ಕನಕಗರಿ: ತಾಲ್ಲೂಕಿನ ಹುಲಿಹೈದರ ಗ್ರಾಮದಲ್ಲಿ ಗುರುವಾರ ನಡೆದ ಗುಂಪು ಘರ್ಷಣೆಗೆ ಸಂಬಂಧಿಸಿದಂತೆ ಪೊಲೀಸರು 10 ಜನರನ್ನು ಬಂಧಿಸಿ, 15 ಜನರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

‘ವಶಪಡಿಸಿಕೊಂಡ ಕೆಲವರ ನಡೆ ಅನುಮಾನಾಸ್ಪದಾಗಿದ್ದು, ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಇನ್ನಷ್ಟು ಆರೋಪಿಗಳ ಬಂಧನಕ್ಕೆ ಪೊಲೀಸರ ಆರು ತಂಡ ರಚಿಸಲಾಗಿದೆ‘ ಎಂದು ಜಿಲ್ಲಾ ಪೊಲೀಸ್ಅರುಣಾಂಗ್ಷು ಗಿರಿ ತಿಳಿಸಿದರು.

‘ಗ್ರಾಮಸ್ಥರು ಆತಂಕಪಡುವ ಅಗತ್ಯವಿಲ್ಲ. ನಿಜವಾದ ಆರೋಪಿಗಳನ್ನು ಮಾತ್ರ ಬಂಧಿಸಲಾಗುವುದು. ತಪ್ಪಿತಸ್ಥರು ಅಲ್ಲದವರನ್ನು ಬಿಡುಗಡೆ ಮಾಡಲಾಗುವುದು’ ಎಂದರು.

ಊರು ತೊರೆದ ಗ್ರಾಮಸ್ಥರು: ಗ್ರಾಮದಲ್ಲಿ ಶುಕ್ರವಾರ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಬಂಧನದ ಭೀತಿಯಿಂದ ವೃದ್ಧರು ಮತ್ತು ಮಹಿಳೆಯರು ಹೊರತು ಪಡಿಸಿ ಬಹುತೇಕ ಜನರು ಗ್ರಾಮ ತೊರೆದಿದ್ದಾರೆ. ಕೆಲ ಮಹಿಳೆಯರು ತವರು ಮನೆಗೆ ತೆರಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.