ಕೆ.ಆರ್.ಪೇಟೆ: ತಾಲ್ಲೂಕಿನ ನಾಟನಹಳ್ಳಿ ಗ್ರಾಮದ ಬಳಿ ಹೇಮಾವತಿ ಮಂದಗೆರೆ ಎಡದಂಡೆ ನಾಲೆಯಲ್ಲಿ ಮಂಗಳವಾರ ಸಂಜೆ ಈಜಲು ತೆರಳಿದ್ದ ಮೂವರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಮೈಸೂರಿನ ಕುಂಬಾರಕೊಪ್ಪಲಿನ ಮಂಜು(20), ಲೋಕನಾಯಕ ನಗರದ ರವಿ(22), ಆಟೊ ಚಾಲಕ ಮೊಗರಹಳ್ಳಿ ಮಂಟಿಯ ನಿವಾಸಿ ರವಿ (27) ಮೃತಪಟ್ಟವರು.

ತಾಲ್ಲೂಕಿನ ಬಂಡಿಹೊಳೆ ಗ್ರಾಮದ ಸಮೀಪದಲ್ಲಿರುವ ಶಕ್ತಿದೇವತೆ ಚಂದಗೋಳಮ್ಮ ಕ್ಷೇತ್ರಕ್ಕೆ 8 ಮಂದಿ ಯುವಕರು ಬಂದಿದ್ದರು. ಮಂದಗೆರೆ ಎಡದಂಡೆ ನಾಲೆಯಲ್ಲಿ ಎಲ್ಲರೂ ಈಜಲು ತೆರಳಿದ್ದರು. ಐವರು ಮಾತ್ರ ಮೇಲೆ ಬಂದಿದ್ದು ಮೂವರು ಮುಳುಗಿ ಮೃತಪಟ್ಟಿದ್ದಾರೆ.

ಶವಗಳ ಪತ್ತೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ರಾತ್ರಿವರೆಗೂ ಶೋಧ ಕಾರ್ಯಾಚರಣೆ ನಡೆಸಿದರು. ಆದರೆ ಮೃತದೇಹಗಳು ಪತ್ತೆಯಾಗಿಲ್ಲ. ಬುಧವಾರ ಬೆಳಿಗ್ಗೆ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆ.ಆರ್.ಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.