ಬೆಂಗಳೂರು: ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಯಾವುದೇ ರೀತಿಯ ಬಿರುಕು ಕಂಡುಬಂದಿಲ್ಲ ಎಂದು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಜೈಪ್ರಕಾಶ್ ತಿಳಿಸಿದ್ದಾರೆ.

ಸಮೀಪದ ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಅಣೆಕಟ್ಟೆಯಲ್ಲಿ ಬಿರುಕು ಉಂಟಾಗಿದೆ ಎಂಬ ಆರೋಪದ ಕುರಿತು ಶುಕ್ರವಾರ ಸ್ಪಷ್ಟನೆ ನೀಡಿರುವ ಅವರು, 'ಮಳೆಗಾಲ ಆರಂಭಕ್ಕೂ ಮೊದಲು ಅಣೆಕಟ್ಟೆ ಸುರಕ್ಷತೆ ಪರಿಶೀಲನೆ ಸಮಿತಿ ತಪಾಸಣೆ ನಡೆಸಿದೆ. ಅಣೆಕಟ್ಟೆಯ ಪ್ರಧಾನ ಗೋಡೆಯಲ್ಲಿ ಎಲ್ಲಿಯೂ ಬಿರುಕು ಅಥವಾ ರಚನಾತ್ಮಕ ದೋಷಗಳು ಪತ್ತೆಯಾಗಿಲ್ಲ' ಎಂದು ತಿಳಿಸಿದ್ದಾರೆ.

ತಜ್ಞರ ಸಮಿತಿಯ ಶಿಫಾರಸಿನಂತೆ ಅಣೆಕಟ್ಟೆ ಬಲವರ್ಧನೆ ಕಾಮಗಾರಿ ಕೈಗೊಳ್ಳಲಾಗಿದೆ. ಕಲ್ಲುಗಳ ಸಂದುಗಳಿಗೆ ಗಾರೆ ಬಳಿಯಲಾಗಿದೆ' ಎಂದು ತಿಳಿಸಿದ್ದಾರೆ.

136 ಕ್ರಸ್ಟ್ ಗೇಟ್ ಗಳ ಬದಲಾವಣೆ ಕಾಮಗಾರಿಯನ್ನೂ ಸಮಿತಿ ಪರಿಶೀಲಿಸಿದೆ. ಅಣೆಕಟ್ಟೆಗೆ ಯಾವುದೇ ರೀತಿಯ ತೊಂದರೆಯೂ ಇಲ್ಲ ಎಂದಿದ್ದಾರೆ.

ಅಕ್ರಮ ಗಣಿಗಾರಿಕೆಯಿಂದ ಕನ್ನಂಬಾಡಿ ಕಟ್ಟೆಗೆ ಕಂಟಕ ಎದುರಾಗಿದೆ. ಕೆಆರ್‌ಎಸ್ ಅಣೆಕಟ್ಟೆಯ ಬಿರುಕು ಮುಚ್ಚಲು ಕಾಂಗ್ರೆಸ್ ಸರ್ಕಾರ ₹40 ಕೋಟಿ ಬಿಡುಗಡೆ ಮಾಡಿತ್ತು. ಅದು ಏನಾಯಿತು. ಈ ಸಂಬಂಧ ತನಿಖೆಯಾಗಬೇಕು ಎಂದು ಮಂಡ್ಯ ಸಂಸದೆಆಗ್ರಹಿಸಿದರು. ನಂತರ ಸುಮಲತಾ ಮತ್ತು ಜೆಡಿಎಸ್ ನಾಯಕರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿತ್ತು.

ಅಕ್ರಮ ಗಣಿಗಾರಿಕೆಯಿಂದ ಕನ್ನಂಬಾಡಿ ಕಟ್ಟೆಗೆ ಕಂಟಕ: ಸುಮಲತಾ

ಇವುಗಳನ್ನೂ ಓದಿ

ಕೆಆರ್ಎಸ್ನಲ್ಲಿ ಬಿರುಕು ಇಲ್ಲ: ಎಂಜಿನಿಯರ್

ಬೇಬಿಬೆಟ್ಟ: ನಿತ್ಯ 1,200 ಟ್ರಕ್ ಜಲ್ಲಿ ರವಾನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.