ಶ್ರೀರಂಗಪಟ್ಟಣ: ಈಜಾಡಲು ಕಾವೇರಿ ನದಿಗಿಳಿದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಪಟ್ಟಣ ಸಮೀಪದ ಗಂಜಾಂನ ನಿಮಿಷಾಂಬಾ ದೇವಾಲಯದ ಬಳಿ ಗುರುವಾರ ನಡೆದಿದೆ.

ಚೆನ್ನೈ ನಗರದ ಯುವರಾಜ್ ಅವರ ಮಗ ವಿಶಾಲ್ (19) ಮತ್ತು ಮಾನುಸಿಂಗ್ ಅವರ ಮಗ ರೋಹನ್ (18) ಸಾವನ್ನಪ್ಪಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಶವಗಳನ್ನು ನದಿಯಿಂದ ಮೇಲೆ ತೆಗೆದಿದ್ದು, ಪಟ್ಟಣ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಯಿತು.

ವಿಶಾಲ್ ಮತ್ತು ರೋಹನ್ ಸಹೋದರಿಯರ ಮಕ್ಕಳಾಗಿದ್ದು, ಚೆನ್ನೈನಿಂದ ಮೈಸೂರಿನ ತಮ್ಮ ಅಜ್ಜಿಯ ಮನೆಗೆ ಬಂದಿದ್ದರು. ಅಲ್ಲಿಂದ ತಮ್ಮ ಬಂಧುಗಳ ಜತೆಯಲ್ಲಿ ಗುರುವಾರ ಮಧ್ಯಾಹ್ನ ನಿಮಿಷಾಂಬಾ ದೇವಾಲಯಕ್ಕೆ ಆಗಮಿಸಿದ್ದರು. ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಈಜಲು ಇಬ್ಬರೂ ನದಿಗೆ ಇಳಿದಿದ್ದು, ಸುಳಿಗೆ ಸಿಲುಕಿ ಅಸುನೀಗಿದ್ದಾರೆ ಎಂದು ಎಸ್ಐ ಶಿವಲಿಂಗ ದಳವಾಯಿ ತಿಳಿಸಿದ್ದಾರೆ.

ಇಬ್ಬರಿಗೂ ಈಜು ಬರುತ್ತಿರಲಿಲ್ಲ ಎಂದು ತಿಳಿದು ಬಂದಿದೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.