ಮಂಡ್ಯ: ಮದ್ದೂರು ತಾಲ್ಲೂಕು ಚಂದೂಪುರ ಗ್ರಾಮದಲ್ಲಿ ಬುಧವಾರ ಚಿತ್ರನಟ ಯಶ್ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ವ್ಯಕ್ತಿಯೊಬ್ಬರನ್ನು ಅವರ ಅಭಿಮಾನಿಗಳು, ಸುಮಲತಾ ಬೆಂಬಲಿಗರು ಹಿಡಿದು ಎಳೆದಾಡಿ ನಿಂದಿಸಿದರು.

ಕೆ.ಹೊನ್ನಲಗೆರೆ ಮಾರ್ಗವಾಗಿ ವಿವಿಧ ಹಳ್ಳಿಗಳಲ್ಲಿ ಯಶ್ ಪ್ರಚಾರ ನಡೆಸಿ ಚಂದೂಪುರಕ್ಕೆ ಬಂದರು. ಗ್ರಾಮದ ವೃತ್ತದಲ್ಲಿ ಪಟಾಕಿ ಸಿಡಿಸಿ ಸ್ವಾಗತ ಕೋರಲಾಯಿತು. ಸುಮಲತಾ ಪರ ಭಾರಿ ಸಂಖ್ಯೆಯ ಬೆಂಬಲಿಗರು ಸೇರಿದದ್ದರು. ಯಶ್ ಭಾಷಣ ಆರಂಭಿಸುತ್ತಿದ್ದಂತೆ ಸಚಿವ ಡಿ.ಸಿ.ತಮ್ಮಣ್ಣ ಬೆಂಬಲಿಗ, ಕೆ.ಹಾಗಲಹಳ್ಳಿ ಗ್ರಾಮದ ಸ್ವಾಮಿ ‘ದೇವೇಗೌಡರ ಕುಟುಂಬ ಕುರಿತು ಏನನ್ನೂ ಮಾತನಾಡಬೇಡಿ’ ಎಂದು ಕೂಗಿದರು.

ಇದರಿಂದ ಕುಪಿತಗೊಂಡ ಸುಮಲತಾ ಬೆಂಬಲಿಗರು, ಸ್ವಾಮಿ ಅವರನ್ನು ಸ್ಥಳದಿಂದ ದೂರಕ್ಕೆ ಎಳೆದೊಯ್ದು ಜೋರು ಧ್ವನಿಯಲ್ಲಿ ನಿಂದಿಸಿದರು. ‘ದೇವೇಗೌಡರ ಕುಟುಂಬ ರಾಜಕಾರಣ ನೋಡಿ ಸಾಕಾಗಿದೆ. ಅವರ ಮನೆಯಿಂದ ಹಣ ತಂದು ಅಭಿವೃದ್ಧಿ ಮಾಡಿಲ್ಲ. ಕಬ್ಬಿನ ಬಾಕಿ ಹಣ ಕೊಡಿಸಲು ಸಚಿವ ಡಿ.ಸಿ.ತಮ್ಮಣ್ಣ ಅವರಿಗೆ ಆಗಿಲ್ಲ’ ಎಂದು ಟೀಕಿಸಿದರು.

ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ಡಿ.ಸಿ.ತಮ್ಮಣ್ಣ ಹಾಗೂ ಜೆಡಿಎಸ್ ಪಕ್ಷಕ್ಕೆ ಧಿಕ್ಕಾರ ಕೂಗಿದರು. ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.