ಮೈಸೂರು: ‘ಎಲ್ಲ ಕ್ಷೇತ್ರಗಳಂತೆಯೇ ರಾಜಕಾರಣದಲ್ಲೂ ಗುಣಮಟ್ಟ ಕುಸಿದಿದೆ’ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಎಸ್.ಹೊರಟ್ಟಿ ವಿಷಾದ ವ್ಯಕ್ತಪಡಿಸಿದರು.

ಇಲ್ಲಿನ ಊಟಿ ರಸ್ತೆಯಲ್ಲಿರುವ ಜೆಎಸ್ಎಸ್ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜಿನಲ್ಲಿ ಇತಿಹಾಸ, ರಾಜ್ಯಶಾಸ್ತ್ರ ಹಾಗೂ ಪತ್ರಿಕೋದ್ಯಮ ವಿಭಾಗಗಳು ಮತ್ತು ರಾಜ್ಯ ಪತ್ರಾಗಾರ ಇಲಾಖೆಯ ವಿಭಾಗೀಯ ಕಚೇರಿ ಸಹಯೋಗದಲ್ಲಿ ಆಯೋಜಿಸಿದ್ದ ‘ಮೈಸೂರು ಪ್ರಜಾಪ್ರತಿನಿಧಿ ಸಭೆ: ಚಾರಿತ್ರಿಕ ಅವಲೋಕನ’ ಕುರಿತ ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರಸಂಕಿರಣವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಹಣ ಕೊಟ್ಟು ಮತ ಕೇಳುವವರು ಹಾಗೂ ಹಣ ಪಡೆದು ಮತ ಹಾಕುವವರು ಇರುವವರೆಗೂ ಪ್ರಜಾಪ್ರಭುತ್ವ ಸುಭದ್ರವಾಗಿರುತ್ತದೆಯೇ? ಪ್ರತಿ ಪಕ್ಷದಲ್ಲೂ ಜಾತಿ ನೋಡುತ್ತಾರೆ, ಟಿಕೆಟ್ ಕೊಡುವಾಗ ಹಣವೆಷ್ಟಿದೆ; ಎಷ್ಟು ಕೋಟಿ ಖರ್ಚು ಮಾಡಬಲ್ಲ ಎಂಬುದನ್ನೇ ಪ್ರಮುಖವಾಗಿ ಗಮನಿಸುವುದು ನಡೆಯುತ್ತಿದೆ’ ಎಂದರು.

‘ವಿಧಾನಮಂಡಲ ಅಧಿವೇಶನದಲ್ಲಿ ಬಹಳಷ್ಟು ಶಾಸಕರು–ವಿಧಾನಪರಿಷತ್ ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳುವುದಿಲ್ಲ. ಪ್ರಶ್ನೆ ಕೇಳುತ್ತಾರೆ, ಉತ್ತರ ತೆಗೆದುಕೊಂಡು ಹೋಗಿ ಬಿಡುತ್ತಾರೆ. ಚರ್ಚೆಯಲ್ಲಿ ಸಂಪೂರ್ಣವಾಗಿ ಭಾಗವಹಿಸುವುದಿಲ್ಲ. ಇದರಿಂದ ಬಹಳ ನೋವಾಗುತ್ತದೆ’ ಎಂದು ತಿಳಿಸಿದರು.

ಒಳ್ಳೆಯವರು ಬರಬೇಕು:

‘ಪ್ರಜಾಪ್ರಭುತ್ವದಲ್ಲಿ ಒಳ್ಳೆಯದೂ ಆಗುತ್ತಿದೆ. ಕೆಟ್ಟದ್ದೂ ಆಗುತ್ತಿದೆ. ಪ್ರಜ್ಞಾವಂತರು, ಯುವಜನರು ರಾಜಕೀಯ ಕ್ಷೇತ್ರದಿಂದ ಹಿಂದೆ ಸರಿಯಬಾರದು. ರಾಜಕಾರಣ ಹಾಳಾಗಿದೆ ಎಂದು ಎಲ್ಲರೂ ದೂರಹೋದರೆ ಮುಂದೇನು? ಆದ್ದರಿಂದ ಒಳ್ಳೆಯ ಜನರು ರಾಜಕಾರಣಕ್ಕೆ ಬರಬೇಕು. ಶಾಸನಸಭೆಗಳನ್ನು ಪ್ರವೇಶಿಸಬೇಕು. ಸರ್ಕಾರಿ ನೌಕರಿ ಪಡೆದುಕೊಂಡರೆ ಸಾಕೆಂದು ಭಾವಿಸದೇ ಅಥವಾ ಕೆಲಸಕ್ಕಷ್ಟೆ ಸೀಮಿತವಾಗಬಾರದು’ ಎಂದರು.

