ಮೈಸೂರು: ಪ್ರಧಾನಿ ನರೇಂದ್ರ ಮೋದಿ ಕರೆಯ ಮೇರೆಗೆ ‘ಸ್ವಚ್ಛತೆಯೇ ಸೇವೆ ಅಭಿಯಾನ’ದ ಭಾಗವಾಗಿ ನಗರದ ಅಪೋಲೋ ಬಿಜಿಎಸ್ ಆಸ್ಪತ್ರೆಯಿಂದ ಸ್ವಚ್ಛತಾ ಕಾರ್ಯಕ್ರಮವನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು. ಅಲ್ಲಿನ ಸಿಬ್ಬಂದಿ ಶ್ರಮದಾನ ಮಾಡಿದರು.

ಮೇಯರ್ ಶಿವಕುಮಾರ್ ಚಾಲನೆ ನೀಡಿದರು.

ಆಸ್ಪತ್ರೆಯ ಯೂನಿಟ್ ಹೆಡ್ ಎನ್.ಜಿ ಭರತೀಶ ರೆಡ್ಡಿ ಮಾತನಾಡಿ, ‘ಶುಚಿತ್ವವು ಕೇವಲ ಪರಿಕಲ್ಪನೆಯಲ್ಲ; ಇದು ಜೀವನದ ವಿಧಾನ. ರೋಗಿಗಳು, ಭೇಟಿ ನೀಡುವವರು ಮತ್ತು ಜನ ಸಮುದಾಯದ ಯೋಗಕ್ಷೇಮಕ್ಕಾಗಿ ಸ್ವಚ್ಛ ಪರಿಸರ ಕಾಪಾಡುವುದು ಮತ್ತು ಅದಕ್ಕೆ ಕೊಡಬೇಕಾದ ಪ್ರಾಮುಖ್ಯತೆಯು ನಮ್ಮ ಗಮನದಲ್ಲಿದೆ. ಆಸ್ಪತ್ರೆ ಮತ್ತು ಎಲ್ಲಾ ವಿಭಾಗಗಳೂ ಸ್ವಚ್ಛ ಭಾರತ ಅಭಿಯಾನದಲ್ಲಿ ಮನಪೂರ್ವಕವಾಗಿ ಭಾಗವಹಿಸುತ್ತಿವೆ’ ಎಂದರು.

‘ನಮ್ಮ ಸಿಬ್ಬಂದಿ, ರೋಗಿಗಳು ಮತ್ತು ಇಲ್ಲಿನ ಸಮುದಾಯಕ್ಕೆ ಸ್ವಚ್ಛತೆಯ ಮಹತ್ವದ ಬಗ್ಗೆ ಅರಿವು ಮೂಡಿಸಲು ಅಭಿಯಾನ ಮತ್ತು ಕಾರ್ಯಾಗಾರಗಳನ್ನು ನಡೆಸುತ್ತಾ ಬಂದಿದ್ದೇವೆ’ ಎಂದು ಹೇಳಿದರು.

‘ಪರಿಸರ ಮಾಲಿನ್ಯ ತಡೆಯುವ ಮಾರ್ಗಸೂಚಿಗಳಿಗೆ ಅನುಗುಣವಾಗಿ ವೈದ್ಯಕೀಯ ಮತ್ತು ವೈದ್ಯಕೀಯೇತರ ತ್ಯಾಜ್ಯವನ್ನು ಸೂಕ್ತವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ನಾವು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದ್ದೇವೆ. ಅಲ್ಲದೇ, ಉತ್ತಮ ತ್ಯಾಜ್ಯ ನಿರ್ವಹಣೆಯ ವಿಧಾನಗಳನ್ನೂ ರೂಢಿಸಿಕೊಂಡಿದ್ದೇವೆ’ ಎಂದರು.

ವೈದ್ಯರು, ನರ್ಸ್ಗಳು, ವಿಭಾಗದ ಮುಖ್ಯಸ್ಥರು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು. ಆಸ್ಪತ್ರೆಯ ಸುತ್ತಮುತ್ತಲಿನ ರಸ್ತೆ ಮೊದಲಾದ ಕಡೆಗಳಲ್ಲೂ ಸ್ವಚ್ಛತಾ ಕಾರ್ಯ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.