ಕೆಲಸ ಮಾಡಲು ಬಹಳಷ್ಟು ಜನ ಹಿಂದೇಟು ಹಾಕುತ್ತಿರುವ ಪತ್ರಿಕಾ ವಿತರಣೆ ಕಾರ್ಯವನ್ನು ಸ್ಪರ್ಧಾತ್ಮಕ ಸವಾಲಿನ ನಡುವೆಯೂ ಅಚ್ಚುಕಟ್ಟಾಗಿ ಮಾಡುತ್ತಿದ್ದೇನೆ. ಹಿಂದೆ ಸಂಚಾರ ವ್ಯವಸ್ಥೆ ಕೊರತೆಯಿಂದಾಗಿ ಪತ್ರಿಕೆ ಜನರಿಗೆ ತಡವಾಗಿ ತಲುಪುತ್ತಿತ್ತು. ಈಗ ಸೂರ್ಯೋದಯಕ್ಕೂ ಮೊದಲು ಮನೆ ಬಾಗಿಲಿಗೇ ಪತ್ರಿಕೆ ತಲುಪುತ್ತಿವೆ. ಎಲ್ಲರೂ ಪತ್ರಿಕೆ ಓದಿದರೆ ನಮ್ಮ ಶ್ರಮ ಸಾರ್ಥಕವಾಗುತ್ತದೆ.- ಮಂಜುನಾಥ ಸಿರಿಗೇರಿ, ಪತ್ರಿಕಾ ವಿತರಕ ಕಿನ್ನಾಳ
2 ವರ್ಷಗಳಿಂದ ಮನೆಮನೆಗೆ ತೆರಳಿ ಪತ್ರಿಕೆ ವಿತರಣೆ ಮಾಡುತ್ತಿದ್ದೇನೆ. ಸರ್ಕಾರ ದ್ವಿಚಕ್ರ ವಾಹನ ಖರೀದಿಗೆ ಸರ್ಕಾರ ಸಬ್ಸಿಡಿ ನೀಡಬೇಕು. ಮಳೆ ಗಾಳಿ ಬಿಸಿಲು ಯಾವುದನ್ನೂ ಲೆಕ್ಕಿಸದೇ ಅತ್ಯಂತ ಖುಷಿಯಿಂದ ಈ ಕೆಲಸ ನಿರ್ವಹಣೆ ಮಾಡುತ್ತಿರುವೆ. ಪತ್ರಿಕೆ ಹಂಚುವ ಹುಡುಗರಿಗೆ ದ್ವಿಚಕ್ರವಾಹನದ ಅಗತ್ಯವಿದೆ. ಸಬ್ಸಿಡಿ ಕೊಟ್ಟರೆ ವಾಹನ ಖರೀದಿಗೆ ಅನುಕೂಲವಾಗುತ್ತದೆ.- ಮಂಜುನಾಥ ಟಪಾಲ್, ಪತ್ರಿಕಾ ವಿತರಕರ ಸಂಘದ ಜಿಲ್ಲಾ ಉಪಾಧ್ಯಕ್ಷ
1 ಅನ್ನ ಕೊಟ್ಟ ವೃತ್ತಿ ಎರಡೂವರೆ ದಶಕಗಳಿಂದ ಮನೆಮನೆಗೆ ತೆರಳಿ ಪತ್ರಿಕೆ ಹಂಚುವ ಕಾಯಕ ಮಾಡುತ್ತಿದ್ದೇನೆ. ಈ ವೃತ್ತಿ ಅನ್ನ ಕೊಟ್ಟಿದೆ. ಬದುಕು ಕಟ್ಟಿಕೊಳ್ಳಲು ನೆರವಾಗಿದೆ. ಸೂರ್ಯೋದಯಕ್ಕೂ ಮೊದಲೇ ಕೆಲಸ ಮುಗಿಯುತ್ತದೆ. ಬೇರೆ ಕೆಲಸ ಮಾಡಲು ಕೂಡ ಅನುಕೂಲವಾಗುತ್ತದೆ- ಬಸವರಾಜ ಬಾಳಪ್ಪ ಭಂಡಾರಿ, ಮುರಡಿ ಪತ್ರಿಕಾ ವಿತರಕ
