ಕಾರಟಗಿ: ತಾಲ್ಲೂಕಿನಲ್ಲಿ ಅಕಾಲಿಕ ಮಳೆಗೆ ಒಟ್ಟು 1,310 ಹೆಕ್ಟೇರ್ ಬೆಳೆ ಹಾನಿ ಸಂಭವಿಸಿದ ಬಗ್ಗೆ ಪ್ರಾಥಮಿಕ ವರದಿ ಬಂದಿದೆ.

ಇನ್ನೂ ಸಮಗ್ರ ಸಮೀಕ್ಷೆ ಮಾಡಿ, ಅಂತಿಮ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬೆಳೆ ಹಾನಿಗೀಡಾದ ರೈತರ ಸಂಕಷ್ಟಕ್ಕೆ, ನೆರವಿಗೆ ನಾನಿದ್ದೇನೆ, ಸರ್ಕಾರವೂ ಇದೆ. ರೈತರಿಗೆ ಪರಿಹಾರ ಮೊತ್ತವನ್ನು ನೇರವಾಗಿ ಅವರ ಖಾತೆಗೆ ಜಮೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭರವಸೆ ನೀಡಿದರು.

ತಾಲ್ಲೂಕಿನ ನದಿಪಾತ್ರದ ಉಳೆನೂರು, ಬೆನ್ನೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಸಂಭವಿಸಿದ ಬೆಳೆ ಹಾನಿ ಪ್ರದೇಶಗಳಿಗೆ ಶನಿವಾರ ಭೇಟಿ ನೀಡಿದ ಬಳಿಕ ಮಾತನಾಡಿದರು.

‘ಈಗಿನ ಸರ್ವೆಯ ಪ್ರಕಾರ ಸಿದ್ದಾಪುರ ಹೋಬಳಿಯಲ್ಲಿ 1,237 ಹಾಗೂ ಕಾರಟಗಿ ಹೋಬಳಿಯಲ್ಲಿ 72 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆ ಹಾನಿಗೀಡಾಗಿದೆ. ಈ ಭಾಗದಲ್ಲಿ ಶೇ 90ರಷ್ಟು ಬೆಳೆ ಹಾನಿಗೀಡಾಗಿದೆ. ಹಾನಿಯ ಬಗ್ಗೆ ಸರಿಯಾಗಿ ಅಪ್ ಲೋಡ್ ಮಾಡಬೇಕು ಎಂದು ಸ್ಥಳದಲ್ಲಿದ್ದ ಕಂದಾಯ, ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.

ಬೆಳೆ ಹಾನಿಯ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಕೃಷಿ ಸಚಿವರೊಂದಿಗೆ ಚರ್ಚಿಸಿರುವೆ. ಅ.28ಕ್ಕೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ವಿಷಯ ಮಂಡಿಸಿ, ಅಗತ್ಯ ಪರಿಹಾರ ದೊರಕಿಸುವ ಭರವಸೆಯನ್ನು ಸಚಿವ ತಂಗಡಗಿ ನೀಡಿದರು.

ತಾಂತ್ರಿಕ ಸಮಸ್ಯೆಯಿಂದ ಹಿಂದೆ ಕೆಲವರಿಗೆ ಪರಿಹಾರ ಬಂದಿರಲಿಲ್ಲ. ವಾರದೊಳಗೆ ಹಣ ಜಮೆ ಆಗಲಿದೆ. ಭೂರುಕ್ ವಿದ್ಯುತ್ ಕಂಪನಿ ನಿರ್ಮಿರುವ ತಡೆಗೋಡೆ, ಕಲ್ಲು ಮತ್ತು ಮರಳಿನಿಂದ ಗದ್ದೆಗಳಿಗೆ ನೀರು ನುಗ್ಗುತ್ತಿರುವ ಬಗ್ಗೆ ತಹಶೀಲ್ದಾರ್ ಅವರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ರೈತರ ಆಕ್ಷೇಪಕ್ಕೆ ಸಚಿವರು ಪ್ರತಿಕ್ರಿಯಿಸಿದರು.

ರಾಜ್ಯೋತ್ಸವದ ಬಳಿಕ ಚಾಲನೆ: ಸಿದ್ದಾಪುರದಿಂದ ನಂದಿಹಳ್ಳಿವರೆಗಿನ ರಸ್ತೆಗೆ ₹6 ಕೋಟಿ ಹಣ ಮಂಜೂರಾಗಿದೆ. ಕನ್ನಡ ರಾಜ್ಯೋತ್ಸವದ ಬಳಿಕ ರಸ್ತೆ ನಿರ್ಮಾಣ ಕಾಮಗಾರಿಗೆ ಮತ್ತು ಬೆನ್ನೂರು ಗ್ರಾಮದಲ್ಲಿ ನಿರ್ಮಾಣವಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟನೆ ಮಾಡಲಾಗುವುದು ಎಂದು ಸಚಿವರು ಹೇಳಿದರು.

