ಯಲಬುರ್ಗಾ: ‘ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರ ಜಾರಿಗೆ ತರುವ ವಿವಿಧ ಯೋಜನೆಗಳನ್ನು ಸರಿಯಾಗಿ ಬಳಸಿಕೊಂಡು ಉತ್ತಮ ಸಾಧನೆ ಮಾಡಿದರೆ ಸರ್ಕಾರದ ಪ್ರಯತ್ನ ಸಾರ್ಥಕ’ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಫ್.ಎಂ. ಕಳ್ಳಿ ಹೇಳಿದರು.

ತಾಲ್ಲೂಕಿನ ಬಂಡಿ ಗ್ರಾಮದ ಕರ್ನಾಟಕ ಪಬ್ಲಿಕ್ ಸರ್ಕಾರಿ ಬಾಲಕಿಯರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಶಾಲಾ ಅಭಿವೃದ್ಧಿ ಹಾಗೂ ಪಾಲಕರ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆವಿಶೇಷ ಕಾಳಜಿ ತೋರುತ್ತಿರುವುದರಿಂದ ಸಾಕಷ್ಟು ಯೋಜನೆಗಳು ವಿದ್ಯಾರ್ಥಿಗಳ ಕಲ್ಯಾಣಕ್ಕೆ ಹಾಗೂ ಅವರ ಶೈಕ್ಷಣಿಕ ಸುಧಾರಣೆಗೆ ಪೂರಕವಾಗಿವೆ’ ಎಂದರು.

ಸಂಪನ್ಮೂಲ ವ್ಯಕ್ತಿ ಮಹೇಶ ಅಸೂಟಿ ಮಾತನಾಡಿ, ‘ಯಾವುದೇ ಶಾಲೆಯಾಗಿರಲಿ ಅಲ್ಲಿಯ ಪಾಲಕರು ಮತ್ತು ಸಾರ್ವಜನಿಕರ ಸಹಭಾಗಿತ್ವ ಅವಶ್ಯಕವಾಗಿರುತ್ತದೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪಾಲಕರ ಜವಾಬ್ದಾರಿ ಹೆಚ್ಚಿದೆ’ ಎಂದು ಅವರು ಹೇಳಿದರು.

ಮುಖ್ಯಶಿಕ್ಷಕ ಎಂ. ನಾಗಪ್ಪ ಮಾತನಾಡಿದರು.

ಆರ್.ಸುಮಂಗಲ, ವೀರನಗೌಡ, ಗೆದಿಗೆಮ್ಮ, ವಿಜಯಲಕ್ಷ್ಮಿ, ವೀರನಗೌಡ, ಎಸ್.ಬಿ.ಬಿಲ್ಲರ, ಬಸಮ್ಮ ತೊಂಡಿಹಾಳ, ರೇಣುಕಾ ನಿಂಬನಗೌಡ್ರ, ಶ್ವೇತಾ ಭದ್ರಗೌಡ್ರ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವೀರಣ್ಣ ಸೂಡಿ, ಸದಸ್ಯರಾದ ರಾಚಯ್ಯ ದೇವಲಾಪೂರಮಠ, ಮಾರುತಿ ಮೇಟಿ, ಶರಣಪ್ಪ ಸೋಲಬಗೌಡ್ರ, ಅಂದಾನಗೌಡ ನಿಂಬನಗೌಡ್ರ, ಶರಣಪ್ಪ ತಳವಾರ, ದೊಡ್ಡಬಸಪ್ಪ ಮೂಲಿಮನಿ, ಬಾಳನಗೌಡ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.