ಕನಕಗಿರಿ (ಕೊಪ್ಪಳ ಜಿಲ್ಲೆ): ಎರಡು ದಿನಗಳ ಹಿಂದೆ ಸುರಿದ ಜೋರು ಮಳೆಗೆ ನೆಂದು ಹೋಗಿದ್ದ ಮನೆ ಕುಸಿದು ಬಿದ್ದ ಪರಿಣಾಮ 24 ದಿನದ ಹೆಣ್ಣು ಮಗು ಸೇರಿ ಇಬ್ಬರು ಮೃತಪಟ್ಟಿದ್ದಾರೆ.

ಕನಕಗಿರಿ ತಾಲ್ಲೂಕಿನ ಜೀರಾಳ ಗ್ರಾಮದಲ್ಲಿ ಮಂಗಳವಾರ ಬೆಳಗಿನ ಜಾವ ಈ ಘಟನೆ ನಡೆದಿದ್ದು ಕನಕಮ್ಮ ಎಂಬುವರು ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದರು. ಮನೆಯ ಒಳಗಡೆ ಮಲಗಿದ್ದ ಕನಕಮ್ಮನ ತಾಯಿ ಫಕೀರಮ್ಮ ತಿಮ್ಮಣ್ಣ ಭೋವಿ (60) ಸ್ಥಳದಲ್ಲಿಯೇ ಮೃತಪಟ್ಟರೆ, ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿ ಮಗು ಮೃತಪಟ್ಟಿದೆ.

ಕನಕಮ್ಮನಿಗೆ ಕಾಲು ಮುರಿದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪತಿ ಕನಕಪ್ಪ ಮನೆಯ ಹೊರಗಡೆ ಮಲಗಿದ್ದರಿಂದ ಅವರಿಗೆ ಯಾವುದೇ ಅಪಾಯವಾಗಿಲ್ಲ.

ಮಳೆಯಿಂದಾಗಿ ಗೋಡೆಗಳು ನೆಂದು ಹೋಗಿದ್ದವು. ಮಂಗಳವಾರ ಬೆಳಗಿನ ಜಾವ ಜೋರಾಗಿ ಬೀಸಿದ ಗಾಳಿಗೆ ಚಾವಣೆಗೆ ಹಾಕಲಾಗಿದ್ದ ಸಿಮೆಂಟ್ ಸೀಟುಗಳು ಮನೆಯೊಳಗೆ ಮಲಗಿದ್ದವರ ಮೇಲೆ ಬಿದ್ದ್ದು ಪುಡಿಪುಡಿಯಾಗಿವೆ. ಅದರ ಅಡಿಯಲ್ಲಿಯೇ ಗೃಹಬಳಕೆ ಸಾಮಗ್ರಿಗಳು ಸಿಲುಕಿ ಹೋಗಿವೆ. ಇಬ್ಬರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ನೊಂದ ಕುಟುಂಬದವರ ಮನೆಗೆ ಧಾವಿಸಿ ಸಾಂತ್ವನ ಹೇಳುತ್ತಿದ್ದ ಚಿತ್ರಣ ಕಂಡು ಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.