ಕುಕನೂರು: ಪಾರಂಪರಿಕ ಬೆಳೆಯಲ್ಲಿ ಕೈ ಸುಟ್ಟುಕೊಂಡ ರೈತ ವಾಣಿಜ್ಯ ಬೆಳೆ ಬೆಳೆದು ಕೈ ತುಂಬಾ ಹಣ ಗಳಿಸಿದ್ದಾರೆ. ಸಾಂಪ್ರದಾಯಕ ಕೃಷಿಯಿಂದ ಮುಕ್ತಿ ಹೊಂದಿ ಅರ್ಧ ಎಕರೆ ಜಮೀನಿನಲ್ಲಿ ಪ್ರತಿದಿನ 8 ರಿಂದ 10 ಕೆಜಿ ಗುಲಾಬಿ ಬೆಳೆದು ಪ್ರತಿನಿತ್ಯ ₹800- ₹1,000 ಆದಾಯ ಗಳಿಸುತ್ತಿದ್ದಾರೆ.

80ರ ಇಳಿ ವಯಸ್ಸಿನಲ್ಲಿ ಗುಲಾಬಿ ಬೆಳೆದು ನೆಮ್ಮದಿಯ ಬದುಕು ಕಟ್ಟಿಕೊಂಡ ತಾಲ್ಲೂಕಿನ ಮಸಬಹಂಚಿನಾಳ ಗ್ರಾಮದ ಅಡವಿರಾವ್ ದೇಸಾಯಿ ಅವರು ಗುಲಾಬಿ ಹೂ ಬೆಳೆದು ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ.

ಅಡವಿರಾವ್ ದೇಸಾಯಿ ಅವರು ಪಾರಂಪರಿಕ ಕೃಷಿಯಿಂದ ಬೇಸತ್ತು ಕೃಷಿಯಲ್ಲಿ ಏನಾದರೂ ಬದಲಾವಣೆ ಮಾಡಬೇಕು ಎಂದು ಯೋಚಿಸಿದಾಗ ಗ್ರಾಮ ಪಂಚಾಯಿತಿಯಲ್ಲಿ ನಡೆಯುವ ರೋಜಗಾರ ದಿನಾಚರಣೆಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಹಾಯದಿಂದ 2022-23 ನೇ ಸಾಲಿನ ಮೀರಾಬಲ್ ತಳಿಯ ಗುಲಾಬಿ ಸಸಿ ನಾಟಿ ಮಾಡಿದ್ದರು.

ನನಗೆ ವಯಸ್ಸಾಗಿದೆ ಅದಕ್ಕಾಗಿ ಹೆಚ್ಚು ಶ್ರಮವಿಲ್ಲದೇ ಕೃಷಿ ಮಾಡಬೇಕು ಎಂದು ಯೋಚಿಸಿದಾಗ ಹೂವಿನ ಕೃಷಿ ಮಾಡಬೇಕು ಅಂತ ಯೋಚನೆ ಬಂತು. ಈಗ ಪ್ರತಿದಿನ 8-10 ಕೆಜಿ ಹೂವು ಬರುತ್ತದೆ. ಗಿಡಗಳು ದೊಡ್ಡದಾದಲ್ಲಿ ಇನ್ನೂ ಹೆಚ್ಚಿನ ಹೂಗಳು ಬರುತ್ತವೆ ಇನ್ನೂ ಹೆಚ್ಚಿನ ಆದಾಯ ಕಂಡುಕೊಳ್ಳಬಹುದು ಎನ್ನುತ್ತಾರೆ ರೈತ ಅಡವಿರಾವ್ ದೇಸಾಯಿ.

ನರೇಗಾ ಯೋಜನೆಯಿಂದ ರೈತರಿಗೆ ಬಹಳ ಅನುಕೂಲವಾಗುತ್ತಿದ್ದು ತೋಟಗಾರಿಕೆ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಿತ್ತು ಇದರಿಂದ ರೈತರ ಆದಾಯ ದ್ವಿಗುಣಗೊಳ್ಳುತ್ತಿದೆ.

-ಸಂತೋಷ್ ಬಿರಾದಾರ ತಾಲ್ಲೂಕ ಪಂಚಾಯಿತಿ ಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.