‘ಮೈಸೂರು ಮಹಾರಾಜರು ವೈಶಿಷ್ಟ್ಯ ಮೆರೆದು ಪ್ರಜಾಪ್ರತಿನಿಧಿ ಸಭೆಯನ್ನು ಆರಂಭಿಸಿದರು. ಜನರ ಅಹವಾಲುಗಳನ್ನು ಕೇಳುವ ಕೆಲಸ ಮಾಡಿದರು. ವಿಧಾನಪರಿಷತ್ ಪರಿಕಲ್ಪನೆ ಹುಟ್ಟಿದ್ದೇ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾರಣದಿಂದ’ ಎಂದು ಸ್ಮರಿಸಿದರು.

ಪತ್ರಾಗಾರ ಇಲಾಖೆಯ ನಿರ್ದೇಶಕ ಗವಿಸಿದ್ದಯ್ಯ ಮಾತನಾಡಿ, ‘ಮೈಸೂರು ಸರ್ಕಾರದ ಆಡಳಿತದ 39 ಇಲಾಖೆಗಳ 2 ಲಕ್ಷಕ್ಕೂ ಹೆಚ್ಚು ಮೂಲ ದಾಖಲೆ ಸಂರಕ್ಷಿಸಿ ಅಧ್ಯಯನಶೀಲರಿಗೆ ಒದಗಿಸುವ ಕೆಲಸವನ್ನು ಇಲಾಖೆಯಿಂದ ಮಾಡಲಾಗುತ್ತಿದೆ. ಲಭ್ಯ ದಾಖಲೆಗಳ ಡಿಜಿಟಲೀಕರಣ ನಡೆಯುತ್ತಿದೆ. ಸದ್ಯ 1.08 ಕೋಟಿ ಪುಟಗಳಷ್ಟು ಮಾಹಿತಿ ಇಲಾಖೆಯ ಜಾಲತಾಣದಲ್ಲಿ ಲಭ್ಯವಾಗುತ್ತಿವೆ’ ಎಂದು ತಿಳಿಸಿದರು.

ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ಹಾಗೂ ಪ್ರಾಂಶುಪಾಲ ಎಂ.ಪ್ರಭು ಪಾಲ್ಗೊಂಡಿದ್ದರು.

ನಂತರ, ಸಂಪನ್ಮೂಲ ವ್ಯಕ್ತಿಗಳಿಂದ ಪ್ರಬಂಧಗಳ ಮಂಡನೆ ನಡೆಯಿತು.

ಉದಾತ್ತ ಗುರಿ ಇರಲಿ: ವಿದ್ಯಾರ್ಥಿಗಳಿಗೆ ಸಲಹೆ

‘ಜೀವನದಲ್ಲಿ ಉದಾತ್ತವಾದ ಗುರಿ ಇಟ್ಟುಕೊಂಡರೆ ಅದನ್ನು ಸಾಧಿಸಬಹುದು. ಅದಕ್ಕೆ ನಾನೇ ಉದಾಹರಣೆ. ಸಾಮಾನ್ಯ ಕುಟುಂಬದಿಂದ ಬಂದು, ಖಾಸಗಿ ಶಾಲಾ ಶಿಕ್ಷಕನಾದೆ. ನಂತರ ರಾಜಕೀಯ ಪ್ರವೇಶಿಸಿ, ಎಂಟು ಚುನಾವಣೆಗಳಲ್ಲಿ ಗೆದ್ದಿದ್ದೇನೆ. ಈಗ ಸಭಾಪತಿಯಾಗಿದ್ದೇನೆ’ ಎಂದು ಹೊರಟ್ಟಿ ಹೇಳಿದರು.

‘ಸ್ವಾಮೀಜಿಗಳು ಮಠದಲ್ಲಷ್ಟೇ ಇದ್ದರೆ ಅದೇನು ದೊಡ್ಡ ಕೆಲಸವೇನಲ್ಲ. ಶಿಕ್ಷಣ ಸಂಸ್ಥೆ ನಡೆಸಿ, ಮಕ್ಕಳಿಗೆ ವಿದ್ಯಾ ದಾನ ಮಾಡುತ್ತಿರುವುದು ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಕಾರ್ಯ ಶ್ಲಾಘನೀಯವಾದುದು’ ಎಂದರು.

‘ವಿದ್ಯಾರ್ಥಿಗಳು ಗುರು, ಹಿರಿಯರನ್ನು ಗೌರವಿಸಬೇಕು. ಶಿಸ್ತಿಗೆ ಹೆಚ್ಚಿನ ಮಹತ್ವವನ್ನು ಕೊಡಬೇಕು. ಸಮಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಶಿಸ್ತೆಂಬ ಎಣ್ಣೆ ಇಲ್ಲದಿದ್ದರೆ ಜೀವನದ ಹಣತೆ ಬೆಳಗುವುದಿಲ್ಲ ಎಂಬುದನ್ನು ಮರೆಯಬಾರದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.