ನಾಗಮಂಗಲ: ಗಣಪತಿ ಮೂರ್ತಿ ವಿಸರ್ಜನೆ ವೇಳೆ ನಡೆದಿದ್ದ ಗಲಭೆಯಲ್ಲಿ ನಷ್ಟ ಅನುಭವಿಸಿದ್ದ ಅಂಗಡಿ ಮಾಲೀಕರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಶುಕ್ರವಾರ ಪಟ್ಟಣದ ತಾಲ್ಲೂಕು ಆಡಳಿಸೌಧದ ಆವರಣದಲ್ಲಿ ಒಟ್ಟು ₹76.45 ಲಕ್ಷ ಪರಿಹಾರ ವಿತರಿಸಿದರು.

ಹಾನಿಗೊಳಗಾಗಿದ್ದ ಕಟ್ಟಡ ಮಾಲೀಕರಿಗೆ ₹48.95 ಲಕ್ಷ ಹಾಗೂ ವ್ಯಾಪಾರಸ್ಥರಿಗೆ ₹27.50 ಲಕ್ಷ ಪರಿಹಾರ ವಿತರಿಸಿದರು. ಜೊತೆಗೆ, 42 ಜನರಿಗೂ ವೈಯಕ್ತಿಕವಾಗಿ ತಲಾ ₹10 ಸಾವಿರ ನಗದನ್ನು ನೀಡಿದರು.

ನಂತರ ಮಾತನಾಡಿ, ‘ಘಟನೆಯಿಂದ ಕೆಲವರು ಖುಷಿ ಪಟ್ಟಿರಬಹುದು, ಕೆಲವರು ಪ್ರೋತ್ಸಾಹ ನೀಡಿರಬಹುದು, ಕೆಲವರು ಅದನ್ನು ಪ್ರಾಮಾಣಿಕವಾಗಿ ನಿಯಂತ್ರಿಸಲು ಪ್ರಯತ್ನಿಸಿದ್ದಾರೆ. ಇಂಥ ಘಟನೆ ತಾಲ್ಲೂಕಿನ ಇತಿಹಾಸದಲ್ಲಿ ನಡೆದಿರಲಿಲ್ಲ’ ಎಂದರು.

‘ಹಿಂದೆ ಇಂಥ ಘಟನೆಗಳು ನಡೆದಾಗ, ಕೇವಲ ಶೇ 10ರಷ್ಟು ನಷ್ಟವನ್ನು ಹಿಂದಿನ ಸರ್ಕಾರಗಳು ಭರಿಸಿವೆ. ಆದರೆ ನಾನು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡು ಶಕ್ತಿಮೀರಿ ಪರಿಹಾರ ಕೊಡಿಸಿದ್ದೇನೆ’ ಎಂದರು.

ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಪುರಸಭೆ ಅಧ್ಯಕ್ಷ ಅಲಿ ಅನ್ಸರ್ ಪಾಷಾ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್, ತಹಶೀಲ್ದಾರ್ ಆದರ್ಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.