‘ಮೇಲುಕೋಟೆಯಲ್ಲಿ ಕೋತಿಗಳ ಉಪಟಳ ಹೆಚ್ಚಾದ ಪರಿಣಾಮ ಸ್ಥಳೀಯ ಗ್ರಾ.ಪಂ ಅಧಿಕಾರಿಗಳ ಸಹಕಾರದೊಂದಿಗೆ ಕೋತಿ ಸೆರೆಹಿಡಿದು ಅರಣ್ಯಕ್ಕೆ ಬಿಡಲಾಗಿತ್ತು. ಇದೀಗ ಮತ್ತೆ ಉಪಟಳ ಹೆಚ್ಚಾಗಿದ್ದು. ಶಾಶ್ವತ ಪರಿಹಾರ ಕಲ್ಪಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ’
ರಾಜೇಶ್ವರಿ ವನ್ಯಜೀವಿ ವಲಯಾರಣ್ಯಾಧಿಕಾರಿ
ಕೃಷಿ ಜಮೀನಿನಲ್ಲೂ ತೊಂದರೆ
ಕೋತಿಗಳ ಹಾವಳಿಯಿಂದ ರೈತರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೇಲುಕೋಟೆ ಬೆಟ್ಟದ ತಪ್ಪಲಿನ ನೀರಾವರಿ ವಂಚಿತ ಜಮೀನಿನಲ್ಲಿ ರೈತರು ಕೊಳವೆಬಾವಿ ಕೊರೆಸಿ ತರಕಾರಿ ಬೆಳೆಯುತ್ತಾರೆ. ಆದರೆ ಕೋತಿಗಳ ಉಪಟಳ ಕೃಷಿ ಜಮೀನಿಗೂ ವಿಸ್ತರಿಸಿದ್ದು. ರೈತ ಬೆಳೆ ನಷ್ಟಕ್ಕೆ ಸಿಲುಕಿ ಬೇಸಾಯ ಮಾಡುವುದನ್ನೇ ಕೈ ಬಿಡುವ ಪರಿಸ್ಥಿತಿಗೆ ತಲುಪಿದ್ದಾನೆ.