ಕೊಪ್ಪಳ: ‘ನನಗೆ ಓದಲು ಹಾಗೂ ಬರೆಯಲು ಬರುತ್ತದೆ. 2017-18ರಲ್ಲಿ ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯಲ್ಲಿರುವ ಖಾಸಗಿ ಸಂಸ್ಥೆಯೊಂದರ ಕೇಂದ್ರದಲ್ಲಿ ಪರೀಕ್ಷೆ ಬರೆದು ಉತ್ತಮ ಅಂಕ ಪಡೆದಿದ್ದೇನೆ’ ಎಂದು ಎಸ್ಎಸ್ಎಲ್ಸಿಯಲ್ಲಿ ಶೇ. 99.52ರಷ್ಟು ಫಲಿತಾಂಶ ಪಡೆದಿರುವ ಪ್ರಭು ಲೋಕರೆ ಪ್ರತಿಕ್ರಿಯಿಸಿದ್ದಾರೆ.

ಸರಿಯಾಗಿ ಓದಲು ಹಾಗೂ ಬರೆಯಲು ಬಾರದ ಪ್ರಭು ಲೋಕರೆ ಎಸ್ಎಸ್ಎಲ್ಸಿಯಲ್ಲಿ ಉತ್ತಮ ಫಲಿತಾಂಶ ಪಡೆದು ನ್ಯಾಯಾಲಯದಲ್ಲಿ ಜವಾನನ ಹುದ್ದೆ ಗಿಟ್ಟಿಸಿಕೊಂಡಿದ್ದಾನೆ. ಆತನ ವಿದ್ಯಾಭ್ಯಾಸದ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಕೊಪ್ಪಳದ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರು ಪ್ರಭು ವಿದ್ಯಾಭ್ಯಾಸದ ಕುರಿತು ವಿಚಾರಣೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಎಫ್ಐಆರ್ ಕೂಡ ದಾಖಲಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಪ್ರಭು ‘ದೆಹಲಿ ಎಜುಕೇಷನ್ ಬೋರ್ಡ್ ನಡೆಸಿರುವ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದೇನೆ. ಪರೀಕ್ಷೆಗೆ ಹಾಜರಾಗಿ ನಾನೇ ಪರೀಕ್ಷೆ ಬರೆದಿದ್ದೇನೆ. ನಾನು ಪಡೆದಿರುವ ಅಂಕಪಟ್ಟಿ ರಾಜ್ಯದ ಎಸ್ಎಸ್ಎಲ್ಸಿ ಮಂಡಳಿಯದ್ದು ಅಲ್ಲ. ನನ್ನ ಜೊತೆ ರಾಜ್ಯದ ಅನೇಕರು ಉತ್ತೀರ್ಣರಾಗಿ ನ್ಯಾಯಾಲಯದಲ್ಲಿ ಜವಾನನ ಹುದ್ದೆಗೆ ಆಯ್ಕೆಯಾಗಿದ್ದಾರೆ’ ಎಂದು ಹೇಳಿದ್ದಾರೆ.
.ಕೊಪ್ಪಳ | ಓದಲು– ಬರೆಯಲು ಬಾರದಿದ್ದರೂ SSLCಯಲ್ಲಿ ಶೇ 99ರಷ್ಟು ಫಲಿತಾಂಶ:ಎಫ್ಐಆರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.