ತಾವರಗೇರಾ: ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಪ್ರತಿನಿತ್ಯ ಹಂದಿಗಳ ಸರಣಿ ಸಾವು ಸಂಭವಿಸಿದ್ದು, ಅವುಗಳ ಮೃತದೇಹಗಳ ಸಾಗಾಣಿಕೆ ವಿಧಾನಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಶು ಇಲಾಖೆ ಅಧಿಕಾರಿಗಳು, ವೈದ್ಯರು ಹಂದಿಗಳ ಸಾವಿಗೆ ರೋಗ ಹರಡಿರುವುದನ್ನು ಖಚಿತಪಡಿಸುವ ಮೂಲಕ ಲಸಿಕೆ ಸಹ ನೀಡಿದ್ದಾರೆ. ಮತ್ತೆ ಹಂದಿಗಳ ಸಾವಿನ ಸಂಖ್ಯೆ ಹೆಚ್ಚಾಗಿದೆ. ಆದರೆ ಎಲ್ಲಿಂದರಲ್ಲಿ ಸತ್ತು ಬಿದ್ದಿರುವ ಹಂದಿಗಳನ್ನು ಸ್ಥಳೀಯ ಪಟ್ಟಣ ಪಂಚಾಯಿತಿ ವತಿಯಿಂದ ಸ್ಥಳಾಂತರ ಮಾಡುತ್ತಿರುವ ಕಾರ್ಯಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದಲ್ಲಿ ಕಳೆದ ಒಂದು ತಿಂಗಳಿಂದ ಪ್ರತಿದಿನ ಸರಣಿ ಸಾವು ನಡೆಯುತ್ತಿದೆ. ವಾರ್ಡ್ಗಲ್ಲಿ ಸತ್ತಿರುವ ಹಂದಿಗಳನ್ನು ಪ.ಪಂ ಆಡಳಿತದ ಕಸ ವಿಲೆವಾರಿ ವಾಹನಗಳಿಗೆ ಕಟ್ಟಿ, ದಾರಿಯುದ್ದಕ್ಕೂ ಎಳದುಕೊಂಡು ಹೋಗುತ್ತಿದ್ದು. ಇದರಿಂದ ಸಾವನ್ನಪಿದ ಹಂದಿಗಳ ರಕ್ತ ಓಣಿ ಮತ್ತು ವಾರ್ಡ್ಗಳಲ್ಲಿ ಹರಡುವ ಮೂಲಕ ರೋಗ ಹರಡಲು ಸಾಧ್ಯತೆಯಿದ್ದು, ಸಾವನ್ನಪ್ಪಿದ ಹಂದಿ, ನಾಯಿಗಳನ್ನು ಪ್ರತ್ಯೇಕ ವಾಹನ ಅಥವಾ ಬೇರೆ ವ್ಯವಸ್ಥೆ ಮಾಡಿ, ಸಾಗಿಸಿದರೆ ಜನರಿಗೆ ತೊಂದರೆಯಾಗುವದಿಲ್ಲ. ಅವುಗಳನ್ನು ಪ.ಪಂ ಸಿಬ್ಬಂದಿ ಮತ್ತು ಕಾರ್ಮಿಕರು ಪಟ್ಟಣದ ಹೊರವಲಯದಲ್ಲಿ ಬಿಸಾಡಿ ಬರುತ್ತಿದ್ದಾರೆ. ಇದಕ್ಕೂ ಸಹ ಪ್ರತ್ಯೇಕ ಗುಂಡಿ ತೆಗೆದು ಮಣ್ಣಿನಲ್ಲಿ ಹಾಕಿದರೆ ರೋಗದ ಭೀತಿ ತಪ್ಪಿಸಬಹುದೆ. ಇಲ್ಲವಾದರೆ ಹಂದಿಗಳ ಸಾವಿನಿಂದ ಗಬ್ಬು ವಾಸನೆ ಹೆಚ್ಚಾಗಿ ಮಕ್ಕಳು, ವೃದ್ಧರು ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ ಎಂದು ವಿವಿಧ ವಾರ್ಡಗಳ ಸಾರ್ವಜನಿಕರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.