ತಹಶೀಲ್ದಾರ್ ಎಂ.ಕುಮಾರಸ್ವಾಮಿ, ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್ಲು, ಇನ್ಸ್ಪೆಕ್ಟರ್ ಸುಧೀರ್ ಬೆಂಕಿ, ಬೆನ್ನೂರು ಗ್ರಾ.ಪಂ ಅಧ್ಯಕ್ಷ ಬಸಪ್ಪ ಶಾಲಿಗನೂರು, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶರಣೇಗೌಡ ಮಲಿಪಾಟೀಲ, ಜಿ.ಪಂ ಮಾಜಿ ಅಧ್ಯಕ್ಷ ವಿಶ್ವನಾಥ ರಡ್ಡಿ ಹೊಸಮನಿ, ಜಿ.ಪಂ ಮಾಜಿ ಉಪಾಧ್ಯಕ್ಷ ಬಿ.ಬಸವರಾಜಪ್ಪ, ಪ್ರಮುಖರಾದ ಕೆ.ಎನ್. ಪಾಟೀಲ, ಶರಣಪ್ಪ ಸಾಹುಕಾರ ಕಕ್ಕರಗೋಳ, ಸಿದ್ದನಗೌಡ, ಹನುಮಂತಪ್ಪ ಶಾಲಿಗನೂರು, ಅಂಬಣ್ಣ ನಾಯಕ, ನಾಗೇಶಪ್ಪ ಮಡಿವಾಳ, ಲಕ್ಷ್ಮಣ ನಾಯಕ, ಪಂಪಪಾತಿ ಕುರಿ, ಮುದಿಯಪ್ಪ ಕಕ್ಕರಗೋಳ, ಶಿವಮೂರ್ತಿ ಬರ್ಸಿ, ದೊಡ್ಡ ಸುಂಕ್ಲಯ್ಯ, ಹುಲುಗಪ್ಪ ಪಾಳೆ, ಗವಿಸಿದ್ದಪ್ಪ ನಾಯಕ, ಈರಣ್ಣ ಈಡಿಗೇರ, ರಾಜಸಾಬ ಪಿಂಜಾರ, ಹುಲುಗಪ್ಪ ಪೂಜಾರಿ, ಗಂಗಾಧರ ಕೊಮಾರೆಪ್ಪ, ಮಲ್ಲಿಕಾರ್ಜುನ ಬಾದರ್ಲಿ ಸಹಿತ ಅನೇಕರು ಉಪಸ್ಥಿತರಿದ್ದರು.

ಉಪ ಚುನಾವಣೆ: ಕೈ ಗೆಲವು ಖಚಿತ

ಸಂಡೂರು ಕ್ಷೇತ್ರದ ಉಪಚುನಾವಣೆಯ ಉಸ್ತುವಾರಿಯನ್ನು ವರಿಷ್ಠರು ನನಗೆ ವಹಿಸಿದ್ದಾರೆ. ನ.4ರಂದು ಕ್ಷೇತ್ರಕ್ಕೆ ತೆರಳುವೆ. ರಾಜ್ಯದಲ್ಲಿ ನಡೆಯುವ 3 ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಲಿದೆ ಎಂಬ ವಿಶ್ವಾಸವನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ವಿಶ್ವಾಸ ವ್ಯಕ್ತಪಡಿಸಿದರು. ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ‘ಶಿಗ್ಗಾವಿ ಕ್ಷೇತ್ರದಲ್ಲಿ ಪಕ್ಷದ ಮುಖಂಡ ಅಜ್ಜಿಮ್ ಪೀರ್ ಖಾದರ್ ನಾಮಪತ್ರ ಸಲ್ಲಿಸಿದ್ದರ ಬಗ್ಗೆ ಪ್ರಶ್ನಿಸಿದಾಗ ಪಕ್ಷದ ಹಿರಿಯರು ಅವರನ್ನು ವಿಶ್ವಾಸಕ್ಕೆ ತಗೆದುಕೊಂಡು ಸಮಸ್ಯೆ ಪರಿಹರಿಸುವರು. ಒಟ್ಟಾರೆ 3 ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಶಾಲಿಯಾಗುವರು’ ಎಂದು ಹೇಳಿದರು. ಬೇಸಿಗೆ ಬೆಳೆಗೆ ನೀರು ಹರಿಸುವ ವಿಷಯವಾಗಿ ನವೆಂಬರ್ ಮೊದಲ ವಾರವೇ ಸಭೆ ನಡೆಸಿ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದು ಸಚಿವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.