ಸಾಕಾರಗೊಳಿಸಲು ಇವು ನೆರವಾಗಲಿವೆ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದರು.

ಭಾನುವಾರ ಗಂಗಾವತಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ಪರ ಮತಯಾಚಿಸಿದ ಅವರು ‘ಕಿಷ್ಕೆಂಧ ಕ್ಷೇತ್ರವಾದ ಅಂಜನಾದ್ರಿ ಅಭಿವೃದ್ಧಿಗೆ ಕರ್ನಾಟಕ ಸರ್ಕಾರ ಈಗಾಗಲೇ ₹ 120 ಕೋಟಿ ಮಂಜೂರು ಮಾಡಿದೆ. ಅಯೋಧ್ಯೆದಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಅದರ ಉದ್ಘಾಟನೆಗೆ ನೀವೆಲ್ಲರೂ ಬರಬೇಕು. ನಿಮ್ಮ ಸ್ವಾಗತಕ್ಕಾಗಿ ಉತ್ಸಾಹದಿಂದ ಕಾಯುತ್ತೇನೆ. ರಾಮ ಮತ್ತು ಆಂಜನೇಯನ ದರ್ಶನ ಸುಲಭವಾಗಿಸಲು ಗಂಗಾವತಿಯಿಂದ ಆಯೋಧ್ಯೆಗೆ ಕೇಂದ್ರ ಸರ್ಕಾರ ರೈಲು ಸೌಲಭ್ಯ ಕಲ್ಪಿಸಲಿದೆ' ಎಂದರು.

‘ಶ್ರೀರಾಮನ ಭಕ್ತ ಹುಟ್ಟಿದ ನಾಡು, ಆಂಜನೇಯನ ಭಕ್ತರ ನೆಲೆವೀಡು ಗಂಗಾವತಿ ಜನರಿಗೆ ಕೋಟಿ ಕೋಟಿ ನಮಸ್ಕಾರಗಳು’ ಎಂದು ಕನ್ನಡದಲ್ಲಿ ಆದಿತ್ಯನಾಥ ಮಾತು ಆರಂಭಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ‘ಜೈ ಶ್ರೀರಾಮ್’ ಘೋಷಣೆಗಳನ್ನು ಮೊಳಗಿಸಿದರು.

ಸುಮಾರು 25 ನಿಮಿಷಗಳ ತಮ್ಮ ಭಾಷಣದಲ್ಲಿ ಹಿಂದುತ್ವದ ಮಂತ್ರ ಜಪಿಸಿದ ಯೋಗಿ, ‘ಡಬಲ್ ಎಂಜಿನ್ ಸರ್ಕಾರದಿಂದ ಮಾತ್ರ ರಾಮನ ಭಕ್ತನ ಕ್ಷೇತ್ರ ವೇಗವಾಗಿ ಅಭಿವೃದ್ಧಿಯಾಗುತ್ತದೆ. ಡಬಲ್ ಎಂಜಿನ್ ಸರ್ಕಾರಕ್ಕೆ ಎರಡು ಬಾಗಿಲುಗಳು ಇದ್ದು, ದುಪ್ಪಟ್ಟು ಶಕ್ತಿಯನ್ನೂ ಹೊಂದಿದೆ. ಈ ಸರ್ಕಾರಗಳ ವೇಗ ಕಡಿಮೆಯಾಗಲು ಬಿಡಬೇಡಿ. ಉತ್ತರ ಪ್ರದೇಶದಲ್ಲಿ ಈಗ ಶಾಂತಿ ನೆಲೆಸಲು ಕಾರಣವಾಗಿದ್ದೇ ಡಬಲ್ ಎಂಜಿನ್ ಸರ್ಕಾರ’ ಎಂದು ಹೇಳಿದರು.

‘ಖರ್ಗೆ ಪುತ್ರನ ಠೇವಣಿ ಕಳೆಯಿರಿ’

ಕಲಬುರಗಿ: 'ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪಮಾನ ಮಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರನ ಠೇವಣಿ ಕಳೆಯಿರಿ' ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕರೆ ನೀಡಿದರು. ಚಿತ್ತಾಪುರ ಕ್ಷೇತ್ರದ ವಾಡಿ ಪಟ್ಟಣದ ಹೊರವಲಯದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಪರ ಮತಯಾಚಿಸಿ ಅವರು ಮಾತನಾಡಿದರು. 'ಪ್ರಧಾನಿಗೆ ಅಪಮಾನ ಮಾಡುವುದು ದೇಶಕ್ಕೆ 140 ಕೋಟಿ ಜನರಿಗೂ ಅಪಮಾನ ಮಾಡಿದಂತೆ. ಇಂತಹ ಅಪಮಾನ ಮಾಡಿದ ಪುತ್ರನ ಚುನಾವಣಾ ಠೇವಣಿ ಕಳೆಯಬೇಕು’ ಎಂದು ಮನವಿ ಮಾಡಿದರು. ಆಳಂದದಲ್ಲಿ ಪಕ್ಷದ ಅಭ್ಯರ್ಥಿ ಸುಭಾಷ್ ಗುತ್ತೇದಾರ ಪರ ಮಾತನಾಡಿದ ಯೋಗಿ ಆದಿತ್ಯನಾಥ ‘ಲಾಡ್ಲೆ ಮಶಾಕ್ ದರ್ಗಾದ ಆವರಣದಲ್ಲಿ ರಾಘವ ಚೈತನ್ಯ ದೇವಸ್ಥಾನವನ್ನು ನಿರ್ಮಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.