ಮಂಡ್ಯ: ಕಳೆದೆರಡು ತಿಂಗಳಿಂದ ₹500ರ ಗಡಿ ದಾಟಿದ್ದ ನಾಟಿ ಬೆಳ್ಳುಳ್ಳಿ ಬೆಲೆ ಈಗ ಕೊಂಚ ಇಳಿಕೆ ಕಂಡಿದೆ. ₹100ಕ್ಕೆ 5–6 ಕೆ.ಜಿ ಮಾರಾಟವಾಗುತ್ತಿದ್ದ ಈರುಳ್ಳಿ ಬೆಲೆ ಈಗ ಏರಿಕೆಯತ್ತ ಸಾಗುತ್ತಿದೆ.

ಬೆಳ್ಳುಳ್ಳಿ ಬೆಲೆ ತೀವ್ರಗತಿಯಲ್ಲಿ ಏರಿಕೆಯಾಗಿದ್ದ ಕಾರಣ ಸಾಮಾನ್ಯ ಜನರು ಬೆಳ್ಳುಳ್ಳಿಗೆ ಪರ್ಯಾಯವಾದ ವಸ್ತುಗಳನ್ನೇ ಬಳಕೆ ಮಾಡುತ್ತಿದ್ದರು. ಕಾಲು ಕೆ.ಜಿ ಬೆಳ್ಳುಳ್ಳಿ ₹ 180ರವರೆಗೂ ಬೆಲೆ ಏರಿಕೆ ಕಂಡಿತ್ತು. ಈಗ ಬೆಲೆ ಕೊಂಚ ಕಡಿಮೆಯಾಗಿದ್ದು ಕೆ.ಜಿ ₹ ₹ 350ಕ್ಕೆ ಮಾರಾಟವಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಕೆ ಕಾಣುವ ಸಾಧ್ಯತೆ ಇದೆ ಎಂದು ವರ್ತಕರು ಹೇಳುತ್ತಾರೆ.

ಕಳೆದ ಎರಡು ವಾರಗಳಲ್ಲಿ ಈರುಳ್ಳಿ ಬೆಲೆ ತೀವ್ರವಾಗಿ ಇಳಿಕೆಯಾಗಿತ್ತು. ₹ 100ಕ್ಕೆ 7 ಕೆ.ಜಿ ವರೆಗೂ ಮಾರಾಟವಾಗಿತ್ತು. ಆದರೆ ಈ ವಾರ ಬೆಲೆಯಲ್ಲಿ ಏರಿಕೆಯಾಗಿದ್ದು ಕೆ.ಜಿ ₹ 35ಕ್ಕೆ ಮಾರಾಟವಾಗುತ್ತಿದೆ. ₹ 100ಕ್ಕೆ 3 ಕೆ.ಜಿಯಷ್ಟೇ ದೊರೆಯುತ್ತಿದೆ. ಬಿಸಿಲ ಬೇಗೆಯಿಂದಾಗಿ ಹೆಚ್ಚಿನ ಈರುಳ್ಳು ಮಾರುಕಟ್ಟೆಗೆ ಬಾರದ ಪರಿಣಾಮ ಬೆಲೆಯಲ್ಲಿ ಏರಿಕೆಯಾಗಿದೆ.

ತರಕಾರಿಗಳಲ್ಲಿ ಬೀನ್ಸ್ ₹ 80ರ ಗಡಿ ದಾಟಿದ್ದು ದುಬಾರಿಯಾಗಿದೆ. ಇನ್ನುಳಿದಂತೆ ತರಕಾರಿಗಳ ಬೆಲೆ ನಿಯಂತ್ರಣದಲ್ಲಿದೆ. ಟೊಮೆಟೊ ಬೆಲೆ ಇಳಿಕೆಯಾಗಿದ್ದು ₹ 10ಕ್ಕೆ ಕೆ.ಜಿ ದೊರೆಯುತ್ತಿದೆ. ಬಿಸಿಲಿನ ಕಾರಣದಿಂದಾಗಿ ನಿಂಬೆಹಣ್ಣು ಬೆಲೆ ಏರಿಕೆಯಾಗಿದ್ದು ₹ 10ಕ್ಕೆ 1 ಮಾರಾಟವಾಗುತ್ತಿದೆ. ಸೌತೆಕಾಯಿ ಕೂಡ ₹ 10ಕ್ಕೆ 1 ಮಾರಾಟವಾಗುತ್ತಿದೆ.

ಮಂಗಳೂರುಸೌತೆ, ಎಲೆಕೋಸು, ಬೂದುಗುಂಬಳ, ಬೆಂಡೆಕಾಯಿ, ಸಿಹಿಗುಂಬಳ ₹25, ಫಾರಂಬೀನ್ಸ್, ಆಲೂಗೆಡ್ಡೆ, ಸಿಹಿಗೆಣಸು, ಮರಗೆಣಸು, ಬೀಟ್‌ರೂಟ್, ಮೂಲಂಗಿ, ಹೂಕೋಸು, ಹಾಗಲಕಾಯಿ ₹30, ಸೀಮೆಬದನೆಕಾಯಿ, ಕ್ಯಾರೆಟ್, ಬದನೆಕಾಯಿ, ಪಡವಲಕಾಯಿ, ಸೋರೆಕಾಯಿ, ಗೆಡ್ಡೆಕೋಸು ₹ 40ರಂತೆ ಮಾರಾಟವಾಗುತ್ತಿವೆ.

