ಮೈಸೂರು: ಚಂದ್ರಗ್ರಹಣದ ಪ್ರಯುಕ್ತ ಜುಲೈ 16ರ ಮಧ್ಯಾಹ್ನದಿಂದ ಹಾಗೂ 17ರ ನಸುಕಿನವರೆಗೆ ರಾಜ್ಯದ ಕೆಲ ದೇಗುಲಗಳ ಬಾಗಿಲು ಮುಚ್ಚಿದ್ದರೆ, ಮೈಸೂರಿನ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲದಲ್ಲಿ ವಿಶೇಷ ಪೂಜೆ ನಡೆಯಲಿದೆ. ಆದರೆ, ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ.

‘ಮಂಗಳವಾರ ದೇವರ ದರ್ಶನ ಸಮಯದಲ್ಲಿ ವ್ಯತ್ಯಯ ಇರುವುದಿಲ್ಲ. ಆದರೆ, ಮಧ್ಯಾಹ್ನ 3 ಗಂಟೆ ಬಳಿಕ ಬೆಟ್ಟದಲ್ಲಿ ದಾಸೋಹ ಇರುವುದಿಲ್ಲ. ರಾತ್ರಿ ಎಂದಿನಂತೆ 9 ಗಂಟೆಗೆ ಬಾಗಿಲು ಮುಚ್ಚುತ್ತೇವೆ. ಬುಧವಾರ ನಸುಕಿನ 3 ಗಂಟೆಯಿಂದ 4.45ರವರೆಗೆ ಪೂಜೆ ನಡೆಯಲಿದೆ. ಗ್ರಹಣ ಸ್ಪರ್ಶ ಕಾಲದಿಂದ ಮೋಕ್ಷದವರೆಗೆ ಜಪ-ತಪ, ಮಂತ್ರ ಪಠಣ ನಡೆಯಲಿವೆ. ಬಳಿಕ ದೇಗುಲ ವನ್ನು ಶುದ್ಧಿಗೊಳಿಸಿ ಬೆಳಿಗ್ಗೆ 8 ಗಂಟೆಯಿಂದ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು’ ಎಂದು ಚಾಮುಂಡೇಶ್ವರಿ ದೇಗುಲದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ‘ಪ್ರಜಾವಾಣಿ’ಗೆ ತಿಳಿಸಿದರು.

ನಂಜನಗೂಡಿನ ಶ್ರೀಕಂಠೇಶ್ವರ ದೇಗುಲದಲ್ಲಿ ಮಂಗಳವಾರ ನಸುಕಿನ 4.30ರಿಂದ ರಾತ್ರಿ 9ವರೆಗೆ ಎಂದಿನಂತೆ ಪೂಜೆ ಪುರಸ್ಕಾರಗಳು ನಡೆಯಲಿವೆ. ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಇರಲಿದೆ.

‘ಗುರು ಪೂರ್ಣಿಮೆ ಕಾರಣ ಮಂಗಳವಾರ ವಿಶೇಷ ಪೂಜೆ ನಡೆಯಲಿದೆ. ಎಂದಿನಂತೆ ರಾತ್ರಿ ಸಮಯದಲ್ಲಿ ದೇಗುಲ ಮುಚ್ಚಿರುವುದರಿಂದ ಗ್ರಹಣದ ವೇಳೆ ಯಾವುದೇ ಪೂಜೆ ಪುನಸ್ಕಾರ ನಡೆಯುವುದಿಲ್ಲ. ಬುಧವಾರ ಬೆಳಿಗ್ಗೆ 6 ಗಂಟೆಗೆ ದೇಗುಲ ಶುದ್ಧಿಗೊಳಿಸಿ ಪೂಜಾ ಕೈಂಕರ್ಯ ನೆರವೇರಿಸಲಾಗುವುದು. ದರ್ಶನಕ್ಕೂ ಅವಕಾಶವಿರಲಿದೆ’ ಎಂದು ನಂಜನಗೂಡಿನ ಶ್ರೀಕಂಠೇಶ್ವರ ದೇಗುಲದ ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್ ಹೇಳಿದರು.

ಚಂದ್ರಗ್ರಹಣ ಮಂಗಳವಾರ ರಾತ್ರಿ 1.31ರಿಂದ 4.30ರವರೆಗೆ ಇರಲಿದೆ.

ಗ್ರಹಣ ಕಾಲದಲ್ಲೇ ಪೂಜೆ ನಡೆಯುವುದು ಚಾಮುಂಡಿಬೆಟ್ಟದ ವಿಶೇಷ. ಅಮ್ಮನವರಿಗೆ ಈ ಸಂದರ್ಭದಲ್ಲಿ ಅಭಿಷೇಕ ಕೂಡ ನೆರವೇರಿಸುತ್ತೇವೆ
-ಶಶಿಶೇಖರ್ ದೀಕ್ಷಿತ್, ಪ್ರಧಾನ ಅರ್ಚಕ, ಚಾಮುಂಡಿಬೆಟ್ಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.