ಗಂಗಾವತಿ: ಆನೆಗೊಂದಿ ಉತ್ಸವ ಅಂಗವಾಗಿ ಜ. 4ರಂದು ನಡೆದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗಳ ಫಲಿತಾಂಶ ಭಾನುವಾರ ನೀಡಲಾಯಿತು.

ಆನೆಗೊಂದಿ ಉತ್ಸವ ಹಿನ್ನಲೆಯಲ್ಲಿ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗಳನ್ನು ಹಮ್ಮಿಕೊಳ್ಳಲಾಗಿತ್ತು. ಹಾಗಾಗಿಯೇ ರಾಜ್ಯದ ಬೆಂಗಳೂರು, ಹಾಸನ, ಉತ್ತಂಗಿ, ಚಾಮರಾಜನಗರ, ರಾಯಚೂರು, ಭದ್ರಾವತಿ, ಬಳ್ಳಾರಿ, ಸಂಡೂರು, ಕೊಪ್ಪಳ, ಹನುಮಸಾಗರ, ಇಲಕಲ್ ಸೇರಿದಂತೆ ನಾನಾ ಜಿಲ್ಲೆಗಳಿಂದ ಒಟ್ಟು 23 ತಂಡಗಳು ಬಾಲ್ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಇದರಲ್ಲಿ ಪುರುಷರ ವಿಭಾಗಕ್ಕೆ ಒಟ್ಟು 18 ತಂಡಗಳು, ಮಹಿಳೆಯರ ವಿಭಾಗಕ್ಕೆ 05 ತಂಡಗಳು ಭಾಗವಹಿಸಿದ್ದವು. ಅಧಿಕ ಸಂಖ್ಯೆಯಲ್ಲಿ ತಂಡಗಳು ಭಾಗವಹಿಸಿದ ಹಿನ್ನಲೆಯಲ್ಲಿ ಪೂರ್ಣ ಪ್ರಮಾಣದ ಪಂದ್ಯಾವಳಿಯನ್ನು ಜ.05 ರಂದು ಮುಗಿಸಲಾಯಿತು.

ಫಲಿತಾಂಶ: ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗಳ ಪುರುಷರ ವಿಭಾಗದಲ್ಲಿ ಹಾಸನನ ಬಿಬಿಸಿ ತಂಡವು(ಪ್ರಥಮ), ಗಂಗಾವತಿಯ ಸಿಬಿಎಸ್ಬಿಬಿಸಿ ತಂಡ (ದ್ವಿತೀಯ), ಬೆಂಗಳೂರಿನ ಬಿಬಿಸಿ ತಂಡವು(ತೃತೀಯ) ಸ್ಥಾನ ಪಡೆದಿವೆ. ಇನ್ನೂ ಮಹಿಳೆಯರ ವಿಭಾಗದಲ್ಲಿ ಕೊಟ್ಟೂರಿನ ತಂಡ (ಪ್ರಥಮ), ಗಂಗಾವತಿ ತಾಲ್ಲೂಕಿನ ಪ್ರಗತಿ ನಗರದ ಭಾರತೀಯ ಬಾಲ ವಿದ್ಯಾಲಯ ಶಾಲೆಯ ತಂಡ (ದ್ವಿತೀಯ), ಗಂಗಾವತಿಯ ಎಚ್.ಆರ್.ಸರೋಜಮ್ಮ ಪ್ರೌಢಶಾಲೆ ವಿದ್ಯಾರ್ಥಿನಿಯರು(ತೃತೀಯ) ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.