ಕೊಪ್ಪಳ: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ವಿವಿಧ ವಸತಿ ಯೋಜನೆಗಳಲ್ಲಿ ವಿಶೇಷವಾಗಿ ಕೊಳಚೆ ನಿರ್ಮೂಲನಾ ಮಂಡಳಿಗೆ ಹಣ ಕೊಟ್ಟಿದ್ದನ್ನು ವಿರೋಧಿಸಿ ಮಂಡಳಿ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನೆ ಮಾಡಿದರು.

ಈ ಹಿಂದೆ ₹76 ಕೋಟಿ, 2022- 23ರಲ್ಲಿ ₹433 ಕೋಟಿ ನೀಡಲಾಗಿದೆ ಎಂದು ಮಂಡಳಿ ನೀಡಿದ್ದು ಸರಿಯಲ್ಲ ಎಂದು ಜಿಲ್ಲಾ, ಗ್ರಾಮ ಹಾಗೂ ನಗರ ಘಟಕಗಳ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಅಶೋಕ್ ವೃತ್ತದಲ್ಲಿ ಶಿರಸ್ತೇದಾರ್ ಸುನಿಲ್ ಕುಮಾರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಮಂಡಳಿಯು ಅವೈಜ್ಞಾನಿಕ ತೀರ್ಮಾನದಿಂದ ಅವಿರತ ಶ್ರಮಿಸುತ್ತಿರುವ ಕಟ್ಟಡ ಕಾರ್ಮಿಕರ ಹಣ ಉಳ್ಳವರ ಪಾಲಾಗುತ್ತಿದೆ. ನಿಯಮಗಳನ್ನು ಗಾಳಿಗೆ ತೂರಿ ತೆಗೆದುಕೊಳ್ಳುತ್ತಿರುವ ತೀರ್ಮಾನಗಳಿಂದ 2006-07ರಲ್ಲಿ ನೋಂದಣಿಯಾದ ನೈಜ ಕಟ್ಟಡ ಕಾರ್ಮಿಕರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ವಿವಿಧ ಕಿಟ್ಗಳು ಕಳಪೆಯಿಂದ ಕೂಡಿವೆ ಎಂದು ಮಂಡಳಿ ಸದಸ್ಯರು ಆರೋಪಿಸಿದರು.

ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಿ.ಚಿಕೇನಕೊಪ್ಪ, ಸಂಚಾಲಕ ಎಸ್.ಎ.ಗಫಾರ್, ಕವಲೂರ ಗ್ರಾಮ ಘಟಕದ ಗೌರವಾಧ್ಯಕ್ಷ ಹನುಮಂತ ಟಿ.
ಯಲಿಗಾರ್, ರಾಜಾ ಸಾಬ್, ಶಂಶುದ್ದೀನ್ ಮಕಾಂದಾರ್, ಪಾನೀಶ್ ಮಕಾಂದಾರ್, ಶರಣಯ್ಯ, ದಿಡ್ಡಿಕೇರ ಬಡಾವಣೆ ಘಟಕದ ಅಧ್ಯಕ್ಷ ಸಾಧಿಕ್ ಅಲಿ ದಫೇದಾರ್, ಶಿವಪ್ಪ ದನಕಾರ್, ರಾಜಪ್ಪ ಚೌಹಾಣ್, ನೂರಸಾಬ್ ಹೊಸಮನಿ, ಗಾಳೆಪ್ಪ ಮುಂಗೋಲಿ. ಜಾಫರ್ ಕುರಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.