ಮಂಡ್ಯ: ಬಾಲಿವುಡ್ ನಟಿ ಕಂಗನಾ ರನೌತ್ ಅವರ ಅಂಗರಕ್ಷಕ ಎನ್ನಲಾದ ಯುವಕನೊಬ್ಬನನ್ನು ಮುಂಬೈ ಅಂಧೇರಿ ಪೊಲೀಸರು ಕೆ.ಆರ್.ಪೇಟೆ ತಾಲ್ಲೂಕು, ಕಿಕ್ಕೇರಿ ಠಾಣೆ ಪೊಲೀಸರ ಸಹಕಾರದೊಂದಿಗೆ ಶನಿವಾರ ಬಂಧಿಸಿದ್ದಾರೆ.

ಕಿಕ್ಕೇರಿ ಸಮೀದ ಹೆಗ್ಗಡಹಳ್ಳಿ ಗ್ರಾಮದ ಕುಮಾರ್ ಹೆಗ್ಡೆ ಬಂಧಿತ ಆರೋಪಿ. ಈತ ಹಲವು ವರ್ಷಗಳಿಂದ ಮುಂಬೈನಲ್ಲಿ ನಟಿ ಕಂಗನಾ ರನೌತ್‌ಗೆ ಅಂಗರಕ್ಷಕನಾಗಿ ಕೆಲಸ ಮಾಡುತ್ತಿದ್ದ. ಅಲ್ಲಿ ಯುವತಿಯೊಬ್ಬರನ್ನು ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರ ಎಸಗಿದ್ದಾನೆ. ಕೊನೆಗೆ ಬೇರೆ ಯುವತಿಯನ್ನು ವಿವಾಹವಾಗಲು ಸಿದ್ಧನಾಗಿದ್ದಾನೆ ಎಂದು ಆರೋಪಿಸಿ ಯುವತಿ ಮುಂಬೈ ಅಂಧೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಆತನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಲಾಕ್‌ಡೌನ್ ಘೋಷಣೆಯಾದ ನಂತರ ಆರೋಪಿ ಕುಮಾರ್ ಹೆಗ್ಡೆ ಹುಟ್ಟೂರು ಹೆಗ್ಗಡಹಳ್ಳಿಯಲ್ಲಿ ತಲೆಮರೆಸಿಕೊಂಡಿದ್ದ. ಸೂಕ್ತ ಮಾಹಿತಿಯೊಂದಿಗೆ ಬಂದಿದ್ದ ಮುಂಬೈ ಪೊಲೀಸರು ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಬಂಧಿಸಿದ್ದಾರೆ.

‘ಆರೋಪಿ ಹುಟ್ಟೂರಿನಲ್ಲಿರುವ ಮಾಹಿತಿಯೊಂದಿಗೆ ಅಂಧೇರಿ ಅಪರಾಧ ವಿಭಾಗದ ಪೊಲೀಸರು ಇಲ್ಲಿಗೆ ಬಂದಿದ್ದರು. ಗ್ರಾಮದಲ್ಲಿದ್ದ ಕುಮಾರ್ ಹೆಗ್ಡೆಯನ್ನು ಬಂಧಿಸಿ ಕೆ.ಆರ್.ಪೇಟೆ ಸಿವಿಲ್ ನ್ಯಾಯಾದೀಶರ ಎದುರು ಹಾಜರುಪಡಿಸಿ ಮುಂಬೈಗೆ ಕರೆದೊಯ್ದರು’ ಎಂದು ಕಿಕ್ಕೇರಿ ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.