ಪಾಂಡವಪುರ (ಮಂಡ್ಯ ಜಿಲ್ಲೆ): ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದ ಒಂದೇ ಕುಟುಂಬದ ಇಬ್ಬರು ಹಾಗೂ ಮತ್ತೊಬ್ಬ ಬಾಲಕ ಮುಳುಗಿ ಮೃತಪಟ್ಟಿರುವ ಧಾರುಣ ಘಟನೆ ತಾಲ್ಲೂಕಿನ ಬಳೇಹತ್ತಿಗುಪ್ಪೆ ಗ್ರಾಮದಲ್ಲಿ ಗುರುವಾರ ನಡೆದಿದೆ.

ಮಹದೇವಪ್ಪ–ಭಾರತಿ ದಂಪತಿಯ ಪುತ್ರರಾದ ಕಾರ್ತಿಕ್ (10), ಚಂದನ್ (11) ಹಾಗೂ ಮಲ್ಲಿಕಾರ್ಜುನ್–ಸುಮಾ ದಂಪತಿಯ ಪುತ್ರ ರಿತೇಶ್ (8) ಮೃತಪಟ್ಟವರು. ಕಾರ್ತಿಕ್ ಹಾಗೂ ಚಂದನ್ ಪಾಂಡವಪುರದ ನಿರ್ಮಲಾ ಕಾನ್ವೆಂಟ್ ವಿದ್ಯಾರ್ಥಿಗಳಿದ್ದು ಕ್ರಮವಾಗಿ 5, 6ನೇ ತರಗತಿಯಲ್ಲಿ ಓದುತ್ತಿದ್ದರು. ರಿತೇಶ್ ಬಳೇಹತ್ತಿಗುಪ್ಪೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದ.

ಶಾಲೆಗೆ ರಜೆ ಇರುವ ಕಾರಣ ಬಾಲಕರು ಗ್ರಾಮದ ಹೊರಹೊಲಯದಲ್ಲಿರುವ ಕೃಷಿ ಹೊಂಡಕ್ಕೆ ಈಜಲು ತೆರಳಿದ್ದರು. ಹೊಂಡದಲ್ಲಿ ತುಂಬಿದ್ದ ಕೆಸರಿನಲ್ಲಿ ಸಿಲುಕಿ ಮಕ್ಕಳು ಮೃತಪಟ್ಟಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಪಾಂಡವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.