ಗಂಗಾವತಿ: ತಾಲ್ಲೂಕಿನ ಚಿಕ್ಕಬೆಣಕಲ್ ಗ್ರಾಮದಲ್ಲಿ ಜೆಜೆಎಂ ಯೋಜನೆಯಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಶಾಸಕ ಜಿ.ಜನಾರ್ದನರೆಡ್ಡಿ ಮಂಗಳವಾರ ಚಾಲನೆ ನೀಡಿದರು.

ನಂತರ ಮಾತನಾಡಿ, ‘ಗ್ರಾಮೀಣ ಭಾಗದಲ್ಲಿ ಮನೆ ಮನೆಗೆ ಶುದ್ಧ ಕುಡಿಯುವ ನೀರು ಕಲ್ಪಿಸುವ ಉದ್ದೇಶದಿಂದ ಜೆಜೆಎಂ ಕಾಮಗಾರಿ ಯೋಜನೆಯಿದ್ದು,ಇದರಡಿಯೇ ಗಂಗಾವತಿ ತಾಲ್ಲೂಕಿನ 61 ಜನವಸತಿ ಗ್ರಾಮಗಳ ಒಳಿತಿಗಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಆರಂಭಿಸಲಾಗುತ್ತಿದೆ. ಹಾಗೆಯೇ ಗ್ರಾಮೀಣ ಭಾಗದಲ್ಲಿನ ಚರಂಡಿ, ರಸ್ತೆ, ಬೀದಿದೀಪ ಅಳವಡಿಕೆ ಸೇರಿ ವಿವಿಧ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲೇ ಪರಿಹಾರ ಒದಗಿಸಲಾಗುತ್ತದೆ. ಗ್ರಾಮಗಳು ಅಭಿವೃದ್ಧಿಯಾದಾಗ ಮಾತ್ರ ನಗರ ಅಭಿವೃದ್ಧಿ ಆಗಲು ಸಾಧ್ಯ’ ಎಂದರು

ನಂತರ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.

ಚೆನ್ನಪ್ಪ ಮಳಗಿ, ಮಹೇಶ ಶಾಸ್ತ್ರೀ, ಕರಿಯಣ್ಣ ಸಂಗಟಿ, ನಾಗಪ್ಪ ರಾಠೋಡ, ಶ್ರೀಕಾಂತ, ಮನೋಹರಗೌಡ, ಸಂಗಮೇಶ, ಮಲ್ಲೇಶಪ್ಪ, ದುರ್ಗಪ್ಪ ಆಗೋಲಿ, ಚೆನ್ನವೀರನ ಗೌಡ್ರು, ಆನಂದಗೌಡ, ವೀರೇಶ ಬಲಕುಂದಿ, ವೆಂಕಟೇಶ ಸೇರಿ ಬಿಜೆಪಿ ಕಾರ್ಯಕರ್ತರು, ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.