ದಪ್ಪಮೆಣಸಿನಕಾಯಿ, ಗೋರಿಕಾಯಿ, ಸುವರ್ಣಗೆಡ್ಡೆ, ತಗಣಿಕಾಯಿ, ಅವರೆಕಾಯಿ, ಹಸಿರುಮೆಣಸಿನಕಾಯಿ, ಭಜಿಮೆಣಸಿನಕಾಯಿ ₹50, ರಾಜ್‌ಈರುಳ್ಳಿ, ಹಸಿಬಟಾಣಿ, ಫಾರಂಬೆಳ್ಳುಳ್ಳಿ ₹150 ರಿಂದ ₹280 ಮಾರಾಟವಾಗುತ್ತಿವೆ. ನುಗ್ಗೇಕಾಯಿ ದುಬಾರಿಯಾಗಿಯೇ ಇದ್ದು ₹ 100ಕ್ಕೆ ಕೆ.ಜಿ ದೊರೆಯುತ್ತಿದೆ.

ಸೊಪ್ಪುಗಳ ಬೆಲೆ ಇಳಿಕೆಯಾಗಿದ್ದು ಕೊತ್ತಂಬರಿ ₹5 ರಿಂದ ₹10 ರೂಪಾಯಿಯಂತೆ ಮಾರಾಟವಾಗುತ್ತಿದ್ದರೆ, ಪಾಲಾಕ್, ದಂಟು ₹5, ಕರಿಬೇವು, ಪುದಿನಾ, ಕೀರೆ ₹10, ಕಿಲ್‌ಕೀರೆ ₹15, ಮೆಂತೆ, ಚಿಕ್ಕಿಸೊಪ್ಪು ₹20– ₹25 ರಂತೆ ಪ್ರತಿ ಕಟ್ಟು ಮಾರಾಟವಾಗುತ್ತಿವೆ.

ಹೂವುಗಳಲ್ಲಿ ಗಣಗಲೆ, ಕನಕಾಂಬರ, ಮಲ್ಲಿಗೆ, ಕಾಕಡ ಬೆಲೆ ಹೆಚ್ಚಳವಾಗಿದೆ. ಕೆಂಪು ಚೆಂಡುಹೂ ಮತ್ತು ಹಳದಿ ಚೆಂಡು ಹೂ ಕೆ.ಜಿ ₹ 60, ಸೇವಂತಿಗೆ, ಬಿಳಿ ಸೇವಂತಿ, ಬಟನ್ಸ್ ₹ 80, ಸಣ್ಣಗುಲಾಬಿ, ಕಲ್ಕತ್ತಾ ಮಲ್ಲಿಗೆ, ಸುಗಂಧರಾಜ, ಗಣಗಲೆ ₹150, ಕಾಕಡ ₹300, ಕನಕಾಂಬರ ₹800, ಮಲ್ಲಿಗೆ ₹1,200 ರಂತೆ ಕೆ.ಜಿ ಮಾರಾಟವಾಗುತ್ತಿವೆ.

ಮಾರು ತುಳಸಿ ₹40, ಕೆಂಪು ಚೆಂಡುಹೂ ಮತ್ತು ಹಳದಿ ಚೆಂಡು ಹೂ, ಸೇವಂತಿಗೆ ₹40, ಗಣಗಲೆ, ಬಿಳಿಸೇವಂತಿಗೆ, ಬಟನ್ಸ್ ₹50, ಕಾಕಡ, ಮರಳೆ ₹60, ಕನಕಾಂಬರ, ಮಲ್ಲಿಗೆ ₹80ರಂತೆ ಮಾರಾಟವಾಗುತ್ತಿವೆ.

ಹಣ್ಣುಗಳಲ್ಲಿ ಪಪ್ಪಾಯ ₹20 ರಿಂದ ₹25, ಕಲ್ಲಂಗಡಿ ₹40, ಪಚ್ಚಬಾಳೆ, ಕರಬೂಜ ₹40, ಏಲಕ್ಕಿಬಾಳೆ, ಅನಾನಸ್ ₹50, ಸೀಬೆ, ಕಿತ್ತಳೆ ₹50 ರಿಂದ ₹60, ಮೂಸಂಬಿ ₹80, ಕಂದ್ರಾಕ್ಷಿ ₹80, ಕಪ್ಪು ದ್ರಾಕ್ಷಿ, ಕಿವಿಹಣ್ಣು(ಬಾಕ್ಸ್)₹100, ದಾಳಿಂಬೆ ₹160 – ₹180, ಡೆಲ್ಲಿ ಸೇಬು ₹200, ಶಿಮ್ಲಾ ಸೇಬು, ದಾಳಿಂಬೆ, ಡ್ರ್ಯಾಗನ್ ಫ್ರೂಟ್ ₹210, ಶರತ್ ದ್ರಾಕ್ಷಿ ₹220 ರಂತೆ ಪ್ರತಿ ಕೆ.ಜಿಗೆ ಮಾರಾಟವಾಗುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.