ಉದ್ಯಾನ ನಿವೇಶನದಲ್ಲಿ ಅಕ್ರಮವಾಗಿ ಗುಂಡಿ ತೋಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಿದ್ದ ಡಿಯುಡಿಸಿ ಯೋಜನಾ ನಿರ್ದೇಶಕಿ ಕಾವ್ಯಾರಾಣಿ ಈ ಬಗ್ಗೆ ವರದಿ ನೀಡುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಪತ್ರ ಬರೆದಿದ್ದು ಸಂಬಂಧಿಸಿದ ಅಧಿಕಾರಿಗಳು ವರದಿ ನೀಡಿಲ್ಲ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಗಣಿ ಇಲಾಖೆ ಹಿರಿಯ ಭೂ ವಿಜ್ಞಾನಿ ದಿಲೀಪ್‌ಕುಮಾರ ‘ಅಭಿವೃದ್ಧಿ ಉದ್ದೇಶಕ್ಕೆ ಗರಸು ಮಣ್ಣು ಅಲ್ಲಿಯೇ ಬಳಕೆ ಮಾಡಿಕೊಂಡಿರುವ ಕಾರಣ ನಿಯಮ ಉಲ್ಲಂಘನೆಯಾಗಿಲ್ಲ’ ಎಂದರು.
ಆದೇಶ ದಿಢೀರ್ ರದ್ದು!
ನಿವೇಶನಗಳ ಆನ್‌ಲೈನ್ ದಾಖಲೆ ಬಿಡುಗಡೆಗೆ ಆದೇಶ ನೀಡಿದ್ದ ಮುಖ್ಯಾಧಿಕಾರಿ ಧರಣೇಂದ್ರಕುಮಾರ ಎರಡೇ ತಿಂಗಳಲ್ಲಿ ತಮ್ಮ ಆದೇಶವನ್ನು ರದ್ದುಪಡಿಸಿರುವ ದಾಖಲೆ ಲಭ್ಯವಾಗಿದೆ. ಸ್ಥಳ ಪರಿಶೀಲಿಸಲಾಗಿದ್ದು ಶೇ 100ರಷ್ಟು ದಾಖಲೆ ಬಿಡುಗಡೆಗೆ ಆದೇಶಿಸಲಾಗಿದೆ ಎಂಬುದು ಮುಖ್ಯಾಧಿಕಾರಿ ನೀಡಿದ ಮೊದಲ ಆದೇಶದಲ್ಲಿದೆ. ಆದರೆ ವಸತಿ ವಿನ್ಯಾಸದಲ್ಲಿ ಸ್ಥಾನಿಕ ಪರಿಶೀಲನೆ ನಡೆಸಲಾಗಿದ್ದು ಅಭಿವೃದ್ಧಿ ಕಾಮಗಾರಿ ನಿರ್ವಹಿಸದ ಕಾರಣ ನಿವೇಶನ ಮಂಜೂರಾತಿ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಲಾಗಿದೆ.