ಆನೆಯ ರಂಪಾಟ; ಬೆಚ್ಚಿದ ಜನ
ಜಂಬೂ ಸವಾರಿಗೆ ಕರೆ ತಂದಿದ್ದ ಹಿರಣ್ಯ ಎಂಬ ಕುಮ್ಕಿ ಆನೆಯನ್ನು ಅಲಂಕಾರ ಮಾಡಿ, ಬನ್ನಿಮಂಟಪಕ್ಕೆ ಕರೆ ತರುವ ವೇಳೆಯಲ್ಲಿ ಶ್ರೀರಂಗನಾಥ ಸ್ವಾಮಿ ದೇವಾಲಯ ಸಮೀಪದ ಗಂಡಭೇರುಂಡ ವೃತ್ತದ ಬಳಿ ಅಡ್ಡಾದಿಡ್ಡಿ ಓಡಲು ಶುರು ಮಾಡಿತು. ಆನೆಯ ರಂಪಾಟ ನೋಡಿದ ಜನ ದಿಕ್ಕಾಪಾಲಾಗಿ ಓಡಿದರು. ತಕ್ಷಣ ಮಾವುತರು ಮತ್ತು ಕಾವಾಡಿಗರು ಆನೆಯನ್ನು ನಿಯಂತ್ರಿಸಿ, ಭಾರಿ ಅನಾಹುತ ತಪ್ಪಿಸಿದರು.