ಮೇಲುಕೋಟೆ (ಮಂಡ್ಯ ಜಿಲ್ಲೆ): ಸರ್ಕಾರಿ ಪ್ರೌಢಶಾಲೆಯೊಂದರಲ್ಲಿ ಕ್ರೀಡೆ ಹೇಳಿಕೊಡುವ ನೆಪದಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿ, ಅರೆನಗ್ನ ಚಿತ್ರಗಳನ್ನು ತೆಗೆದು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಆರೋಪಿ ಯೋಗೇಶ್ ಎಂಬುವವನನ್ನು ಮೇಲುಕೋಟೆ ಪೊಲೀಸರು ಪೋಕ್ಸೋ ಕಾಯ್ದೆ ಅಡಿ ಬಂಧಿಸಿದ್ದಾರೆ.

ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಯಾದ ಆರೋಪಿಯು ಸ್ವಯಂಸೇವಕನಾಗಿ ಅದೇ ಶಾಲೆಯ ವಿದ್ಯಾರ್ಥಿಗಳಿಗೆ ಕ್ರೀಡೆ ಮತ್ತು ಚಿತ್ರಕಲೆಗಳನ್ನು ಹೇಳಿಕೊಡುತ್ತಿದ್ದ. ವಿದ್ಯಾರ್ಥಿನಿಯರಿಗೆ ಬೆದರಿಕೆಯೊಡ್ಡಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ಆತನ ವರ್ತನೆಯಿಂದ ಬೇಸತ್ತ ವಿದ್ಯಾರ್ಥಿನಿಯರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಗೆ ಕಿರುಕುಳದ ಬಗ್ಗೆ ಎಳೆ ಎಳೆಯಾಗಿ ವಿವರಿಸಿ ಪತ್ರ ಬರೆದಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.

ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಎಸ್.ಎಂ. ಶೈಲಜಾ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ದೂರಿನ ಸಾರಾಂಶ:

‘ನಮಗೆ ಕ್ರೀಡೆಯಲ್ಲಿ ಆಸಕ್ತಿ ಇರುವುದರಿಂದ ಆರೋಪಿಯನ್ನು ಅಣ್ಣನೆಂದು ಭಾವಿಸಿ ಕಲಿಯುತ್ತಿದ್ದೆವು. ಆದರೆ ಆತ ನಮಗೆ ಮೋಸ ಮಾಡಿದ. ಕ್ರೀಡಾ ಕೊಠಡಿಯಲ್ಲಿ ರಾತ್ರಿಯವರೆಗೂ ಇರುತ್ತಿದ್ದ. ನಾವು ಬಟ್ಟೆ ಬದಲಾಯಿಸುವಾಗ ನಮ್ಮ ಅರೆನಗ್ನ ಫೋಟೊಗಳನ್ನು ಕ್ಲಿಕ್ಕಿಸಿ ಅದನ್ನೇ ಮುಂದಿಟ್ಟುಕೊಂಡು ಬೆದರಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ಒಪ್ಪದಿದ್ದರೆ ಪಾಲಕರ ವ್ಯಾಟ್ಸ್ಆ್ಯಪ್ ಗ್ರೂಪ್ಗಳಿಗೆ ಫೋಟೊಗಳನ್ನು ಕಳುಹಿಸುವುದಾಗಿ ಬೆದರಿಸುತ್ತಿದ್ದ. ಅದರಿಂದ ನಾವು ಮಾನಸಿಕವಾಗಿ ಅನುಭವಿಸಿದ ನೋವು ಹೇಳತೀರದು. ಕೆಲವೊಮ್ಮೆ ಆತ್ಮಹತ್ಯೆ ನಿರ್ಧಾರಕ್ಕೂ ಯೋಚಿಸಿದ್ದೇವೆ’ ಎಂದು ನೊಂದ ನಾಲ್ವರು ವಿದ್ಯಾರ್ಥಿನಿಯರು ಪೊಲೀಸರಿಗೆ ದೂರು ನೀಡಿದ್ದಾರೆ.

‘ಫೌಂಡೇಷನ್ ಒಂದರ ಹೆಸರಿನಲ್ಲಿ ಚಿತ್ರಕಲೆ ಕಲಿಸುತ್ತಿದ್ದ ಆರೋಪಿಯು, ರಾತ್ರಿ ವೇಳೆ ಚಿತ್ರಕಲೆ ಕಲಿಯಲು ಹೋದಾಗ ನಮ್ಮೆಲ್ಲರ ಜತೆ ಕೆಟ್ಟದಾಗಿ ವರ್ತಿಸುತ್ತಿದ್ದ’ ಎಂದು ದೂರಿದ್ದಾರೆ.

‘ಮುಖ್ಯ ಶಿಕ್ಷಕರು ಆರೋಪಿಯನ್ನು ಯಾವ ಆಧಾರದಲ್ಲಿ ದೈಹಿಕ ಶಿಕ್ಷಣ ಶಿಕ್ಷಕನಾಗಿ ನೇಮಿಸಿದ್ದರು? ರಾತ್ರಿ ವೇಳೆ ಅವರು ಅಲ್ಲೇ ವಾಸ್ತವ್ಯ ಹೂಡಿದರೂ ಯಾಕೆ ಕ್ರಮ ಕೈಗೊಂಡಿಲ್ಲ. ದೈಹಿಕ ಶಿಕ್ಷಣ ಶಿಕ್ಷಕರಿಲ್ಲದೆ ಈ ಘಟನೆಗಳು ನಡೆದಿವೆ. ಶಾಲೆಯ ಶಿಕ್ಷಕರನ್ನು ಮೊದಲು ವಿಚಾರಣೆಗೆ ಒಳಪಡಿಸಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.