ಕುಕನೂರು: ಅಶೋಕ, ನೀಲಗಿರಿ, ತೆಂಗು ಸೇರಿದಂತೆ 200 ಗಿಡ–ಮರಗಳಿಂದ ತುಂಬಿರುವತಾಲ್ಲೂಕಿನ ತಿಪ್ಪರಸನಾಳ ಶಾಲೆಯ ಆವರಣವು ನಂದನವನದಂತೆ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಇದನ್ನು ನೋಡಿದರೆ ಸರ್ಕಾರಿ ಶಾಲೆಗಳು ಹೀಗೂ ಇರಬಹುದು ಎಂದು ಅಚ್ಚರಿ ಮೂಡಿಸುತ್ತಿದೆ.

ತಾಲ್ಲೂಕಿನ ತಿಪ್ಪರಸನಾಳ ರೈತಾಪಿ ವರ್ಗಗಳ ಕುಟುಂಬಗಳು ಹೆಚ್ಚಾಗಿರುವ ಗ್ರಾಮ. ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ವಿಶಾಲ ಪ್ರದೇಶದಲ್ಲಿ ಹಚ್ಚ ಹಸಿರ ಪರಿಸರ ಹೊತ್ತು ನಿಂತಿದೆ. ಮಕ್ಕಳಲ್ಲಿ ಪರಿಸರದ ಅರಿವು ಮೂಡಿಸಲು, ಅವರಿಗೆ ಪರಿಸರದ ಬಗ್ಗೆ ಕಾಳಜಿ, ಆಸಕ್ತಿ ಮೂಡುವಂತೆ ಮಾಡುವ ಉದ್ದೇಶದಿಂದ ಹಾಗೂ ಶಾಲೆಯ ಆವರಣವನ್ನು ಉತ್ತಮ ಪರಿಸರವನ್ನಾಗಿ ಮಾಡಲು ಶಾಲೆಯ ಶಿಕ್ಷಕ ವರ್ಗದವರು ವಿದ್ಯಾರ್ಥಿಗಳೊಡಗೂಡಿ ಸಸಿ ನೆಟ್ಟು ಗಿಡ ಬೆಳಿಸಿದ್ದಾರೆ ಎಂದು ಎಸ್ಡಿಎಂಸಿ ಅಧ್ಯಕ್ಷ ಕುಮಾರಸ್ವಾಮಿ ಅಂಗಡಿ ಹೇಳುತ್ತಾರೆ.

ಶಾಲೆಯ ಆರಂಭದಲ್ಲಿ ಮಹಾದ್ವಾರ ಅತ್ಯಾಕರ್ಷಕವಾಗಿದ್ದು, ನೂರಾರು ಗಿಡ ಮರಗಳು ಬೆಳೆದು ನಿಂತಿರುವುದು ಶಾಲೆ ಸೌಂದರ್ಯಕ್ಕೆ ಮತ್ತಷ್ಟು ಮೆರಗು ನೀಡಿವೆ. ಶಿಕ್ಷಕ ಸಮೂಹ ಹಾಗೂ ಸಮುದಾಯ ಸಹಭಾಗಿತ್ವ, ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಆಭಿವೃದ್ಧಿ ಕಂಡ ಶಾಲೆಗೆ ಪರಿಸರ ಮಿತ್ರ ಶಾಲೆ ಪ್ರಶಸ್ತಿ ಸಿಕ್ಕಿದೆ. ಇದಲ್ಲದೇ ಶಾಲೆಯ ಸರ್ವತೋಮುಖ ಪ್ರಗತಿಗೆ ಸದಾ ಪ್ರೋತ್ಸಾಹ ನೀಡುವಂತಹ ಶಾಲಾಭಿವೃದ್ಧಿ ಸಮಿತಿ ಇದೆ.

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ಶಾಲೆ ನನ್ನ ಮನೆ ಇದ್ದಂತೆ ಎಂಬ ಉದ್ದೇಶದೊಂದಿಗೆ ಪರಿಸರ ಉತ್ತಮಗೊಳಿಸುವ ಕಾಳಜಿ ಪ್ರತಿ ಶಿಕ್ಷಕರು ತಮ್ಮ ಜೀವನದಲ್ಲಿ ಮೈಗೂಡಿಸಿ ಕೊಂಡಾಗ ಇಂತಹ ಪರಿಸರ ಕಾಳಜಿ ನಿರ್ಮಿಸಲು ಸಾಧ್ಯ ಎಂದು ಮುಖ್ಯಶಿಕ್ಷಕ ಮಹೇಶ ಸಬರದ್ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.