ಮೈಸೂರು: ಈ ಬಾರಿಯ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಮೈಸೂರು ವಾರಿಯರ್ಸ್ ತಂಡವು ಸಿಡಿಸುವ ಪ್ರತಿ ಸಿಕ್ಸರ್‌ಗೆ ಪ್ರತಿಯಾಗಿ ಸೊಸೈಟಿ ಫಾರ್ ಪ್ರೊಟೆಕ್ಷನ್ ಆಫ್ ಪ್ಲಾಂಟ್ಸ್ ಅಂಡ್ ಅನಿಮಲ್ಸ್ ಸಂಸ್ಥೆಯು 6 ಗಿಡಗಳನ್ನು ನೆಡಲಿದೆ.

ಇಂತಹದ್ದೊಂದು ಪರಿಸರಸ್ನೇಹಿ ಸಹಭಾಗಿತ್ವದ ಕಾರ್ಯಕ್ರಮದ ಅಂಗವಾಗಿ ನಗರದ ಗಂಗೋತ್ರಿ ಗ್ಲೇಡ್ಸ್ ಮೈದಾನದಲ್ಲಿ ಮಂಗಳವಾರ ಸಸಿ ನೆಡಲಾಯಿತು. ಮೈಸೂರು ವಾರಿಯರ್ಸ್ ಆಟಗಾರರಾದ ಪ್ರಸಿದ್ಧ ಕೃಷ್ಣ, ಸುಚಿತ್, ಮನೋಜ್ ಹಾಗೂ ಕೆ.ಎಸ್.ಭರತ್ ಸಸಿಗಳನ್ನು ನೆಟ್ಟರು.

ಪ್ರಸಿದ್ಧ್ ಕೃಷ್ಣ ಮಾತನಾಡಿ, ‘ಇಂತಹದ್ದೊಂದು ಪರಿಸರ ಕಾಳಜಿ ಕಾರ್ಯಕ್ರಮ ನಿಜಕ್ಕೂ ಅಭಿನಂದನೀಯ. ಪರಿಸರ ಉಳಿಸುವ ಕಾರ್ಯದಲ್ಲಿ ನಾವೆಲ್ಲರೂ ಭಾಗಿಯಾಗಬೇಕು’ ಎಂದರು.

ಸೊಸೈಟಿ ಫಾರ್ ಪ್ರೊಟೆಕ್ಷನ್ ಆಫ್ ಪ್ಲಾಂಟ್ಸ್ ಅಂಡ್ ಅನಿಮಲ್ಸ್ ಸಂಸ್ಥಾಪಕ ಅಧ್ಯಕ್ಷ ಧ್ರುವ ಪಾಟೀಲ ಮಾತನಾಡಿ, ‘ಈ ಬಾರಿಯ ಕೆಪಿಎಲ್‌ನಲ್ಲಿ ಮೈಸೂರು ವಾರಿಯರ್ಸ್‌ನ ಪ್ರತಿ ಸಿಕ್ಸರ್‌ಗೆ ಪ್ರತಿಯಾಗಿ ನಮ್ಮ ಸಂಸ್ಥೆಯು ಆರು ಸಸಿಗಳನ್ನು ನೆಡಲಿದೆ. ವಿಜಯಪುರ ಜಿಲ್ಲೆಯ ಮಮದಾಪುರ ಬಳಿ ಈ ಸಸಿಗಳನ್ನು ನೆಡಲಾಗುವುದು. ಇದರಿಂದ ಪರಿಸರ ರಕ್ಷಣೆ ಆಗಲಿದ್ದು, ಯುವಜನರು ಕೈ ಜೋಡಿಸಬೇಕು’ ಎಂದು ಮನವಿ ಮಾಡಿದರು.

ಸೊಸೈಟಿ ಪದಾಧಿಕಾರಿಗಳಾದ ಎಸ್.ಎಸ್. ಕಿಶನ್, ಶಿಹಾಬ್, ಮುರುಗೇಶ್ ಪಟ್ಟಣಶೆಟ್ಟಿ, ಭುವನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.