ಬುಧವಾರ, 2 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ವೈದ್ಯರ ಸಲಹೆ ಇಲ್ಲದೆ ಔಷಧ ಮಾರಾಟ ಮಾಡುವಂತಿಲ್ಲ’

Published : 2 ಅಕ್ಟೋಬರ್ 2024, 16:09 IST
Last Updated : 2 ಅಕ್ಟೋಬರ್ 2024, 16:09 IST
ಫಾಲೋ ಮಾಡಿ
Comments

ಗಂಗಾವತಿ: ಮೆಡಿಕಲ್ ಶಾಪ್ ಮಾಲೀಕರು ವೈದ್ಯರ ಚೀಟಿ, ಸಲಹೆಯಿಲ್ಲದೇ ಯಾವುದೇ ಕಾರಣಕ್ಕೂ ನೋವುಮುಕ್ತ, ನಶೆಯುಕ್ತ ಗುಳಿಗೆಗಳನ್ನು ಮಾರಾಟ ಮಾಡುವಂತಿಲ್ಲ. ಇದು ಕಾನೂನಡಿ ಅಪರಾಧವಾಗಿದೆ ಎಂದು ಜಿಲ್ಲಾ ಸಹಾಯಕ ಔಷಧ ನಿಯಂತ್ರಕ ವೆಂಕಟೇಶ ರಾಠೋಡ್ ಹೇಳಿದರು.

ನಗರದ ಬನ್ನಿಗಿಡ ಕ್ಯಾಂಪಿನಲ್ಲಿ ಔಷಧ ಮಾರಾಟಗಾರರ ಮಳಿಗೆಯಲ್ಲಿ ಪೊಲೀಸ್ ಇಲಾಖೆ ಮತ್ತು ಔಷಧ ನಿಯಂತ್ರಣ ಇಲಾಖೆ ಸಹಯೋಗದಲ್ಲಿ ನಡೆದ ಮಾದಕ ವ್ಯಸನದ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಗಂಗಾವತಿ ತಾಲ್ಲೂಕಿನಲ್ಲಿ ಈಚೆಗೆ ನಶೆಯುಕ್ತ ಔಷಧಿಗಳ ಬಳಕೆ ಹೆಚ್ಚಿದೆ ಎನ್ನುವ ಬಗ್ಗೆ ಹಲವು ಆರೋಪದ ಜತೆಗೆ ದೂರುಗಳು ಬಂದಿದೆ. ಈ ನಶೆಯುಕ್ತ ಔಷಧಿಗಳ ಮಾರಾಟ ಮೆಡಿಕಲ್ ಶಾಪ್ ಮಾಲಿಕರೇ ಹೆಚ್ಚಾಗಿ ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಅರೋಪಗಳು ಸಹ ಬಂದಿವೆ. ಹಾಗಾಗಿ ಮೆಡಿಕಲ್ ಶಾಪ್ ಮಾಲಿಕರು ಯಾವುದೇ ಕಾರಣಕ್ಕೂ ವೈದ್ಯರ ಚೀಟಿಯಿಲ್ಲದೆ ಔಷಧಿಗಳು ಮಾರುವಂತಿಲ್ಲ’ ಎಂದರು.

ಒಂದು ವೇಳೆ ಕಾನೂನು ನಿಯಮ ಉಲ್ಲಂಘಿಸಿ ಮಾರಾಟ ಮಾಡಿದರೆ ಕೂಡಲೇ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದರು.

ಡಿವೈಎಸ್ಪಿ ಸಿದ್ದನಗೌಡ ಪೊಲೀಸ್ ಪಾಟೀಲ್ ಮಾತನಾಡಿದರು.

ಉಪವಿಭಾಗ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಈಶ್ವರ ಸವಡಿ, ಔಷಧ ಮಾರಾಟಗಾರರ ಸಂಘದ ಅಧ್ಯಕ್ಷ ಅಶೋಕಸ್ವಾಮಿ ಹೇರೂರು, ನಗರಠಾಣೆ ಪಿಐ ಪ್ರಕಾಶ್ ಮಾಳಿ ಭಾಗವಹಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT