ಕೊಪ್ಪಳ: ನಗರದ ಮರ್ದಾನ್ ಎಗೈಬ್ ದರ್ಗಾದ ಭವನದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಪ್ರಯುಕ್ತ ಪೂರ್ವಭಾವಿ ಸಭೆ ನಡೆಯಿತು.

ಕೊಪ್ಪಳ ಮುಸ್ಲಿಮ್ ಪಂಚ್ ಕಮಿಟಿಗಳ ಒಕ್ಕೂಟದ ಅಧ್ಯಕ್ಷ ಬಾಬುಸಾಬ ಮಕಂದಾರ್ ಮಾತನಾಡಿ, ಟಿಪ್ಪು ಜಯಂತ್ಯುತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಾವುದೇ ಲೋಪವಾಗದಂತೆ ಅಚ್ಚುಕಟ್ಟಾಗಿ ವಿಜೃಂಭಣೆಯಿಂದ ಆಚರಿಸಲು ಪ್ರತಿಯೊಬ್ಬರು ಬದ್ಧರಾಗಬೇಕು. ಕನ್ನಡಿಗ ಟಿಪ್ಪು ಆಚರಣೆ ಒಂದು ಹೆಮ್ಮೆಯ ಸಂಕೇತವಾಗಿದೆ. ಬ್ರಿಟಿಷರ ವಿರುದ್ಧ ಹೋರಾಡಿದ ಧೀರ ಟಿಪ್ಪು ಜನ್ಮದಿನದ ಸಂಭ್ರಮವು ಒಂದು ಮಾದರಿ ಆಚರಣೆಯಾಗಬೇಕು ಎಂದರು.

ಜನಪರ ಸಂಘಟನೆಯ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್ ಮಾತನಾಡಿ, ಮೈಸೂರು ಹುಲಿ ಎಂದೇ ಖ್ಯಾತಿ ಪಡೆದ ಟಿಪ್ಪು ಅವರ ಜಯಂತ್ಯುತ್ಸವವು ಶಿಸ್ತುಬದ್ದವಾಗಿ ಆಚರಿಸಲು ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು.

ಜಯಂತಿ ಆಚರಣೆ ವೇದಿಕೆಯ ಮುಖ್ಯಸ್ಥ ಅಬ್ದುಲ್ ಖೈಯ್ಯೂಮ್ ಬಳ್ಳಾರಿ ಮಾತನಾಡಿ, ಶೀಘ್ರದಲ್ಲಿ ಜಯಂತಿ ಆಚರಣೆಯ ಸ್ಥಳ ಮತ್ತು ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ಹೇಳಿದರು.

ದೇವರಾಜ್ ಅರಸ್ ಕಾಲೊನಿಯ ಮುಸ್ಲಿಂ ಪಂಚ್ ಕಮಿಟಿ ಅಧ್ಯಕ್ಷ ಸೈಯ್ಯದ್ ನಾಸಿರ್ ಕಂಠಿ, ಪಲ್ಟನ್ ಬಡಾವಣೆಯ ಪೀರ್ ಪಾಷಾ ಖಾದ್ರಿ ಮಸೀದಿಯ ಅಧ್ಯಕ್ಷ ಗೈಬು ಸಾಬ್ ಚಟ್ನಿ, ಹಜರತ್ ಗಂಜೆ ಶಹೀದ್ ಬಾಬಾ ದರ್ಗಾ ಕಮಿಟಿಯ ಅಧ್ಯಕ್ಷ ಸೈಯ್ಯದ್ ಮಹೆಬೂಬ್ ಮಚ್ಚಿ, ಅಲ್ ಮದತ್ ಎಜುಕೇಶನ್ ಮತ್ತು ವೆಲ್ಫೇರ್ ಸಂಸ್ಥೆಯ ಮುಖಂಡ ಸಿರಾಜ್ ಕೋಲ್ಕಾರ್ ಮಾತನಾಡಿದರು.

ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ತಾಲ್ಲೂಕು ಉಪಾಧ್ಯಕ್ಷ ಮೌಲಾ ಹುಸೇನ್ ಹಣಗಿ, ಮುಖಂಡ ಬಶೀರ್ ಅಹಮದ್ ದಫೇದಾರ್ ಟೈಲರ್, ಅಯ್ಯುಬ್ ಬಹದ್ದೂರ ಖಾನ್, ಶ್ರೀಶೈಲ್ ನಗರದ ಮುಸ್ಲಿಮ್ ಪಂಚ್ ಕಮಿಟಿಯ ಕಾರ್ಯದರ್ಶಿ ಹಝರತ್ ಅಲಿ, ಉದ್ಯಮಿ ನಝೀರ್ ಅಹ್ಮದ್ ಆದೋನಿ, ತೌಸಿಫ್ ಮಾಳೆಕೊಪ್ಪ, ಫಾರೂಕ್ ಅತ್ತಾರ್, ಅರ್ಷದ್ ಶೇಖ್, ಸೈಯ್ಯದ್ ಹಯಾತ್ ಪೀರ್ ಹುಸೇನಿ , ನಿಜಾಮುದ್ದೀನ್ ಮಾಳೆಕೊಪ್ಪ ಸಲೀಮ್ ಖಾದ್ರಿ ಸೇರಿ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.