ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಹಕಾರ ಸಂಘಗಳಲ್ಲಿ ಆಡಳಿತ ಮುಕ್ತವಾಗಿರಲಿ: ಪಿ.ಎಂ.ನರೇಂದ್ರಸ್ವಾಮಿ

Published : 16 ಸೆಪ್ಟೆಂಬರ್ 2024, 14:11 IST
Last Updated : 16 ಸೆಪ್ಟೆಂಬರ್ 2024, 14:11 IST
ಫಾಲೋ ಮಾಡಿ
Comments

ಮಳವಳ್ಳಿ: ಸಹಕಾರ ಸಂಘಗಳಿಗೆ ಆಯ್ಕೆಯಾದ ಪ್ರತಿನಿಧಿಗಳು ಅಭಿವೃದ್ಧಿ ಪರವಾಗಿ ಚಿಂತನೆ ನಡೆಸಿದಾಗ ಮಾತ್ರ ಸಂಘ ಪ್ರಗತಿ ಸಾಧಿಸಿ ರೈತರಿಗೆ ನೆರವಾಗಲಿದೆ ಎಂದು ಶಾಸಕ ಪಿ.ಎಂ. ನರೇಂದ್ರಸ್ವಾಮಿ ತಿಳಿಸಿದರು.

ತಾಲ್ಲೂಕಿನ ಶೆಟ್ಟಹಳ್ಳಿಯಲ್ಲಿ ಸೋಮವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಹಾಗೂ ಸಾಮಾನ್ಯ ಸೇವಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕೃಷಿಕರ ಬದುಕು ಉತ್ತಮವಾಗಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಅಭಿವೃದ್ಧಿ ಪರವಾಗಿ ಚಿಂತನೆ ನಡೆಸಬೇಕು. ಸಹಕಾರಿಗಳೇ ಸೇರಿ ತಮ್ಮ ಅಭಿವೃದ್ಧಿಯನ್ನು ತಾವೇ ಮಾಡಿಕೊಳ್ಳುವ ಕ್ಷೇತ್ರ ಸಹಕಾರಿ ಕ್ಷೇತ್ರ, ಸಹಕಾರಿ ಕ್ಷೇತ್ರದಲ್ಲಿ ಚುನಾಯಿತ ಪ್ರತಿನಿಧಿಗಳು ನಿಷ್ಠೆಯಿಂದ ಕೆಲಸ ಮಾಡಬೇಕು. ತಾಲ್ಲೂಕಿನ ಹಲವು ಉತ್ತಮ ಸಹಕಾರ ಸಂಘಗಳಿದ್ದು, ಇತರ ಸಂಘಗಳಿಗೆ ಸ್ಪೂರ್ತಿಯಾಗಿವೆ. ಆಡಳಿತ ವಿಚಾರದಲ್ಲಿ ಮುಕ್ತವಾಗಿರಬೇಕು’ ಎಂದು ಸಲಹೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮಾತನಾಡಿ, ‘ನಮ್ಮ ತಂದೆ ಜಿ.ಮಾದೇಗೌಡರು 40 ವರ್ಷಗಳ ಹಿಂದೆ ಸಂಘವನ್ನು ಉದ್ಘಾಟಿಸಿದ್ದರು. ಈಗ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ’ ಎಂದು ಶ್ಲಾಘಿಸಿದರು.

ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ. ಜೋಗಿಗೌಡ ಮಾತನಾಡಿ, ‘ಬಹುಪಾಲು ಸಂಘದ ಬಂಡವಾಳ ಹಾಕಿ ಉತ್ತಮ ಕಟ್ಟಡ ನಿರ್ಮಾಣ ಮಾಡಿದ್ದಾರೆ. ರೈತರಿಗೆ ಜಿಲ್ಲಾ ಸಹಕಾರ ಸಂಘದ ವತಿಯಿಂದ ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿದೆ’ ಎಂದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೆ.ಎಂ.ವೆಂಕಟೇಗೌಡ ಮಾತನಾಡಿ, ‘ಸಂಘವು ನಿರಂತರವಾಗಿ ರೈತರ ಪರವಾಗಿ ಕೆಲಸ ಮಾಡುತ್ತಿದ್ದು, ಸದಸ್ಯರಿಗೆ ಸಾಮಾನ್ಯ ಸೇವಾ ಕೇಂದ್ರ ತೆರೆದು ನಮ್ಮಲ್ಲಿ ಸವಲತ್ತುಗಳನ್ನು ನೀಡಲಾಗುವುದು’ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಸ್.ಕೆ.ಮನೋಹರ್ ಅರಸು, ಸಹಕಾರ ಸಂಘದ ಉಪಾಧ್ಯಕ್ಷ ಚಂದ್ರು, ನಿರ್ದೇಶಕರಾದ ಬಿಲ್ಲಯ್ಯ, ದಶರಥ, ಸಿದ್ದೇಗೌಡ, ಸಿದ್ದರಾಜು, ಕೆ.ಸಿ. ರಾಜಶೇಖರಮೂರ್ತಿ, ಪ್ರೇಮಾ, ದೊಡ್ಡಚೌಡಯ್ಯ, ವಿ.ಪಿ. ಉಮೇಶ್, ಸಿಇಒ ವೀರಪ್ಪ, ವಿವಿಧ ಸಹಕಾರ ಸಂಘಗಳ ಸಿಇಒಗಳಾದ ವೆಂಕಟೇಶ್, ರಮೇಶ್, ಕಿರುಗಾವಲು ಕೋ-ಅಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೃಷ್ಣಮೂರ್ತಿ, ಮುಖಂಡರಾದ ಗಿರೀಗೌಡ, ಕೆ.ಜೆ.ದೇವರಾಜು, ಆರ್.ಎನ್.ವಿಶ್ವಾಸ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT