ಮುನಿರಾಬಾದ್: ಮನರಂಜನೆ ಮತ್ತು ಸಾಮಾಜಿಕ ಜಾಗೃತಿ ವಿಷಯಗಳನ್ನು ಮುಂದಿಟ್ಟುಕೊಂಡು ಕೆಲ ಕಲಾ ಸಂಘಗಳು, ನಾಟಕ ಸಂಸ್ಥೆಗಳು ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಅದರಲ್ಲಿ ಕೊಪ್ಪಳ ತಾಲ್ಲೂಕಿನ ಹುಲಿಗಿಯ ಭೂಮಿಕಾ ಸಾಂಸ್ಕೃತಿಕ ಕಲಾ ಸಂಘದ ರಂಗ ಪ್ರಯೋಗ ವಿಶೇಷವಾಗಿ ಗಮನ ಸೆಳೆಯುತ್ತಿದೆ.

ಸಮಾನ ಮನಸ್ಕ ಕಲಾವಿದರು ಸೇರಿಕೊಂಡು 2019ರಲ್ಲಿ ಈ ಸಂಘಟನೆಯನ್ನು ಹುಟ್ಟುಹಾಕಿದರು. ರಂಗಭೂಮಿ ಕಲೆಯನ್ನು ಉಳಿಸಿ ಬೆಳೆಸುವ ಧ್ಯೇಯದೊಂದಿಗೆ ಹುಲಿಗಿ ಗ್ರಾಮದ ರಾಜೇಶ ಪೂಜಾರ ಮತ್ತು ರಾಘವೇಂದ್ರ ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಸಂಘ ಸ್ಥಾಪಿಸಲಾಯಿತು. ಸಂಘದ ಉದ್ಘಾಟನೆಯ ಅಂಗವಾಗಿ ದೇಶಭಕ್ತಿ ಸಾರುವ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಮತ್ತು 'ವೀರ ಸಿಂಧೂರ ಲಕ್ಷ್ಮಣ' ಎಂಬ ಎರಡು ನಾಟಕ ಪ್ರಯೋಗಗಳನ್ನು ಮಾಡಿತು. ಇದೇ ತಿಂಗಳು ಕು ಬವಣೆಯ ಸುತ್ತ ಸಾಗುವ 'ಲಚುಮಿ' ಅರ್ಥಾತ್ ದೇವರ ಮಗ ನಾಟಕ ಜನರ ಗಮನ ಸೆಳೆಯಿತು.

ಸಮಾಜದ ಅಂಕುಡೊಂಕುಗಳನ್ನು ತೋರಿಸುವ, ದೇವದಾಸಿ ಮಹಿಳೆಯರ ಬದುಕು, ಬವಣೆ, ಸಾಮಾಜಿಕ ಸಮಸ್ಯೆಗಳು, ಜನರ ಮೇಲೆ ಆರ್ಥಿಕ ಗಟ್ಟಿತನ ಕೊರತೆ ಬೀರುವ ಪ್ರಭಾವಗಳ ಕಥನಗಳನ್ನು ಇಟ್ಟುಕೊಂಡು ಸಮಾಜದ ಬದಲಾವಣೆಗಾಗಿ ಈ ತಂಡ ಮೇಲಿಂದ ಮೇಲೆ ರಂಗ ಪ್ರಯೋಗಗಳನ್ನು ಮಾಡಿಕೊಂಡು ಬಂದಿದೆ.

ತಂಡದ ಕಲಾವಿದರಾದ ಸತ್ಯನಾರಾಯಣ ದೊನ್ನಿ, ಪಿ.ರವಿಚಂದ್ರ, ಹನುಮಂತ ಚೌಡ್ಕಿ, ಮನೋಹರ ಬೆಟಿಗೇರಿ, ಚಂದ್ರು ಪೂಜಾರ, ಹನುಮಂತಪ್ಪ ಮಾಸ್ತರ್ ಶಿವಪುರ, ಮಹಮ್ಮದ್ ರಫಿ, ರತೀಶ್ ಎಂ.ಪಿ., ಯಮನೂರಪ್ಪ ಇಟಗಿ, ನಾಗರತ್ನ ಪೂಜಾರ, ಗೀತಾ ಮುನಿರಾಬಾದ್ ಹೀಗೆ ಅನೇಕರು ತಂಡವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.