ಕೆಲಸ ಮೂರು ವರ್ಷಗಳಿಂದ ಪತ್ರಿಕೆ ಹಂಚುತ್ತಿದ್ದೇನೆ. ಒಂದೆಡೆ ಇದು ಕೆಲಸವಾದರೆ ಇನ್ನೊಂದೆಡೆ ಆರೋಗ್ಯ ಉತ್ತಮಪಡಿಸಿಕೊಳ್ಳಲು ಬೆಳಗಿನ ಜಾವವೇ ನಿದ್ದೆಯಿಂದ ಏಳುವುದನ್ನು ರೂಢಿಸಿಕೊಳ್ಳಲು ವೇದಿಕೆ. ಪತ್ರಿಕೆಗಳನ್ನು ಓದುವ ಆಸಕ್ತಿಯಿರುವ ಕಾರಣ ನಿತ್ಯ ಜನರಿಗೆ ಪತ್ರಿಕೆ ತಲುಪುವ ಮೊದಲು ನಾನು ಓದುತ್ತೇನೆ.ಜಗನ್ನಾಥ ಶಂಕರಪ್ಪ ಅಕ್ಕಸಾಲಿ, ಮುಧೋಳ ಪತ್ರಿಕಾ ವಿತರಕ
ಅನೇಕ ಸಮಸ್ಯೆಗಳು ಹಾಗೂ ಸವಾಲುಗಳ ನಡುವೆಯೂ ಪತ್ರಿಕೆ ವಿತರಣೆ ಕೆಲಸ ಮಾಡುತ್ತಿದ್ದೇವೆ. ಹಲವು ಬಾರಿ ವೈಯಕ್ತಿಕವಾಗಿ ಸಂಕಷ್ಟಗಳು ತಲೆದೋರಿದರೂ ನಮ್ಮ ವೃತ್ತಿ ಬದ್ಧತೆ ಬಿಡುವುದಿಲ್ಲ. ಪತ್ರಿಕೆ ವಿತರಣೆ ವೃತ್ತಿಯನ್ನೇ ಹಲವಾರು ಕುಟುಂಬಗಳು ನೆಚ್ಚಿಕೊಂಡಿವೆ. ಅವರೆಲ್ಲರಿಗಾಗಿ ಸರ್ಕಾರ ಮೂಲ ಅಗತ್ಯತೆಗಳ ನೆರವು ಘೋಷಿಸಲಿ. ಪಿಂಚಣಿಯನ್ನಾದರೂ ನೀಡಲಿ.- ಗವಿರಾಜ ಕಂದಾರಿ, ಪತ್ರಿಕಾ ವಿತರಕರ ಸಂಘದ ಜಿಲ್ಲಾಧ್ಯಕ್ಷ
ಎಲ್ಲ ವೃತ್ತಿಗಳಲ್ಲಿ ಇರುವಂತೆ ಪತ್ರಿಕೆ ಹಂಚುವ ಕಾಯಕದ ಕೆಲಸದಲ್ಲಿಯೂ ಏರಿಳಿತಗಳು ಇದ್ದೇ ಇವೆ. ಮೂರ್ನಾಲ್ಕು ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದು ಖುಷಿ ನೀಡಿದೆ. ಸೂರ್ಯೋದಯಕ್ಕೂ ಮೊದಲು ಎದ್ದು ಪತ್ರಿಕೆ ಜೋಡಿಸಿಕೊಂಡು ಮನೆಮನೆಗೆ ತಲುಪುವ ಕೆಲಸ ಆತ್ಮತೃಪ್ತಿ ನೀಡಿದೆ.ಮಹಾಂತೇಶ ವಣಗೇರಿ, ಪತ್ರಿಕಾ ವಿತರಕ ಕಾರಟಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.